ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಮರ್ಸಿಡಿಸ್ ಬೆಂಝ್ ಕಂಪನಿಯು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಈ ಕಂಪನಿಯು ಕಾರುಗಳ ಜೊತೆಗೆ ಟ್ರಕ್‍‍ಗಳನ್ನು ಸಹ ಮಾರಾಟ ಮಾಡುತ್ತದೆ.

ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಮರ್ಸಿಡಿಸ್ ಬೆಂಝ್ ಕಂಪನಿಯ ಯುನಿಮಾಗ್ ಟ್ರಕ್ ಈಗ ಪ್ರಪಂಚದ ಅತ್ಯುತ್ತಮ ಆಫ್ ರೋಡರ್ ಟ್ರಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುನಿಮಾಗ್ ಟ್ರಕ್ ಬೇರೆ ಯಾವುದೇ ವಾಹನವು ಚಲಿಸದಷ್ಟು ಎತ್ತರಕ್ಕೆ ಚಲಿಸಿ ಹೊಸ ವಿಶ್ವ ದಾಖಲೆಯನ್ನು ಬರೆದಿದೆ.

ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಎರಡು ಮರ್ಸಿಡಿಸ್ ಬೆಂಝ್ ಯುನಿಮಾಗ್ ಟ್ರಕ್‍‍ಗಳನ್ನು ಒಜೋಸ್ ಡೆಲ್ ಸಲಾಡೊ ಜ್ವಾಲಾ ಮುಖಿ ಪರ್ವತವನ್ನು ಏರಲು ಕಳುಹಿಸಲಾಗಿತ್ತು. ಈ ಪರ್ವತವು ವಿಶ್ವದಲ್ಲಿರುವ ಅತಿ ದೊಡ್ಡ ಜೀವಂತ ಜ್ವಾಲಾಮುಖಿಯಾಗಿದೆ.

ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಈ ಪರ್ವತವು ಚಿಲಿ ದೇಶದ ಅಟಕಾಮ ಮರುಭೂಮಿಯಲ್ಲಿದೆ. ಮರ್ಸಿಡಿಸ್ ಬೆಂಝ್ ಯುನಿಮಾಗ್ ಈ ಪರ್ವತದ 6,694 ಮೀಟರ್ ಎತ್ತರವನ್ನು ಏರಿದೆ. ಈ ಪರ್ವತವು ಸಮುದ್ರ ಮಟ್ಟದಿಂದ 21,962 ಅಡಿ ಎತ್ತರದಲ್ಲಿದೆ.

ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಈ ಜ್ವಾಲಾಮುಖಿಯ ಎತ್ತರವು 6,893 ಮೀಟರ್ ಅಂದರೆ 22,615 ಅಡಿಗಳಾಗಿದೆ. ಇದಕ್ಕೂ ಮೊದಲು ಮರ್ಸಿಡಿಸ್ ಬೆಂಝ್ ಯುನಿಮಾಗ್ ಟ್ರಕ್, ಅಲಾಸ್ಕಾದಲ್ಲಿರುವ ಮೌಂಟ್ ಡೆನಾಲಿಯ 20,308 ಅಡಿ ಹಾಗೂ ತಾಂಜಾನಿಯಾದಲ್ಲಿರುವ ಮೌಂಟ್ ಕಿಲಿಮಾಂಜಿರೋದ 19,341 ಅಡಿ ಎತ್ತರವನ್ನು ಏರಿತ್ತು.

ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಈ ಎರಡು ಪರ್ವತಗಳನ್ನು ಏರಿದ್ದ ಕಾರಣಕ್ಕೆ ಈ ಜ್ವಾಲಾಮುಖಿಯನ್ನು ಏರಲು ಯಾವುದೇ ತೊಂದರೆಯಾಗಲಿಲ್ಲ. ಯುನಿಮಾಗ್ ಟ್ರಕ್ ಈ ಜ್ವಾಲಾಮುಖಿಯನ್ನು ಏರುವ ವೇಳೆಯಲ್ಲಿ ಕ್ಲಾರ್‍‍ಸನ್, ಹ್ಯಾಮಂಡ್ ಹಾಗೂ ಮೇ ಟ್ರಕ್‍‍ಗಳನ್ನು ಹಿಂದಿಕ್ಕಿ ಈ ಸಾಧನೆಯನ್ನು ಮಾಡಿದೆ.

ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಈ ಮೂರು ಟ್ರಕ್‍‍ಗಳು 17,200 ಅಡಿಗಳವರೆಗೆ ಮಾತ್ರ ಏರಲು ಸಾಧ್ಯವಾಗಿದೆ. ಈ ಎತ್ತರವನ್ನು ಏರಿದ ನಂತರ ಆಕ್ಸಿಜೆನ್‍‍ನ ಕೊರತೆಯಿಂದಾಗಿ ಯುನಿಮಾಗ್ ವಾಪಸ್ ಆಗಿದೆ. ಇಷ್ಟು ಎತ್ತರವನ್ನು ದಾಖಲೆ ನಿರ್ಮಿಸುವ ಉದ್ದೇಶದಿಂದ ಏರಿರಲಿಲ್ಲ.

ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಬದಲಿಗೆ 10 ಜನರ ತಂಡವೊಂದು ಯುನಿಮಾಗ್ ಟ್ರಕ್ ಅನ್ನು ಆದಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶವನ್ನು ಹೊಂದಿತ್ತು. ಈ ಕಾರಣಕ್ಕೆ ಎತ್ತರದ ಸ್ಥಳದಲ್ಲಿ ರೇಡಿಯೊ ಟ್ರಾನ್ಸ್ ಮಿಟರ್‍‍ಗಳನ್ನು ಅಳವಡಿಸಲಾಗಿತ್ತು.

ಹೊಸ ವಿಶ್ವ ದಾಖಲೆ ಬರೆದ ಮರ್ಸಿಡಿಸ್ ಬೆಂಝ್ ಟ್ರಕ್

ಪರ್ವತವನ್ನು ಏರುವವರು ಎಮರ್ಜೆನ್ಸಿ ಸಂದರ್ಭಗಳಲ್ಲಿ ಈ ಟ್ರಾನ್ಸ್ ಮೀಟರ್‍‍ಗಳನ್ನು ಸಂಪರ್ಕಿಸಬಹುದು. ಈ ಯುನಿಮಾಗ್ ಟ್ರಕ್‍‍ಗಳನ್ನು ಮರ್ಸಿಡಿಸ್ ಬೆಂಝ್ ಕಂಪನಿಯು ವಿಶೇಷವಾಗಿ ಮಾಡಿಫೈಗೊಳಿಸಿದೆ.

Most Read Articles

Kannada
English summary
Mercedes Benz Unimog truck sets new world record. Read in Kannada.
Story first published: Thursday, January 30, 2020, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X