ಮಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

2021ಕ್ಕೆ ಎಲೆಕ್ಟ್ರಿಕ್ ವಾಹನ ಮಾರಾಟಕ್ಕಾಗಿ ಭಾರತ ಪ್ರವೇಶಿಸುತ್ತಿರುವ ಅಮೆರಿಕದ ಖ್ಯಾತ ಕಾರು ಕಂಪನಿ ಟೆಸ್ಲಾ ಹೊಸ ಕಾರುಗಳ ಬಿಡುಗಡೆಗೂ ಮುನ್ನ ವಿವಿಧ ಹಂತದ ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿದ್ದು, ಹೊಸ ಉದ್ಯಮ ವ್ಯವಹಾರಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಮಾಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

ಭಾರತದಲ್ಲಿ ನಿರ್ಮಿಸಿ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ತನ್ನ ಎಲೆಕ್ಟ್ರಿಕ್ ಕಾರು ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುವ ಟೆಸ್ಲಾ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಹೊಸ ಕಾರು ಕಂಪನಿಯನ್ನು ವಿವಿಧ ರಾಜ್ಯ ಸರ್ಕಾರಗಳು ತಮ್ಮಲ್ಲೇ ಹೂಡಿಕೆ ಮಾಡುವಂತೆ ಟೆಸ್ಲಾ ಕಂಪನಿಗೆ ಆಹ್ವಾನ ನೀಡುತ್ತಿವೆ. ಉದ್ಯಮ ಕಾರ್ಯಾಚಾರಣೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಲಾಗುತ್ತಿದ್ದು, ಯಾವ ರಾಜ್ಯದಲ್ಲಿ ಕಾರು ಉತ್ಪಾದನಾ ಘಟಕ ನಿರ್ಮಾಣವಾಗಲಿದೆ ಎನ್ನುವ ಬಗ್ಗೆ ಇನ್ನು ಅಂತಿಮಗೊಂಡಿಲ್ಲ.

ಮಾಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರದ ಬೃಹತ್ ಕೈಗಾರಿಕೆ ಸಚಿವ ಸುಭಾಷ್ ದೇಸಾಯಿ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ನೇತೃತ್ವದಲ್ಲಿ ಟೆಸ್ಲಾ ಕಂಪನಿ ಜೊತೆ ವಿಡಿಯೋ ಕಾನ್ಪೆರೆನ್ಸ್ ಮಾಡುವ ಮೂಲಕ ಹೂಡಿಕೆಗೆ ಆಹ್ವಾನ ನೀಡಲಾಗಿದೆ.

ಮಾಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

ಆಟೋ ಉತ್ಪಾದನಾ ಕಂಪನಿಗಳ ಪ್ರಮುಖ ತಾಣವಾಗಿರುವ ಮಹಾರಾಷ್ಟ್ರದಲ್ಲೇ ಹೂಡಿಕೆ ಆಹ್ವಾನ ನೀಡಿರುವ ಸಚಿವ ಆದಿತ್ಯ ಠಾಕ್ರೆ ಮತ್ತು ಸುಭಾಷ್ ದೇಸಾಯಿ ಅವರು ಹೊಸ ಆಟೋ ಕಂಪನಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದು, ಅಧ್ಯಯನ ತಂಡಕ್ಕೆ ಆಹ್ವಾನ ನೀಡಿದೆ.

ಮಾಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

ಮಹಾರಾಷ್ಟ್ರ ಸರ್ಕಾರದ ಜೊತೆಗಿನ ಮಾತುಕತೆಗೂ ಮುನ್ನ ಕರ್ನಾಟಕ ಸರ್ಕಾರದ ಜೊತೆಗೂ ಹಲವು ಸುತ್ತಿನ ಮಾತುಕತೆ ನಡೆಸಿರುವ ಟೆಸ್ಲಾ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ದಿ ಕೇಂದ್ರ ಸ್ಥಾಪಿಸಲು ಉತ್ಸುಕತೆ ತೋರಿದೆ. ಆದರೆ ಉತ್ಪಾದನಾ ಘಟಕದಲ್ಲಿ ಯಾವ ರಾಜ್ಯದಲ್ಲಿ ತೆರೆಯಲಿದೆ ಎನ್ನುವುದೇ ಕೂತುಹಲ ಹುಟ್ಟುಹಾಕಿದ್ದು, 2021ರ ಮಧ್ಯಂತರದಲ್ಲಿ ಟೆಸ್ಲಾ ಹೊಸ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಹೊಸ ಸಂಚಲನ ಮೂಡಿಸಲಿವೆ.

ಮಾಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ಮೊಲಿಬಿಟಿ ಹೊಸ ಭರವಸೆ ಹುಟ್ಟುಹಾಕಿದ್ದು, ಮುಂಬರುವ 2030ರ ವೇಳೆಗೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಇಂಧನ ಆಧರಿತ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಯೋಜನೆಯಲ್ಲಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಾಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

ಇದಕ್ಕಾಗಿ ಈಗಿನಿಂದಲೇ ಹಂತ-ಹಂತವಾಗಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲಾಗುತ್ತಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬಳಕೆಯನ್ನು ಮಿತಗೊಳಿಸಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮಾಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಇಂಧನ ಆಧರಿತ ವಾಹನಗಳಿಗೆ ಕನಿಷ್ಠ ಕ್ರಮಕೈಗೊಳ್ಳುತ್ತಿರುವ ವಿಶ್ವದ ಪ್ರಮುಖ ರಾಷ್ಟ್ರಗಳು ಎಲೆಕ್ಟ್ರಿಕ್, ಹೈಬ್ರಿಡ್ ವಾಹನಗಳ ಬಳಕೆ ಒತ್ತು ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಆಕರ್ಷಿಸಲು ಎಲ್ಲಾ ಅಗತ್ಯ ಯೋಜನೆಗಳನ್ನು ಜಾರಿ ತರಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಾಹಾರಾಷ್ಟ್ರದಲ್ಲಿ ಹೂಡಿಕೆಗೆ ಟೆಸ್ಲಾ ಕಂಪನಿಯನ್ನು ಆಹ್ವಾನಿಸಿದ ಸಚಿವ ಆದಿತ್ಯ ಠಾಕ್ರೆ

ಭಾರತದಲ್ಲಿ ಸದ್ಯ ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳಿಗೆ ಮಾತ್ರವಲ್ಲ ಖರೀದಿದಾರರಿಗೂ ಕೂಡಾ ಹಲವಾರು ಆಫರ್‌ಗಳನ್ನು ನೀಡಲಾಗುತ್ತಿದ್ದು, ಇವಿ ವಾಹನಗಳ ಖರೀದಿಸುವ ಗ್ರಾಹಕರಿಗೆ ಗರಿಷ್ಠ ಪ್ರಮಾಣದ ಸಬ್ಸಡಿ, ಜಿಎಸ್‌ಟಿ ವಿನಾಯ್ತಿ, ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ.

Most Read Articles

Kannada
Read more on ಟೆಸ್ಲಾ tesla
English summary
Maharashtra government held meeting with Tesla. Read in Kannada.
Story first published: Saturday, October 24, 2020, 22:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X