Just In
Don't Miss!
- News
ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ ನಿಂದ ಜಾಮೀನು
- Sports
ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಷಾರಾಮಿ ಕಾರಿನಂತೆ ಮಾಡಿಫೈಗೊಂಡ ಮಹೀಂದ್ರಾ ಬೊಲೆರೋ
ಭಾರತದ ಖ್ಯಾತ ಕಾರು ಮಾಡಿಫೈ ಕಂಪನಿಯಾದ ಡಿಸಿ ಡಿಸೈನ್ ಮಹೀಂದ್ರಾ ಬೊಲೆರೋ ಕಾರನ್ನು ಐಷಾರಾಮಿ ಕಾರ್ ಆಗಿ ಮಾಡಿಫೈಗೊಳಿಸಿದೆ. ಡಿಸಿ ಡಿಸೈನ್ ಕಂಪನಿಯು ಇತ್ತೀಚೆಗೆ 2.0 ನೀತಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ನೀತಿಯಡಿಯಲ್ಲಿ ಕಂಪನಿಯು ತನ್ನ ವಾಹನ ಮಾಡಿಫಿಕೇಶನ್ ಸಾಮರ್ಥ್ಯಗಳನ್ನು ಹೊಸ ಮಟ್ಟಕ್ಕೆ ಏರಿಸಿದೆ. ಈಗ ಡಿಸಿ ಡಿಸೈನ್ ಮಹೀಂದ್ರಾ ಬೊಲೆರೋ ಕಾರನ್ನು ಮತ್ತೊಂದು ಹಂತಕ್ಕೆ ಮಾಡಿಫೈಗೊಳಿಸಿದೆ. ಇದರಿಂದಾಗಿ ಈ ಕಾರು ಭಾರತದ ಅತ್ಯಂತ ದುಬಾರಿ ಬೆಲೆಯ ಬೊಲೆರೋ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಬೊಲೆರೋ ಕಾರನ್ನು ಡಿಸಿ ಡಿಸೈನ್‌ನ ಈಶಾನ್ಯ ಶಾಖೆಯಲ್ಲಿ ಮಾಡಿಫೈಗೊಳಿಸಲಾಗಿದೆ. ಈ ಕಾರು ಸದ್ಯಕ್ಕೆ ಭಾರತದ ರಸ್ತೆಗಳಲ್ಲಿರುವ ಬೊಲೆರೋಗಿಂತ ಐಷಾರಾಮಿಯಾದ ಹಾಗೂ ವಿಶೇಷವಾದ ಕಾರ್ ಆಗಿ ಮಾರ್ಪಟ್ಟಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಡಿಸಿ ಡಿಸೈನ್ ಕಂಪನಿಯು ಈ ಕಾರಿನ ಬಹುತೇಕ ಭಾಗಗಳಿಗೆ ಕಪ್ಪು ಬಣ್ಣವನ್ನು ನೀಡಿದೆ. ಕಾರಿನೊಳಗೆ ಹೊಸದಾಗಿ ಅಳವಡಿಸಲಾದ ಭಾಗಗಳು ಸಹ ಕಪ್ಪು ಬಣ್ಣವನ್ನು ಹೊಂದಿವೆ. ಕಾರಿಗೆ ವಿಭಿನ್ನ ನೋಟವನ್ನು ನೀಡಲು ಡಿಸಿ ಡಿಸೈನ್ ಕೆಲವು ಭಾಗಗಳಿಗೆ ಕಿತ್ತಳೆ ಬಣ್ಣವನ್ನು ನೀಡಿದೆ.

ಕಿತ್ತಳೆ ಬಣ್ಣವನ್ನು ಕಾರಿನ ರೂಫ್, ಗಾಜು ಹಾಗೂ ಇಂಟಿರಿಯರ್'ನಲ್ಲಿ ಕಾಣಬಹುದು. ಫ್ಲೋರ್'ಗೆ ಬೇರೆ ಬಣ್ಣವನ್ನು ನೀಡಿರುವ ಕಾರಣಕ್ಕೆ ಈ ಮಹೀಂದ್ರಾ ಬೊಲೆರೋ ಕಾರು ವಿಭಿನ್ನವಾದ ಲುಕ್ ಅನ್ನು ಹೊಂದಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮಾಡಿಫೈಗೊಂಡ ನಂತರ ಈ ಬೊಲೆರೋ ಕಾರು ಆಕರ್ಷಕವಾಗಿದ್ದು, ಸೂಪರ್ ಕಾರಿನಂತೆ ಕಾಣುತ್ತದೆ. ಈ ಕಾರಿನಲ್ಲಿ ದೊಡ್ಡ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಹಿಂಭಾಗದ ಪ್ರಯಾಣಿಕರ ಬಳಕೆಗಾಗಿ ಕಾರಿನ ಇಂಟಿರಿಯರ್ ಅನ್ನು ರೂಫ್ ಮೇಲೆ ಅಳವಡಿಸಲಾಗಿದೆ. ಹಲವಾರು ಫೀಚರ್ ಗಳನ್ನು ಹೊಂದಿರುವ ಈ ಕಾರಿಗಾಗಿ ರೂ.18 ಲಕ್ಷ ವೆಚ್ಚ ಮಾಡಲಾಗಿದೆ. ಇದು ಕಾರಿನ ಬೆಲೆಯನ್ನು ಸಹ ಒಳಗೊಂಡಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬೊಲೆರೋ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಪ್ರಮುಖ ಹುದ್ದೆಯಲ್ಲಿರುವವರಿಗೆ ಹಲವು ರಾಜ್ಯ ಸರ್ಕಾರಗಳು ಈ ಕಾರನ್ನು ಅಧಿಕೃತ ವಾಹನವಾಗಿ ನೀಡುತ್ತವೆ.

2.5-ಲೀಟರಿನ ಎಂ 2 ಡಿಐಸಿಆರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ಬೊಲೆರೋ 63 ಬಿಎಚ್‌ಪಿ ಪವರ್ ಹಾಗೂ 180 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರನ್ನು ಎರಡು ಎಂಜಿನ್ ಆಯ್ಕೆ ಹಾಗೂ 5 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಗಳೊಂದಿಗೆ ಮಾರಾಟ ಮಾಡಲಾಗುತ್ತದೆ.