ಮುಂಗಾರು ಹಂಗಾಮ: ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ನಷ್ಟ ಅನುಭವಿಸಿದ್ದು, ಪ್ರಯಾಣಿಕ ಬಳಕೆಯ ವಾಹನ ಮಾರಾಟದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಆದರೆ ಕರೋನಾ ವೈರಸ್ ಅಬ್ಬದ ನಡುವೆಯೂಯ ವಾಣಿಜ್ಯ ಮತ್ತು ಕೃಷಿ ಚಟುವಟಿಕೆಯ ವಾಹನ ಮಾರಾಟದಲ್ಲಿ ಮಾತ್ರ ಕಳೆದ ವರ್ಷಕ್ಕಿಂತಲೂ ಹೆಚ್ಚಳ ಕಂಡುಬಂದಿದೆ.

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

ಹೌದು, ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಿವಿಧ ಟ್ರ್ಯಾಕ್ಟರ್ ಮಾದರಿಗಳು ಕಳೆದ ಒಂದು ದಶಕದಲ್ಲಿ ಭಾರೀ ಪ್ರಮಾಣದ ಬೇಡಿಕೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಹುತೇಕ ಕೃಷಿ ಚಟುವಟಿಕೆಗಳನ್ನು ಯಾಂತ್ರಿಕರಣಗೊಳಿಸುತ್ತಿರುವುದೆ ಟ್ರ್ಯಾಕ್ಟರ್ ಬೇಡಿಕೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಮಹೀಂದ್ರಾ ನಿರ್ಮಾಣದ ವಿವಿಧ ಟ್ರ್ಯಾಕ್ಟರ್ ಮಾದರಿಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, 2020ರ ಮೇ ಅವಧಿಯಲ್ಲಿ ಕಳೆದ ವರ್ಷದ ಮೇ ಅವಧಿಗಿಂತಲೂ ಶೇ.2ರಷ್ಟು ಹೆಚ್ಚು ಮಾರಾಟ ಪ್ರಮಾಣವನ್ನು ದಾಖಲಿಸಿದೆ.

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

2019ರ ಮೇ ಅವಧಿಯಲ್ಲಿ ದೇಶಾದ್ಯಂತ 23,539 ಟ್ರ್ಯಾಕ್ಟರ್ ಯನಿಟ್‌ಗಳನ್ನು ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿಯು ಈ ವರ್ಷದ ಮೇ ಅವಧಿಯಲ್ಲಿ ಒಟ್ಟು 24,017 ಟ್ರ್ಯಾಕ್ಟರ್ ಯುನಿಟ್ ಮಾರಾಟ ಮಾಡಿದೆ.

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

ಈ ಮೂಲಕ ಕಳೆದ ವರ್ಷದ ಟ್ರ್ಯಾಕ್ಟರ್ ಮಾರಾಟಕ್ಕಿಂತಲೂ ಪ್ರಸಕ್ತ ವರ್ಷದಲ್ಲಿ ಶೇ.2 ರಷ್ಟು ಮುನ್ನಡೆ ಕಾಯ್ದುಕೊಂಡಿದ್ದು, ರಫ್ತು ಪ್ರಮಾಣದಲ್ಲಿ ಮಾತ್ರವೇ ಶೇ.72ರಷ್ಟು ಹಿನ್ನಡೆ ಕಂಡುಬಂದಿದೆ.

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

2019ರ ಮೇ ಅವಧಿಯಲ್ಲಿ 1,165 ಟ್ರ್ಯಾಕ್ಟರ್‌ಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದ್ದ ಮಹೀಂದ್ರಾ ಕಂಪನಿಯು ಪ್ರಸಕ್ತ ವರ್ಷದ ಮೇ ಅವಧಿಯಲ್ಲಿ ಕೇವಲ 324 ಯುನಿಟ್ ಟ್ರ್ಯಾಕ್ಟರ್‌ಗಳನ್ನು ಮಾತ್ರವೇ ರಫ್ತು ಮಾಡಿದೆ.

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

ಕರೋನಾ ವೈರಸ್ ಹಿನ್ನಲೆಯಲ್ಲಿ ಸಾಗರೋತ್ತರ ವ್ಯವಹಾರಗಳಲ್ಲಿ ಅಡಚಣೆ ಉಂಟಾದ ಪರಿಣಾಮ ವಿವಿಧ ವಾಹನಗಳ ರಫ್ತು ಪ್ರಮಾಣದಲ್ಲಿ ಸಾಕಷ್ಟು ಇಳಿಕೆ ಕಂಡುಬಂದಿದ್ದು, ಇದೀಗ ಹಂತ-ಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿರುವ ಹಿನ್ನಲೆಯಲ್ಲಿ ರಫ್ತು ಪ್ರಮಾಣವು ಕೂಡಾ ಚೇತರಿಕೆ ಕಾಣುತ್ತಿದೆ.

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

ಇನ್ನು ಕೃಷಿ ಕಾರ್ಮಿಕರ ಕೊರತೆ ನೀಗಿಸುವುದು ಹಾಗೂ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆಗೊಳಿಸುವುದರ ಜೊತೆಗೆ ಉತ್ಪಾದನಾ ಸಾಮಾರ್ಥ್ಯ ಹೆಚ್ಚಿಸಲು ಯಾಂತ್ರಿಕರಣ ಯೋಜನೆಗಳು ಇಂದು ಭಾರೀ ಬದಲಾವಣೆಗೆ ಕಾರಣವಾಗಿದ್ದು, ಇದೇ ಕಾರಣಕ್ಕೆ ಟ್ರ್ಯಾಕ್ಟರ್ ಮಾರಾಟ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

ಭಾರತದಲ್ಲಿ ಸುಮಾರು 50ಕ್ಕೂ ಹೆಚ್ಚು ಕೃಷಿ ಚಟುವಟಿಕೆಗೆ ಸಂಬಂಧಿತದಂತೆ ವಿವಿಧ ಮಾದರಿಯ ಯಂತ್ರೊಪಕರಣರಗಳನ್ನು ಸಿದ್ದಪಡಿಸುವ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕೆಲವೇ ಕೆಲವು ಕಂಪನಿಗಳು ಮಾತ್ರವೇ ಟ್ರ್ಯಾಕ್ಟರ್ ಉತ್ಪಾದನೆ ಮಾಡುತ್ತಿವೆ.

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

ಮಹೀಂದ್ರಾ, ಸ್ವರಾಜ್, ಟಫೆ, ಸೊನಾಲಿಕಾ, ಎಸ್ಕಾರ್ಟ್ಸ್, ಜಾನ್ ಡಿಯರ್, ನ್ಯೂ ಹೊಲಾಂಡ್ ಕಂಪನಿಗಳು ಭಾರತದಲ್ಲಿ ಟ್ರ್ಯಾಕ್ಟರ್ ಮಾರಾಟ ಮಾಡುವ ಪ್ರಮುಖ ಕಂಪನಿಗಳಾಗಿದ್ದು, 2019-20ರ ಹಣಕಾಸು ವರ್ಷದಲ್ಲಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ ಫಾರ್ಮಾ ಇಕ್ವಿಪ್‌ಮೆಂಟ್ ವಿಭಾಗವು ಸುಮಾರು 2,91,901 ಟ್ರ್ಯಾಕ್ಟರ್ ಯುನಿಟ್ ಮಾರಾಟ ಮಾಡಿದೆ.

MOST READ: ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಕರೋನಾ ಅಬ್ಬರದ ನಡುವೆಯೂ ಮಹೀಂದ್ರಾ ಟ್ರ್ಯಾಕ್ಟರ್ ಮಾರಾಟದಲ್ಲಿ ಹೆಚ್ಚಳ

ಆದರೆ ಕಳೆದ ವರ್ಷ ಉಂಟಾದ ಆರ್ಥಿಕ ಹಿಂಜರಿತವೂ ಕೃಷಿ ವಲಯದ ಭಾರೀ ಪರಿಣಾಮ ಬೀದಿದ್ದರಿಂದ ಕೃಷಿ ಉಪಕರಣ ಮಾರಾಟವು ಸಹ ಕುಸಿತ ಕಂಡಿತ್ತು. ಆದರೂ 2,91,901 ಯುನಿಟ್ ಮಾರಾಟ ಮಾಡಿದ್ದ ಮಹೀಂದ್ರಾ ಕಂಪನಿಯು ಟ್ರ್ಯಾಕ್ಟರ್ ಮಾರಾಟದಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ್ದು, ಯುವೊ 40ಹೆಚ್‌ಪಿ, ಯುವೊ 50ಹೆಚ್‌ಪಿ ಮತ್ತು ಅರ್ಜುನ ನೊವೊ ಮಾದರಿಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿದೆ.

Most Read Articles

Kannada
English summary
Mahindra Tractor Sales Increase By Two Percent In May. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X