ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

2009ರಲ್ಲಿ ತೆರೆಕಂಡ ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಅವತಾರ್ ಸಿನಿಮಾ ಸಾಕಷ್ಟು ಜನಪ್ರಿಯವಾಗುವುದರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಕಮಾಯಿ ಮಾಡಿತ್ತು. ಈ ಚಿತ್ರದಲ್ಲಿ ಬಳಸಲಾಗಿದ್ದ ಟೆಕ್ನಾಲಜಿ‍ಗಳನ್ನು ಬಳಸಿ ಎಲೆಕ್ಟ್ರಿಕ್ ಕಾರೊಂದನ್ನು ವಿನ್ಯಾಸಗೊಳಿಸಲಾಗಿದೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

ಅಂದ ಹಾಗೆ ಈ ಕಾರ್ ಅನ್ನು ಅಭಿವೃದ್ಧಿಪಡಿಸಲಿರುವುದು ಮರ್ಸಿಡಿಸ್ ಬೆಂಝ್ ಕಂಪನಿ. ಈ ಕಾನ್ಸೆಪ್ಟ್ ಕಾರ್ ಅನ್ನು ಇತ್ತೀಚಿಗೆ ಲಾಸ್ ವೇಗಾಸ್‍‍‍ನಲ್ಲಿ ನಡೆದ 2020ರ ಸಿ‍ಇ‍ಎಸ್ ಸಮ್ಮೇಳನದಲ್ಲಿ ಅನಾವರಣಗೊಳಿಸಲಾಯಿತು. ಅವತಾರ್ ಎಂಬ ಹೆಸರಿನಲ್ಲಿ ಪ್ರದರ್ಶಿಸಲಾದ ಈ ಕಾರಿನಲ್ಲಿ ಹಲವಾರು ಆಧುನಿಕ ಟೆಕ್ನಾಲಜಿಗಳನ್ನು ಅಳವಡಿಸಲಾಗಿದೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

ಅವತಾರ್ ಚಿತ್ರದಲ್ಲಿದ್ದ ಪಾತ್ರಗಳನ್ನು ಬಳಸಿಕೊಂಡು ನಿರ್ದೇಶಕ ಜೇಮ್ಸ್ ಕ್ಯಾಮರೋನ್‍‍ರವರು ಈ ಕಾರ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಕಾರಿನಲ್ಲಿರುವ ಲುಕ್ ಹಾಗೂ ಆಧುನಿಕ ಟೆಕ್ನಾಲಜಿಗಳನ್ನು ಇದೇ ಮೊದಲ ಬಾರಿಗೆ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

33 ಮೂವೇಬಲ್ ಸ್ಕೇಲ್‍‍ಗಳನ್ನು ಹೊಂದಿರುವ ಈ ಅವತಾರ್ ಕಾರು ವಿವಿಧ ದಿಕ್ಕುಗಳಲ್ಲಿ ಚಲಿಸುತ್ತದೆ. ಈ ಸ್ಕೇಲ್‍‍ಗಳಿಂದಾಗಿ ಕಾರಿನ ಹೊರಗಡೆಯಿರುವವರ ಜೊತೆಗೆ ಸಂಪರ್ಕ ಸಾಧಿಸಬಹುದು. ಅವತಾರ್ ಚಿತ್ರದಲ್ಲಿ ಕಂಡುಬಂದ ಮರದಲ್ಲಿದ್ದಂತಹ ಸೀಡ್‍‍ಗಳನ್ನು ಈ ಕಾರಿನ ವ್ಹೀಲ್‍‍ಗಳಲ್ಲಿ ಅಳವಡಿಸಲಾಗಿದೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

ಇದರಿಂದಾಗಿ ಚಲನೆಯಲ್ಲಿದ್ದಾಗ ಕಾರು ಅಲುಗಾಡುವ ಅನುಭವವಾಗುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ಈ ಕಾರಿನಲ್ಲಿರುವ ಸ್ಟೀಯರಿಂಗ್ ವ್ಹೀಲ್. ಇದರಲ್ಲಿ ಆಟೋಮ್ಯಾಟಿಕ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

ಇದರಿಂದಾಗಿ ಈ ಕಾರ್ ಅನ್ನು ಡ್ರೈವ್ ಮಾಡುವ ಅವಶ್ಯಕತೆಯಿಲ್ಲ. ಮೊಟ್ಟೆಯ ರೂಪದಲ್ಲಿರುವ ಸಿಸ್ಟಂ ಈ ಕಾರ್ ಅನ್ನು ಕಂಟ್ರೋಲ್ ಮಾಡುತ್ತದೆ. ಈ ಸಿಸ್ಟಂ ಅನ್ನು ಇದು ಭವಿಷ್ಯದ ಕಾರು ಎಂಬ ಕಾರಣಕ್ಕೆ ನೀಡಲಾಗಿದೆ. ಕಾರಿನಲ್ಲಿರುವ ಬಹುತೇಕ ಕಂಟ್ರೋಲ್‍‍ಗಳು ಒವಲ್ ಶೇಪಿನಲ್ಲಿವೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

ಒವಲ್ ಶೇಪಿನ ಕಂಟ್ರೋಲರ್ ಮೇಲೆ ಕೈಯಿಟ್ಟಾಗ ಕೈಯಿಟ್ಟವರ ಹಾರ್ಟ್‍‍ಬೀಟ್ ತೋರಿಸುತ್ತದೆ. ಟ್ರಯಾಂಗ್ಯುಲರ್ ಶೇಪಿನಲ್ಲಿರುವ ಸೀಟುಗಳನ್ನು ಅವತಾರ್ ಚಿತ್ರದಲ್ಲಿರುವ ಜೀವ ರಕ್ಷಕ ಮೆಕಾನಿಸಂನಿಂದ ಪಡೆಯಲಾಗಿದೆ. ಈ ಕಾರಿನಲ್ಲಿರುವ ಪ್ರತಿಯೊಂದು ಭಾಗವೂ ಅವತಾರ್ ಚಿತ್ರದ ರೂಪದಲ್ಲಿದೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

ಇದರ ಜೊತೆಗೆ ಮಕ್ಕಳಿಗಾಗಿ ಈ ಕಾರಿನಲ್ಲಿ ಆಟ ಹಾಗೂ ಕ್ರೀಡೆಗಳಿಗೆ ಸಂಬಂಧಪಟ್ಟ ಹಲವಾರು ಸಂಗತಿಗಳಿವೆ. ಈ ಕಾರಿನಲ್ಲಿ ಆರ್ಗಾನಿಕ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದಕ್ಕಾಗಿ ಯಾವುದೇ ಮಿನರಲ್‍‍ಗಳ ಅಗತ್ಯವಿರುವುದಿಲ್ಲ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

110 ಕಿ.ವ್ಯಾನ ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 700 ಕಿ.ಮೀವರೆಗೆ ಚಲಿಸಬಹುದು. ಈ ಬ್ಯಾಟರಿಯಲ್ಲಿರುವ ಎಲೆಕ್ಟ್ರಿಕ್ ಮೋಟರ್ 470 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಇದರ ಜೊತೆಗೆ ಈ ಕಾರಿನ ಇಂಟಿರಿಯರ್‍‍ನಲ್ಲಿ ರಿಸೈಕಲ್ ಪ್ಲಾಸ್ಟಿಕ್‍‍ಗಳನ್ನು ಬಳಸಲಾಗಿದೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

ಸೀಟುಗಳಲ್ಲಿ ದಿನಾಮ್ಕಾ ಲೆದರ್ ಅಳವಡಿಸಲಾಗಿದೆ. ಕಾರಿನ ಬೇಸ್‍‍ಮೆಂಟ್ ಅನ್ನು ಕರುನ್ ಎಂಬ ಮರದಿಂದ ತಯಾರಿಸಲಾಗಿದೆ. ಈ ಮರಗಳನ್ನು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಮರ್ಸಿಡಿಸ್ ಬೆಂಝ್ ಕಾರು ಈ ಕಾರಿನ ಮೂಲಕ ಭವಿಷ್ಯದ ಎಲೆಕ್ಟ್ರಿಕ್ ಕಾರ್ ಅನ್ನು ತಯಾರಿಸಿದೆ.

ಅವತಾರ್ ಮೂವಿ ಸ್ಟೈಲ್‍‍ನಲ್ಲಿ ವಿನ್ಯಾಸಗೊಂಡ ಮರ್ಸಿಡಿಸ್ ಕಾರು..!

ಲಾಸ್ ವೇಗಾಸ್ ಸಮ್ಮೇಳನದಲ್ಲಿ ಪ್ರದರ್ಶಿಸಲಾದ ಈ ಕಾನ್ಸೆಪ್ಟ್ ಕಾರಿನ ಉತ್ಪಾದನೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು. ಭಾರತದಲ್ಲಿ ಈ ಕಾರ್ ಅನ್ನು ಬಿಡುಗಡೆಗೊಳಿಸುವ ಬಗ್ಗೆ ಹಾಗೂ ಈ ಕಾರ್ ಅನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬ ಬಗ್ಗೆ ಮರ್ಸಿಡಿಸ್ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
James Cameron designs automatic Car - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X