ಆಟೋ ಎಕ್ಸ್‌ಪೋ 2020: 9 ಸೀಟರ್ ಜಿ10 ಎಂಪಿವಿ ಅನಾವರಣಗೊಳಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಸಂಸ್ಥೆಯು 2020ರ ಆಟೋ ಎಕ್ಸ್‌ಪೋದಲ್ಲಿ 15ಕ್ಕೂ ಹೆಚ್ಚು ಕಾರು ಮಾದರಿಗಳನ್ನು ಅನಾವರಣಗೊಳಿಸಿದ್ದು, ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್‌ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

9 ಸೀಟರ್ ಜಿ10 ಎಂಪಿವಿ ಅನಾವರಣಗೊಳಿಸಿದ ಎಂಜಿ ಮೋಟಾರ್

ಎಂಪಿವಿ ವಿಭಾಗದಲ್ಲೂ ಭಾರೀ ಬದಲಾವಣೆಯ ನೀರಿಕ್ಷೆಯಲ್ಲಿರುವ ಎಂಜಿ ಮೋಟಾರ್ ಸಂಸ್ಥೆಯು 7 ಸೀಟರ್ ಮಾದರಿಗಳಾದ 360ಎಂ ಮತ್ತು ಹೆಕ್ಟರ್ ಪ್ಲಸ್ ಅನಾವರಣಗೊಳಿಸಿರುವುದಲ್ಲದೇ ಇದೀಗ 9 ಸೀಟರ್ ಮಾದರಿಯಾದ ಜಿ10 ಆವೃತ್ತಿಯನ್ನು ಸಹ ಅನಾವರಣಗೊಳಿಸಿ ಬಿಡುಗಡೆಯ ಸುಳಿವು ನೀಡಿದೆ. ಸದ್ಯ ಚೀನಿ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮ್ಯಾಕ್ಸಸ್ ಜಿ10 ಕಾರು ಮಾದರಿಯೇ ಭಾರತದಲ್ಲಿ ಎಂಜಿ ಹೆಸರಿನೊಂದಿಗೆ ಮಾರಾಟವಾಗಲಿದೆ.

ಚೀನಿ ಮತ್ತು ಆಸ್ಟ್ರೇಲಿಯಾದಲ್ಲಿ ಜಿ10 ಕಾರು ಸದ್ಯ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲೂ ಹೊಸ ಕಾರು 7 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಮಾರಾಟವಾಗುವ ನೀರಿಕ್ಷೆಯಲ್ಲಿದೆ.

9 ಸೀಟರ್ ಜಿ10 ಎಂಪಿವಿ ಅನಾವರಣಗೊಳಿಸಿದ ಎಂಜಿ ಮೋಟಾರ್

7 ಸೀಟರ್ ಮಾದರಿಯು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ನೊಂದಿಗೆ ಹೈ ಎಂಡ್ ಮಾದರಿಯಾಗಿ ಮಾರಾಟವಾಗಲಿದ್ದರೆ 9 ಸೀಟರ್ ಆವೃತ್ತಿಯು ಬೆಸ್ ವೆರಿಯೆಂಟ್ ಮಾದರಿಯಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

9 ಸೀಟರ್ ಜಿ10 ಎಂಪಿವಿ ಅನಾವರಣಗೊಳಿಸಿದ ಎಂಜಿ ಮೋಟಾರ್

ಹೈ ಎಂಡ್ ಮಾದರಿಯ 2+2+3 ಮಾದರಿಯಲ್ಲಿ 7 ಸೀಟರ್ ಸೌಲಭ್ಯವಿದ್ದರೂ ಮಧ್ಯದಲ್ಲಿರುವ ಕ್ಯಾಪ್ಟನ್ ಸೀಟು ಹಲವು ವಿಶೇಷತೆಗಳೊಂದಿಗೆ ಬರಲಿದ್ದು, ಅರಾಮದಾಯಕವಾಗಿ ಕುಳಿತುಕೊಳ್ಳಬಹುದಲ್ಲದೇ ಕಾಲುಗಳನ್ನು ಚಾಚಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಕ್ಯಾಪ್ಟನ್ ಸೀಟ್ ಮುಂಭಾಗದಲ್ಲಿ ಎಂಟರ್‌ಟೈನ್‌ಮೆಂಟ್ ಡಿಸ್‌ಪ್ಲೇ, ವೆಂಟಿಲೆಟೆಡ್ ಲೆದರ್ ಹೊದಿಕೆ ನೀಡಲಾಗಿದ್ದು, ಹಿಂಭಾಗದ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ನೀಡಲಾಗಿದೆ.

9 ಸೀಟರ್ ಜಿ10 ಎಂಪಿವಿ ಅನಾವರಣಗೊಳಿಸಿದ ಎಂಜಿ ಮೋಟಾರ್

ಇನ್ನು 9 ಸೀಟರ್ ಆವೃತ್ತಿಯು 2+2+2+3 ಮಾದರಿಯಲ್ಲಿ ಆಸನ ಸೌಲಭ್ಯ ಹೊಂದಿದ್ದು, ಮಧ್ಯದಲ್ಲಿರುವ ಆಸನಗಳು ಪ್ರತ್ಯೇಕ ನಿಯಂತ್ರಣ ಹೊಂದಿವೆ. ಮುಂಭಾದಲ್ಲಿರುವ ಆಸನ ಮಾದರಿಯಲ್ಲೇ ಹಿಂಭಾಗದ ಪ್ರಯಾಣಿಕರಿಗೂ ಸಾಕಷ್ಟು ಸ್ಥಳಾವಕಾಶ ನೀಡಲಾಗಿದ್ದು, 9 ಜನ ಪ್ರಯಾಣಿಕರು ಯಾವುದೇ ಕಿರಿಕಿರಿಯಲ್ಲದೇ ಅರಾಮವಾಗಿ ಪ್ರಯಾಣಿಸಬಹುದಾಗಿದೆ.

ಹೊಸ ಜಿ10 ಕಾರು ಸದ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಕಾರ್ನಿವಾಲ್ ಕಾರಿಗಿಂತಲೂ ಹೆಚ್ಚು ಉದ್ದಳತೆ ಹೊಂದಿದ್ದು, 5,168-ಎಂಎಂ ಉದ್ದ, 1,980-ಎಂಎಂ ಅಗಲ ಮತ್ತು 1,928-ಎಂಎಂ ಎತ್ತರದೊಂದಿಗೆ ಎಂಪಿವಿ ಕಾರಗಳಲ್ಲೇ ವಿಶೇಷ ಎನ್ನಿಸಲಿದೆ.

9 ಸೀಟರ್ ಜಿ10 ಎಂಪಿವಿ ಅನಾವರಣಗೊಳಿಸಿದ ಎಂಜಿ ಮೋಟಾರ್

ಹೊಸ ಕಾರಿನ ಬೆಲೆ(ಅಂದಾಜು)

ಎಂಜಿ ಹೊಸ ಜಿ10 ಎಂಪಿವಿ ಕಾರು ಹ್ಯುಂಡೈ ಸಂಸ್ಥೆಯ ಸ್ಟಾರೆಕ್ಸ್ ಮತ್ತು ಟೊಯೊಟಾ ಹಯೆಸ್ ಮಾದರಿಯಲ್ಲಿ ಮಾರಾಟಗೊಳ್ಳಲಿದ್ದು, ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಕಾರುಗಳಿಂತಲೂ ಹೆಚ್ಚು ದುಬಾರಿಯಾಗಿರಲಿದೆ ಎನ್ನಲಾಗಿದೆ.

9 ಸೀಟರ್ ಜಿ10 ಎಂಪಿವಿ ಅನಾವರಣಗೊಳಿಸಿದ ಎಂಜಿ ಮೋಟಾರ್

ಆದರೆ ಎಂಜಿ ಸಂಸ್ಥೆಯು ಸದ್ಯ ಭಾರತದಲ್ಲಿ ಮಧ್ಯಮ ಗಾತ್ರದ ಕಾರು ಮಾದರಿಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಾಗಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದ್ದು, ದುಬಾರಿ ಬೆಲೆಯ ವಾಹನಕ್ಕಿಂತಲೂ ಮಧ್ಯಮ ಗಾತ್ರದಲ್ಲಿರುವ ಇನೋವಾ ಕ್ರಿಸ್ಟಾ ಮತ್ತು ಕಾರ್ನಿವಾಲ್ ಮಾದರಿಯ ಬೆಲೆಯ ನಡುವಿನ ಅಂತರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

9 ಸೀಟರ್ ಜಿ10 ಎಂಪಿವಿ ಅನಾವರಣಗೊಳಿಸಿದ ಎಂಜಿ ಮೋಟಾರ್

ಇದಕ್ಕಾಗಿ ಸ್ಥಳೀಯವಾಗಿಯೇ ಹೊಸ ಎಂಪಿವಿ ಕಾರುಗಳನ್ನು ಉತ್ಪಾದನೆ ಮಾಡಲು ಯೋಜನೆ ರೂಪಿಸುತ್ತಿದ್ದು, ಹೊಸ ಜಿ10 ಕಾರನ್ನು ರೂ. 25 ಲಕ್ಷದಿಂದ ರೂ.30 ಲಕ್ಷ ಬೆಲೆ ಅಂತರದಲ್ಲಿ ಪರಿಚಯಿಸುವ ಬಗ್ಗೆ ಮಾರುಕಟ್ಟೆ ಅಧ್ಯಯನ ನಡೆಸುತ್ತಿದೆ.

Most Read Articles

Kannada
English summary
MG G10 Unveiled At Auto Expo. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X