ಅಕ್ಟೋಬರ್‌ನಿಂದ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ದೇಶದ ಜನಪ್ರಿಯ ಐಷಾರಾಮಿ ಕಾರು ಮಾದರಿಗಳಲ್ಲಿ ಅಗ್ರಸ್ಥಾನದಲ್ಲಿ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯು ಮುಂಬರುವ ಅಕ್ಟೋಬರ್ 1ರಿಂದ ಶೇ.2 ರಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಬಿಎಸ್-6 ಎಮಿಷನ್ ಜಾರಿ ನಂತರ ಇದು ಎರಡನೇ ಬಾರಿಯ ಬೆಲೆ ಹೆಚ್ಚಳವಾಗಿದೆ.

ಅಕ್ಟೋಬರ್‌ನಿಂದ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ಕಳೆದ ಮಾರ್ಚ್ ಅವಧಿಯಲ್ಲಿ ತನ್ನ ಕಾರು ಮಾದರಿಗಳನ್ನು ಹೊಸ ಎಮಿಷನ್‌ನಂತೆ ಉನ್ನತೀಕರಿಸಿ ಬಿಡುಗಡೆ ಮಾಡಿದ್ದ ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಕಾರುಗಳ ಬೆಲೆಯಲ್ಲಿ ಸುಮಾರು ಶೇ. 1.50ರಿಂದ ಶೇ.3 ರಷ್ಟು ಬೆಲೆ ಹೆಚ್ಚಳ ಮಾಡಿತ್ತು. ಇದೀಗ ಬಿಎಸ್-6 ಜಾರಿಗೊಂಡು 6 ತಿಂಗಳ ನಂತರ ಎರಡನೇ ಬಾರಿಗೆ ಬೆಲೆ ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಕಾರು ಮಾದರಿಗಳಿಗೆ ಅನುಗುಣವಾಗಿ ಶೇ. 2ರಷ್ಟು ಬೆಲೆ ಏರಿಕೆ ಮಾಡುವ ಸಿದ್ದತೆಯಲ್ಲಿದೆ.

ಅಕ್ಟೋಬರ್‌ನಿಂದ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಸತತ ಕುಸಿತ ಮತ್ತು ದುಬಾರಿಯಾಗಿರುವ ಬಿಡಿಭಾಗಗಳ ವೆಚ್ಚ ನಿರ್ವಹಣೆಗಾಗಿ ಬೆಲೆ ಏರಿಕೆಯ ಸಿದ್ದತೆಯಲ್ಲಿರುವ ಮರ್ಸಿಡಿಸ್ ಬೆಂಝ್ ಕಂಪನಿಯು ಅಕ್ಟೋಬರ್ 1ರಂದು ಹೊಸ ಬೆಲೆಗಳನ್ನು ಪ್ರಕಟಗೊಳಿಸಲಿದೆ.

ಅಕ್ಟೋಬರ್‌ನಿಂದ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ಮರ್ಸಿಡಿಸ್ ಬೆಂಝ್ ಕಂಪನಿಯು ಕಾರುಗಳ ಬೆಲೆಯಲ್ಲಿ ಶೇ.2 ರಷ್ಟು ಹೆಚ್ಚಳ ಮಾಡಿದ್ದಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕನಿಷ್ಠ ರೂ. 1.40 ಲಕ್ಷದಿಂದ ರೂ. 5.50 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದ್ದು, ಐಷಾರಾಮಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಮತ್ತಷ್ಟು ಹೊರೆಯಾಗಲಿದೆ.

ಅಕ್ಟೋಬರ್‌ನಿಂದ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ಭಾರತದಲ್ಲಿ ಮಾರಾಟವಾಗುತ್ತಿರುವ ಮರ್ಸಿಡಿಸ್ ಬೆಂಝ್ ಕಾರುಗಳು ಸದ್ಯ ಎಕ್ಸ್‌ಶೋರೂಂ ದರದಲ್ಲಿ ಆರಂಭಿಕವಾಗಿ ರೂ.40.90 ಲಕ್ಷದಿಂದ ಆರಂಭಗೊಂಡು ಹೈ ಎಂಡ್ ಮಾದರಿಯು ರೂ. 2.78 ಕೋಟಿ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಲಿಮೊಸಿನ್, ಎಸ್‌ಯುವಿ, ಎಎಂಜಿ ಮತ್ತು ರೋಡ್‌ಸ್ಟರ್ ಕಾರು ಮಾದರಿಗಳನ್ನು ಮಾರಾಟಮಾಡುತ್ತಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಅಕ್ಟೋಬರ್‌ನಿಂದ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ಕೇವಲ ಮರ್ಸಿಡಿಸ್ ಮಾತ್ರವಲ್ಲದೆ ಕಳೆದ ಎರಡು ತಿಂಗಳ ಹಿಂದೆಯೇ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಬಿಎಸ್-6 ವಾಹನಗಳ ಮಾದರಿಯ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ ಮಾಡಿದ್ದು, ಮರ್ಸಿಡಿಸ್ ಕಂಪನಿಯು ಇದೀಗ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದೆ.

ಅಕ್ಟೋಬರ್‌ನಿಂದ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ಇನ್ನು ಮರ್ಸಿಡಿಸ್ ಕಂಪನಿಯು ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆಗೊಳಿಸಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಅಕ್ಟೋಬರ್‌ನಿಂದ ಮರ್ಸಿಡಿಸ್ ಬೆಂಝ್ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ಮರ್ಸಿಡಿಸ್ ಕಂಪನಿಯು ಬಿಡುಗಡೆ ಮಾಡಲಿರುವ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಪ್ರತಿ ಚಾರ್ಜ್‌ಗೆ 400ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದು, 405-ಬಿಎಚ್‌ಪಿ ಮತ್ತು 765-ಎನ್ಎಂ ಟಾರ್ಕ್‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿ ಹೊರಹೊಮ್ಮಲಿದೆ.

Most Read Articles

Kannada
English summary
Mercedes-Benz India To Increase Prices Of Its Models By 2 Per cent. Read in Kannada.
Story first published: Tuesday, September 15, 2020, 18:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X