ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ 2020ರ ಆಗಸ್ಟ್ ತಿಂಗಳಿನ ಟ್ರಾಕ್ಟರ್ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಆಗಸ್ಟ್ ತಿಂಗಳಿನಲ್ಲಿ ಮಹೀಂದ್ರಾ ಕಂಪನಿಯು 23,503 ಟ್ರಾಕ್ಟರುಗಳನ್ನು ಮಾರಾಟ ಮಾಡಿದ್ದು, ಆಗಸ್ಟ್ ತಿಂಗಳ ಮಾರಾಟ ಪ್ರಮಾಣವು 69%ನಷ್ಟು ಹೆಚ್ಚಾಗಿದೆ.

ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಉತ್ತಮ ಮಳೆ, ಸಮಯಕ್ಕೆ ಸರಿಯಾಗಿ ಬಿತ್ತನೆ ಹಾಗೂ ರೈತರ ಆರ್ಥಿಕ ಪರಿಸ್ಥಿತಿ ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಕಂಪನಿ ತಿಳಿಸಿದೆ. 2019ರ ಆಗಸ್ಟ್‌ ತಿಂಗಳಿನಲ್ಲಿ ಮಹೀಂದ್ರಾ ಕಂಪನಿಯು 13,871 ಯುನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ರಫ್ತು ಮಾಡಲಾದ ಟ್ರಾಕ್ಟರುಗಳನ್ನು ಸೇರಿಸಿದರೆ ಕಂಪನಿಯ ಒಟ್ಟಾರೆ ಮಾರಾಟವು 24,458 ಯುನಿಟ್ ಗಳಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಈ ಪ್ರಮಾಣವು ಒಟ್ಟು 14,817 ಯುನಿಟ್ ಗಳಾಗಿತ್ತು.

ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಮಹೀಂದ್ರಾ ಕಂಪನಿಯು ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ 955 ಯುನಿಟ್ ಟ್ರಾಕ್ಟರುಗಳನ್ನು ರಫ್ತು ಮಾಡಿದೆ. 2019ರ ಆಗಸ್ಟ್ ತಿಂಗಳಿನಲ್ಲಿ 946 ಟ್ರಾಕ್ಟರುಗಳನ್ನು ರಫ್ತು ಮಾಡಲಾಗಿತ್ತು. ಕಂಪನಿಯು ಹಿಂದಿನ ವರ್ಷದ ಆಗಸ್ಟ್‌ ತಿಂಗಳಿಗಿಂತ ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದ ಮಾರಾಟವನ್ನು ದಾಖಲಿಸಿದೆ ಎಂದು ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್‌ನ ಫಾರ್ಮ್ ಎಕ್ವಿಪ್ಮೆಂಟ್‌ನ ಅಧ್ಯಕ್ಷರಾದ ಹೇಮಂತ್ ಸಿಕ್ಕಾ ತಿಳಿಸಿದ್ದಾರೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಲಾಕ್‌ಡೌನ್‌ ನಂತರ ಮಹೀಂದ್ರಾ ಕಂಪನಿಯು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಮುಂಬರುವ ತಿಂಗಳುಗಳಲ್ಲಿ ಮಾರಾಟವು ಮತ್ತಷ್ಟು ಹೆಚ್ಚುವ ನಿರೀಕ್ಷೆಗಳಿವೆ ಎಂದು ಹೇಮಂತ್ ಸಿಕ್ಕಾ ಹೇಳಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಲಾಕ್‌ಡೌನ್‌ ನಂತರ ಟ್ರಾಕ್ಟರ್ ಹಾಗೂ ಇತರ ಕೃಷಿ ಉಪಕರಣಗಳ ಮಾರಾಟವು ಹೆಚ್ಚುತ್ತಿದೆ. ಇದೇ ವೇಳೆ ಮಹೀಂದ್ರಾ ಕಂಪನಿಯು 10 ಲಕ್ಷ ಟ್ರಾಕ್ಟರುಗಳನ್ನು ತಯಾರಿಸಿದೆ. ಮಹೀಂದ್ರಾ ಅಂಡ್ ಮಹೀಂದ್ರಾ 10 ಲಕ್ಷ ಟ್ರಾಕ್ಟರುಗಳನ್ನು ತಯಾರಿಸಿದ ಭಾರತದ ಮೊದಲ ಕಂಪನಿಯಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಭಾರತದ ಪ್ರಮುಖ ಟ್ರಾಕ್ಟರ್ ತಯಾರಕ ಕಂಪನಿಗಳಲ್ಲಿ ಮಹೀಂದ್ರಾ ಕೂಡ ಒಂದು. ಕಂಪನಿಯು ನಾಗ್ಪುರದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಟ್ರಾಕ್ಟರ್ ಹಾಗೂ ಇತರ ಕೃಷಿ ಉಪಕರಣಗಳನ್ನು ತಯಾರಿಸುತ್ತದೆ.

ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 20 ಹೆಚ್‌ಪಿಯಿಂದ 60 ಹೆಚ್‌ಪಿವರೆಗಿನ ಟ್ರಾಕ್ಟರುಗಳನ್ನು ಮಾರಾಟ ಮಾಡುತ್ತದೆ. ಇದರಲ್ಲಿ 30ಕ್ಕೂ ಹೆಚ್ಚು ಉತ್ಪನ್ನಗಳು ಸೇರಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಜೂನ್‌ ತಿಂಗಳಿನಲ್ಲಿ ಕಂಪನಿಯು ಹೊಸ ಸರ್ ಪಂಚ್ ಪ್ಲಸ್ 575 ಟ್ರಾಕ್ಟರ್ ಅನ್ನು ಮಹಾರಾಷ್ಟ್ರದಲ್ಲಿ ಬಿಡುಗಡೆಗೊಳಿಸಿತು. ಈ ಟ್ರಾಕ್ಟರ್ ಸರ್ ಪಂಚ್ 575ರ ಅಪ್ ಡೇಟೆಡ್ ಮಾದರಿಯಾಗಿದೆ.

ಲಾಕ್‌ಡೌನ್‌ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಮಹೀಂದ್ರಾ ಟ್ರಾಕ್ಟರ್ ಮಾರಾಟ

ಹೊಸ ಸರ್ ಪಂಚ್ ಶ್ರೇಣಿಯ ಟ್ರಾಕ್ಟರುಗಳನ್ನು 30 ಹೆಚ್‌ಪಿಯಿಂದ 50 ಹೆಚ್‌ಪಿ ವ್ಯಾಪ್ತಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಸರ್ ಪಂಚ್ ಸರಣಿಯ ಟ್ರಾಕ್ಟರುಗಳು ಹಳೆ ಮಾದರಿಗಳಿಗಿಂತ 2 ಹೆಚ್‌ಪಿ ಹೆಚ್ಚಿನ ಪವರ್ ಉತ್ಪಾದಿಸುತ್ತವೆ.

Most Read Articles

Kannada
English summary
Mahindra company tractors sales increased by 69 percent in 2020 August. Read in Kannada.
Story first published: Wednesday, September 2, 2020, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X