ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಬ್ರಿಟನ್ ಮೂಲದ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಡಿಫೆಂಡರ್ ಆಫ್-ರೋಡ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಡಿಫೆಂಡರ್ ಎಸ್‌ಯುವಿಯನ್ನು ಇದೇ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಇತ್ತೀಚಿಗೆ ನಾವು ಈ ಎಸ್‌ಯುವಿಯ ಫಸ್ಟ್ ಲುಕ್ ಅನ್ನು ವೀಕ್ಷಿಸಿದೆವು. ಹೊಸ ಡಿಫೆಂಡರ್ ಎಸ್‌ಯುವಿಯು ಯಾವುದೇ ರಸ್ತೆಗಳಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‌ಯುವಿಯನ್ನು ಡಿಫೆಂಡರ್ 90 ಹಾಗೂ ಡಿಫೆಂಡರ್ 110 ಎಂಬ ಎರಡು ಮಾದರಿಗಳಲ್ಲಿ ಹಾಗೂ ತಲಾ ಐದು ಟ್ರಿಮ್‌ಗಳಲ್ಲಿ ಮಾರಾಟ ಮಾಡಲಾಗುವುದು.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಡಿಫೆಂಡರ್ 90 ಮೂರು ಡೋರುಗಳನ್ನು ಹೊಂದಿದ್ದರೆ, ಡಿಫೆಂಡರ್ 110 ಐದು ಡೋರುಗಳನ್ನು ಹೊಂದಿದೆ. ಲ್ಯಾಂಡ್ ರೋವರ್ ಕಂಪನಿಯು ಮೊದಲು ಡಿಫೆಂಡರ್ 110 ಎಸ್‌ಯುವಿಯನ್ನು ಬಿಡುಗಡೆಗೊಳಿಸಿ ನಂತರ ಡಿಫೆಂಡರ್ 90ಯನ್ನು ಬಿಡುಗಡೆಗೊಳಿಸಲಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಶೋರೂಂನಲ್ಲಿ ಡಿಫೆಂಡರ್ ಎಸ್ಇ ಹಾಗೂ ಡಿಫೆಂಡರ್ ಫಸ್ಟ್ ಎಡಿಷನ್ ಮಾದರಿಗಳನ್ನು ವೀಕ್ಷಿಸಿದೆವು. ಕಪ್ಪು ಬಣ್ಣದ ಬ್ಯಾಡ್ಜ್‌ಗಳನ್ನು ಹೊಂದಿದ್ದ ಪಂಗಿಯಾ ಗ್ರೀನ್ ಬಣ್ಣದಲ್ಲಿದ್ದ ಫಸ್ಟ್ ಎಡಿಷನ್ ನಮ್ಮನ್ನು ಹೆಚ್ಚು ಆಕರ್ಷಿಸಿತು. ಹೊಸ ಡಿಫೆಂಡರ್‌ನ ಫಸ್ಟ್ ಲುಕ್ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಡಿಸೈನ್ ಹಾಗೂ ಸ್ಟೈಲ್

ಮೊದಲ ನೋಟದಲ್ಲಿಯೇ ದೊಡ್ಡ ಗಾತ್ರದ ಡಿಫೆಂಡರ್ 110 ನಮ್ಮ ಗಮನ ಸೆಳೆಯುತ್ತದೆ. ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್‌ಗಳನ್ನು ಹೊಂದಿರುವ ಎಲ್‌ಇಡಿ ಹೆಡ್‌ಲೈಟ್, ಟಾಪ್-ಎಂಡ್ ಟ್ರಿಮ್ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್, ಬಂಪರ್ ಕೆಳಗೆ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲೈಟ್ ಗಳನ್ನು ನೀಡಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಈ ಎಸ್‌ಯುವಿಯು ದೊಡ್ಡ ಬಂಪರ್ ಅನ್ನು ಹೊಂದಿದೆ. ಬಾನೆಟ್‌ನಲ್ಲಿರುವ ಲೈನ್ ಹಾಗೂ ಕ್ರೀಸ್ ಗಳು ಎಸ್‌ಯುವಿಯ ಆಕರ್ಷಣೆಯನ್ನು ಹೆಚ್ಚಿಸಿವೆ. ಫಸ್ಟ್ ಎಡಿಷನ್ ಎಸ್‌ಯುವಿಯ ಬಾನೆಟ್‌ನ ಮಧ್ಯಭಾಗದಲ್ಲಿ ಕಪ್ಪು ಬಣ್ಣದ ಡಿಫೆಂಡರ್ ಬ್ಯಾಡ್ಜ್ ಅಳವಡಿಸಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಡಿಫೆಂಡರ್‌ನ ಎಕ್ಸ್ ಟಿರಿಯರ್ ನಲ್ಲಿ 360 ಡಿಗ್ರಿಯ ಆರು ಕ್ಯಾಮೆರಾ, ಸೆನ್ಸಾರ್ ಗಳಿವೆ. ಐಆರ್ ವಿಎಂ ಹಿಂದೆ ಒಂದು ಕ್ಯಾಮೆರಾ ಇದ್ದು, ಈ ಕ್ಯಾಮರಾ ಆಕ್ಟೀವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯ ನಿರ್ವಹಿಸಿದರೆ, ಐಆರ್ ವಿಎಂನಲ್ಲಿ (ಸ್ವಿಚ್ ಮೂಲಕ) ವೀಡಿಯೊವನ್ನು ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿಯೂ ಕ್ಯಾಮೆರಾ ನೀಡಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಈ ಎಸ್‌ಯುವಿಯಲ್ಲಿ 20 ಇಂಚಿನ ದೊಡ್ಡ ಗಾತ್ರ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಡಿಫೆಂಡರ್ ಎಸ್‌ಯುವಿಯು 218 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಎಸ್‌ಯುವಿಯ ಹಿಂಭಾಗದಲ್ಲಿ ಹೊಸ ವಿನ್ಯಾಸದ ಟೇಲ್‌ಲೈಟ್‌ಗಳಿವೆ. ಎಸ್‌ಯುವಿಯ ಹಿಂಭಾಗದಲ್ಲಿ ಬ್ಯಾಡ್ಜ್‌ ಹಾಗೂ ಮಾದರಿಯ ಹೆಸರುಗಳನ್ನು ಬರೆಯಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಇಂಟಿರಿಯರ್ ಹಾಗೂ ಫೀಚರ್ ಗಳು

ಈ ಎಸ್‌ಯುವಿಯು ವಿಶಾಲವಾದ ಕ್ಯಾಬಿನ್, ದೊಡ್ಡ ಪನೋರಾಮಿಕ್ ಸನ್‌ರೂಫ್, ಸೈಡ್ ಆಲ್ಪೈನ್ ಲೈಟ್ ವಿಂಡೋಗಳನ್ನು ಹೊಂದಿದೆ. ಡಿಫೆಂಡರ್ ಎಸ್‌ಯುವಿ ಮೂರು ರೀತಿಯ ಇಂಟಿರಿಯರ್ ಬಣ್ಣಗಳನ್ನು ಹೊಂದಿದೆ. ಪ್ಯಾಂಗಿಯಾ ಗ್ರೀನ್ ಬಣ್ಣವು ಕಪ್ಪಾದ ಇಂಟಿರಿಯರ್ ಹೊಂದಿದ್ದರೆ, ಮತ್ತೊಂದು ಲೈಟ್ ಕ್ರೀಮ್ ಬಣ್ಣದ ಇಂಟಿರಿಯರ್ ಅನ್ನು ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಡಿಫೆಂಡರ್ ಎಸ್‌ಯುವಿಯು ಒಟ್ಟು 14 ಯುಎಸ್‌ಬಿ ಹಾಗೂ ಚಾರ್ಜಿಂಗ್ ಸಾಕೆಟ್‌ಗಳನ್ನು ಹೊಂದಿದೆ. ಬೂಟ್‌ನಲ್ಲಿರುವ 230 ವೋಲ್ಟ್ ನ ಚಾರ್ಜರ್ ಮೂಲಕ ಲ್ಯಾಪ್‌ಟಾಪ್‌, ಸ್ಪೀಕರ್‌ ಸೇರಿದಂತೆ ಗೃಹೋಪಯೋಗಿ ಉಪಕರಣಗಳನ್ನು ಚಾರ್ಜ್ ಮಾಡಬಹುದು.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಸ್ಟೀಯರಿಂಗ್ ವ್ಹೀಲ್ ಎಲೆಕ್ಟ್ರಾನಿಕ್ ಅಡ್ಜಸ್ಟಬಲ್ ಆಗಿದ್ದು ಆಟೋ ಫೀಚರ್ ಅನ್ನು ಹೊಂದಿದೆ. ಈ ಫೀಚರ್ ಚಾಲಕನ ಭುಜಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಈ ಎಸ್‌ಯುವಿಯು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್, ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಮ್, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್-ಸೆನ್ಸಿಂಗ್ ಹಾಗೂ ಡ್ರೈವರ್ ಕಂಡಿಷನ್ ಮಾನಿಟರಿಂಗ್ ಫೀಚರ್ ಗಳನ್ನು ಹೊಂದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಇನ್ನು ಸುರಕ್ಷತೆಗಾಗಿ ಏರ್‌ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಗಳನ್ನು ನೀಡಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಡಿಫೆಂಡರ್ ಎಸ್‌ಯುವಿಯಲ್ಲಿ ಲ್ಯಾಂಡ್ ರೋವರ್ ಕಂಪನಿಯ ಇತ್ತೀಚಿನ ಟೆರೈನ್ ರೆಸ್ಪಾನ್ಸ್ 2 ಫೀಚರ್ ಅಳವಡಿಸಲಾಗಿದೆ. ಇದರಿಂದಾಗಿ ಗ್ರಾಹಕರು ಜನರಲ್ ಡ್ರೈವಿಂಗ್, ಗ್ರಾಸ್, ಗ್ರಾವೆಲ್, ಸ್ನೋ, ಮಡ್, ರುಟ್ಸ್, ಸ್ಯಾಂಡ್, ರಾಕ್ ಕ್ರಾಲ್ ಹಾಗೂ ವೇಡ್ ಮೋಡ್ ಗಳನ್ನು ಪಡೆಯಲು ಸಾಧ್ಯವಾಗಲಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಎಂಜಿನ್

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಯಲ್ಲಿ 2.0-ಲೀಟರಿನ ನಾಲ್ಕು ಸಿಲಿಂಡರ್, ಟರ್ಬೊ-ಪೆಟ್ರೋಲ್ ಪಿ 300 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 300 ಬಿಹೆಚ್ ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಎಂಟು-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಕಂಪನಿಯು ಈ ಎಸ್‌ಯುವಿಯ ಡೀಸೆಲ್ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಬೆಲೆ ಹಾಗೂ ಬುಕ್ಕಿಂಗ್

ಲ್ಯಾಂಡ್ ರೋವರ್ ಈ ವರ್ಷದ ಆರಂಭದಲ್ಲಿಯೇ ಡಿಫೆಂಡರ್ ಎಸ್‌ಯುವಿಯ ಬೆಲೆಗಳನ್ನು ಘೋಷಿಸಿ ಬುಕಿಂಗ್ ಗಳನ್ನು ಆರಂಭಿಸಿದೆ. ಲ್ಯಾಂಡ್ ರೋವರ್ ಡಿಫೆಂಡರ್ 90 ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.69.99 ಲಕ್ಷದಿಂದ 81.30 ಲಕ್ಷಗಳಾದರೆ, ಐದು ಡೋರುಗಳ ಡಿಫೆಂಡರ್ 110 ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.76.57 ಲಕ್ಷದಿಂದ 86.27 ಲಕ್ಷಗಳಾಗಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರಿವ್ಯೂ: ಭಾರತಕ್ಕೂ ಲಗ್ಗೆಯಿಟ್ಟ ಐಕಾನಿಕ್ ಆಫ್-ರೋಡ್ ಎಸ್‌ಯುವಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಯಾವುದೇ ರಸ್ತೆಯಲ್ಲಿಯೂ ಸರಾಗವಾಗಿ ಚಲಿಸಬಲ್ಲದು. ಡಿಫೆಂಡರ್ 90 ಮಾದರಿಯು ಡಿಫೆಂಡರ್ 110 ಮಾದರಿಗಿಂತ ಚಿಕ್ಕದಾಗಿದ್ದರೂ ದೊಡ್ಡ ಗಾತ್ರವನ್ನೇ ಹೊಂದಿದೆ. ಹೆಚ್ಚು ಹಣ ತೆತ್ತು ಆರಾಮದಾಯಕ ಆಫ್ ರೋಡ್ ಸವಾರಿ ಬಯಸುವವರು ಈ ಎಸ್‌ಯುವಿಯನ್ನು ಖರೀದಿಸಬಹುದು.

Most Read Articles

Kannada
English summary
Land Rover Defender first look review. Read in Kannada.
Story first published: Thursday, October 15, 2020, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X