ಒಂದು ಬಾರಿ ಚಾರ್ಜ್ ಆದರೆ 800 ಕಿ.ಮೀ ಚಲಿಸುತ್ತದೆ ಈ ಎಲೆಕ್ಟ್ರಿಕ್ ಕಾರು

ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ಅಪ್ ಕಂಪನಿಯಾದ ಲೂಸಿಡ್ ಮೋಟಾರ್ಸ್ ತನ್ನ ಮೊದಲ ಕಾರ್ ಆದ ಲುಸಿಡ್ ಏರ್ ಸೆಡಾನ್ ಕಾರು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 500 ಮೈಲಿ ಚಲಿಸುತ್ತದೆ ಎಂದು ಹೇಳಿಕೊಂಡಿದೆ. ಲುಸಿಡ್ ಏರ್ ಸೆಡಾನ್ ಕಾರ್ ಅನ್ನು 2021ರಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

ಒಂದು ಬಾರಿ ಚಾರ್ಜ್ ಆದರೆ 800 ಕಿ.ಮೀ ಚಲಿಸುತ್ತದೆ ಈ ಎಲೆಕ್ಟ್ರಿಕ್ ಕಾರು

ಈ ಕಾರು ಪೂರ್ತಿಯಾಗಿ ಚಾರ್ಜ್‌ ಆದ ನಂತರ 517 ಮೈಲಿ ಅಂದರೆ 832 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಲೂಸಿಡ್ ಮೋಟಾರ್ಸ್ ಪರೀಕ್ಷೆಯ ನಂತರ ಹೇಳಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಲೂಸಿಡ್ ಮೋಟಾರ್ಸ್ ಸಿಇಒ ಪೀಟರ್ ರಾವ್ಲಿನ್ಸನ್ ರವರು ಈ ಕಾರಿನ ಬೆಲೆ ಆರಂಭದಲ್ಲಿ 100,000 ಡಾಲರ್ ಗಳಾಗಿರುತ್ತದೆ. ನಂತರದ ದಿನಗಳಲ್ಲಿ ಕಡಿಮೆ ಬೆಲೆಯ ಮಾದರಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು. ವಿಶ್ವವಿಖ್ಯಾತ ಟೆಸ್ಲಾ ಕಂಪನಿಯ ಮಾಡೆಲ್ ಎಸ್ ಸೆಡಾನ್ ಕಾರಿನ ಬೆಲೆ 75,000 ಡಾಲರ್ ಗಳಿಂದ ಆರಂಭವಾಗುತ್ತದೆ.

ಒಂದು ಬಾರಿ ಚಾರ್ಜ್ ಆದರೆ 800 ಕಿ.ಮೀ ಚಲಿಸುತ್ತದೆ ಈ ಎಲೆಕ್ಟ್ರಿಕ್ ಕಾರು

ಟೆಸ್ಲಾ ಕಂಪನಿಯು ಜೂನ್‌ ತಿಂಗಳಿನಲ್ಲಿ ತನ್ನ ಹೊಸ ಕಾರು ಮಾಡೆಲ್ ಎಸ್ ಲಾಂಗ್ ರೇಂಜ್ ಪ್ಲಸ್ 400 ಮೈಲಿಗಿಂತಲೂ ಹೆಚ್ಚು ದೂರ ಚಲಿಸುತ್ತದೆ. ಇಷ್ಟು ಮೈಲೇಜ್ ನೀಡುವ ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರು ಎಂಬ ಬಗ್ಗೆ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿದೆ ಎಂದು ಹೇಳಿಕೊಂಡಿತ್ತು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಒಂದು ಬಾರಿ ಚಾರ್ಜ್ ಆದರೆ 800 ಕಿ.ಮೀ ಚಲಿಸುತ್ತದೆ ಈ ಎಲೆಕ್ಟ್ರಿಕ್ ಕಾರು

ಪೀಟರ್ ರಾವ್ಲಿನ್ಸನ್ ರವರು ಟೆಸ್ಲಾ ಮಾಡೆಲ್ ಎಸ್‌ ಕಾರ್ ಅನ್ನು ಅಭಿವೃದ್ಧಿ ಪಡಿಸಿರುವ ಮುಖ್ಯ ಎಂಜಿನಿಯರ್ ಆಗಿದ್ದು, ಲುಸಿಡ್ ಏರ್ ಒನ್‌ನ ವಿನ್ಯಾಸವು ಮಾಡೆಲ್ ಎಸ್ ಕಾರಿನಿಂದ ಸ್ಫೂರ್ತಿ ಪಡೆದಿದ್ದು, ಅದೇ ಪ್ಲಾಟ್ ಫಾರಂನಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

ಒಂದು ಬಾರಿ ಚಾರ್ಜ್ ಆದರೆ 800 ಕಿ.ಮೀ ಚಲಿಸುತ್ತದೆ ಈ ಎಲೆಕ್ಟ್ರಿಕ್ ಕಾರು

ಲುಸಿಡ್ ಉತ್ಪಾದನಾ ಘಟಕವು ಕ್ಯಾಲಿಫೋರ್ನಿಯಾದ ನೆವಾರ್ಕ್‌ನ ಸಿಲಿಕಾನ್ ವ್ಯಾಲಿಯಲ್ಲಿದೆ. ಈ ಘಟಕವು ಟೆಸ್ಲಾದ ಫ್ರೀಮಾಂಟ್ ಉತ್ಪಾದನಾ ಘಟಕಕ್ಕೆ ಹತ್ತಿರದಲ್ಲಿದೆ. ಲುಸಿಡ್ ಕಂಪನಿಯನ್ನು 2007ರಲ್ಲಿ ಟೆಸ್ಲಾ ಕಂಪನಿಯ ಮಾಜಿ ಸಿಇಒ ಬರ್ನಾರ್ಡ್ ತ್ಸೆ ಹಾಗೂ ಉದ್ಯಮಿ ಸ್ಯಾಮ್ ವೆಂಗ್ ಅವರು ಅಟಿವಾ ಇಂಕ್ ಎಂಬ ಹೆಸರಿನಲ್ಲಿ ಸ್ಥಾಪಿಸಿದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಒಂದು ಬಾರಿ ಚಾರ್ಜ್ ಆದರೆ 800 ಕಿ.ಮೀ ಚಲಿಸುತ್ತದೆ ಈ ಎಲೆಕ್ಟ್ರಿಕ್ ಕಾರು

ಲುಸಿಡ್‌ ಕಂಪನಿಗೆ ಆರಂಭದಲ್ಲಿ ಚೀನಾ ಹಾಗೂ ಸಿಲಿಕಾನ್ ವ್ಯಾಲಿಯ ಹೂಡಿಕೆದಾರರು ಬಂಡವಾಳ ಹೂಡಿದ್ದರು. ಲುಸಿಡ್ ಮೋಟಾರ್ಸ್‌ಗೆ ಚೀನಾದ ಸರ್ಕಾರಿ ಸ್ವಾಮ್ಯದ ಕಾರು ತಯಾರಕ ಕಂಪನಿಗಳಾದ ಬಿಎಐಸಿ ಹಾಗೂ ಲಿಇಕೊಗಳು ಧನ ಸಹಾಯ ಮಾಡಿವೆ.

ಒಂದು ಬಾರಿ ಚಾರ್ಜ್ ಆದರೆ 800 ಕಿ.ಮೀ ಚಲಿಸುತ್ತದೆ ಈ ಎಲೆಕ್ಟ್ರಿಕ್ ಕಾರು

ಅರಿಜೋನಾದ ಕಾಸಾ ಗ್ರಾಂಡೆಯಲ್ಲಿ ಅಸೆಂಬ್ಲಿ ಘಟಕವನ್ನು ನಿರ್ಮಿಸಲು ಲೂಸಿಡ್ ಕಂಪನಿಯು 2018ರ ಸೆಪ್ಟೆಂಬರ್ ನಲ್ಲಿ ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿಯಿಂದ 1 ಬಿಲಿಯನ್ ಡಾಲರ್ ಗಳನ್ನು ಪಡೆದಿತ್ತು. ಈ ಘಟಕವು ವಾರ್ಷಿಕವಾಗಿ 34,000 ಯುನಿಟ್ ವಾಹನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಮರ್ಥ್ಯವು ಏಳು ವರ್ಷಗಳ ನಂತರ 360,000 ಯುನಿಟ್ ವಾಹನಗಳಿಗೆ ಏರಿಕೆಯಾಗಲಿದೆ.

Most Read Articles

Kannada
English summary
Lucid air electric sedan travels upto 800 kms in single charge. Read in Kannada.
Story first published: Wednesday, August 12, 2020, 13:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X