ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿ

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಹೊಸ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಇದು ಮಾರುತಿ ಸುಜುಕಿ ಕಂಪನಿಯ ಆರನೇ ಸಿ‍ಎನ್‍‍ಜಿ ಕಾರ್ ಆಗಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿ

2019ರಲ್ಲಿ ಬಿಡುಗಡೆಯಾದ ಮಾರುತಿ ಎಸ್-ಪ್ರೆಸ್ಸೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಎಸ್-ಪ್ರೆಸ್ಸೊ ಕಾರ್ ಅನ್ನು 1.0 ಲೀಟರಿನ ಪೆಟ್ರೋಲ್ ಎಂಜಿನ್‍‍‍ನೊಂದಿಗೆ ಮಾರಾಟ ಮಾಡಲಾಗುತ್ತದೆ. ಕಂಪನಿಯು ಇದೀಗ ಸಿ‍ಎನ್‍‍ಜಿ ಆವೃತ್ತಿಯಲ್ಲಿ ಎಸ್-ಪ್ರೆಸ್ಸೊ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಎಸ್-ಪ್ರೆಸ್ಸೊ ಹ್ಯಾಚ್‍‍ಬ್ಯಾಕ್ ಕಾರು ಹೊಸ ಪ್ಯಾಕ್ಟರಿ-ಫಿಟ್ ಪರಿಕರಗಳನ್ನು ಒಳಗೊಂಡಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿ

ಇದರಲ್ಲಿ ಡೆಕಲ್ಸ್, ರೂಫ್ ಸ್ಪಾಯ್ಲರ್‍ ಮತ್ತು ಡೋರ್ ಪ್ಯಾನೆಲ್‍‍ಗಳು ಸೇರಿವೆ. ಮಾರುತಿ ಸುಜುಕಿ ಕಂಪನಿಯು ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಕಾರಿನ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳನ್ನು ಬಹಿರಂಗಪಡಿಸಿಲ್ಲ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿ

ಪೆಟ್ರೋಲ್ ಎಂಜಿನ್ ಕಾರಿಗಿಂತ ಸಿ‍ಎನ್‍‍ಜಿ ಕಾರಿನ ಇಂಜಿನ್ ದಕ್ಷತೆಯು ಕಡಿಮೆಯಾಗುವ ಸಾಧ್ಯತೆಗಳಿವೆ. ಸಿ‍ಎನ್‍‍ಜಿ ಆವೃತ್ತಿಯು 67 ಬಿ‍ಹೆಚ್‍ಪಿ ಪವರ್ ಮತ್ತು 90 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಈ ಕಾರಿನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಾರುತಿ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸಿ‍ಎನ್‍‍ಜಿ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಮಾರುತಿ ಸುಜುಕಿ ಕಂಪನಿಯು ಆಲ್ಟೋ, ಎರ್ಟಿಗಾ ಮತ್ತು ವ್ಯಾಗ್‍‍‍ನ್ಆರ್ ಕಾರುಗಳನ್ನು ಈಗಾಗಲೇ ಸಿ‍ಎನ್‍‍ಜಿ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ.

Most Read Articles

Kannada
English summary
Auto Expo 2020: Maruti S-Presso CNG Unveiled - Expected Launch Date, Prices, Specs & Images. Read in Kannada.
Story first published: Wednesday, February 5, 2020, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X