ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೆಕ್ಟರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಎಂಜಿ ಮೋಟಾರು ಕಂಪನಿಯ ಮೊದಲ ವಾಹನವು ಉತ್ತಮವಾಗಿ ಮಾರಾಟವಾಗುವಲ್ಲಿ ಯಶಸ್ವಿಯಾಗಿದೆ.

ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಎಂಜಿ ಮೋಟಾರು ಕಂಪನಿಯು ಎಲೆಕ್ಟ್ರಿಕ್ ಕಾರನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇದೀಗ ಎಂಜಿ ಮೋಟಾರ್ ಕಂಪನಿಯು ಹೊಸ ಎಲೆಕ್ಟ್ರಿಕ್ ಎಸ್‍ಯುವಿಯೊಂದನ್ನು ಅನಾವರಣಗೊಳಿಸಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಎಂಜಿ ಮೋಟಾರ್ ಕಂಪನಿಯು ಹೊಸ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಂಜಿ ಮಾರ್ವೆಲ್ ಎಕ್ಸ್ ಮತ್ತು ರೋವೆಸ್ ಎಸ್‍‍ಯುವಿಯ ನಡುವೆ ಸಾಮ್ಯತೆಯನ್ನು ಗಮನಿಸಿದರೆ ಅದು ಒಂದೇ ಹೆಸರನ್ನು ಹೊಂದಿದೆ. ಇದು ವಿಶೇಷವಾದರು ಆಶ್ಚರ್ಯಕರ ಸಂಗತಿ ಅಲ್ಲ. ಏಕೆಂದರೆ ಎಂಜಿ ಮತ್ತು ರೋವೆ ಎರಡು ಬ್ರ್ಯಾಂಡ್‍‍ಗಳು ಒಂದೇ ಮೂಲ ಕಂಪನಿಯ ಬ್ರ್ಯಾಂಡ್‍‍ಗಳು ಆಗಿವೆ.

ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಎಂಜಿ ಮಾರ್ವೆಲ್ ಎಸ್‍ಯುವಿಯ ಮೂಲ ಮಾದರಿ ಎಂದೇ ಹೇಳಬಹುದಾದ ರೋವೆ ಆವೃತ್ತಿಯು 52.5 ಕಿ.ವ್ಯಾಟ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಆಲ್-ವ್ಹೀಲ್ ಡ್ರೈವ್ ವನ್ನು ಹೊಂದಿದೆ. ಈ ಎಸ್‍‍ಯುವಿಯ ಮೋಟಾರು 302 ಬಿ‍‍ಹೆಚ್‍‍ಪಿ ಪವರ್ ಮತ್ತು 665 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಚೀನಾದಲ್ಲಿ ರೋವೆ ಮಾರ್ವೆಲ್ ಎಕ್ಸ್ ಎಸ್‍‍ಯುವಿಯ ಲೋ ಸ್ಪೆಕ್ ಕೂಡ ಮಾರಾಟವಾಗುತ್ತಿದೆ. ಈ ಎಸ್‍‍ಯುವಿಯಲ್ಲಿ ಒಂದೇ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮೋಟಾರ್ 186 ಬಿ‍‍ಹೆಚ್‍‍ಪಿ ಪವರ್ ಮತ್ತು 410 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಈ ಎಸ್‍ಯುವಿಯು ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಜ್ ಮಾಡಿದರೆ 403 ಕಿ.ಮೀ ಚಲಿಸುತ್ತದೆ. ಈ ಎಸ್‍‍ಯುವಿಯು 170 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ರೋವೆ ಮಾರ್ವೆಲ್ ಎಕ್ಸ್ ಕೇವಲ 3.1 ಸೆಕೆಂಡುಗಳಲ್ಲಿ 100 ಕಿ.ಮೀ ಕ್ರಮಿಸುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ಬಳಸಿ ಮಾರ್ವೆಲ್ ಎಕ್ಸ್ 40 ನಿಮಿಷಗಳಲ್ಲಿ 0 ಪ್ರತಿಶತದಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.

ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಆದರೆ ಸ್ಟ್ಯಾಂಡರ್ಡ್ ಎಸಿ ವಾಲ್ ಸಾಕೆಟ್ ಬ್ಯಾಟರಿಯನ್ನು 100 ಪ್ರತಿಶತದವರೆಗೆ ಚಾರ್ಜ್ ಮಾಡಲು 8.5 ಗಂಟೆಗಳ ಕಾಲ ಸಮಯ ಬೇಕಾಗಬಹುದು. ಎಂಜಿ ಝಡ್‍ಎಸ್ ಇವಿಯಂತೆಯೇ ಮಾರ್ವೆಲ್ ಎಕ್ಸ್ ಸಹ ಕೈನೆಟಿಕ್ ಎನರ್ಜಿ ರಿಕವರಿ ಸಿಸ್ಟಂ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಚೀನಾದಲ್ಲಿರುವ ಈ ಎಸ್‍‍ಯುವಿಯಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಡಿಜಿಟಲ್ 12.03 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 19.4 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್, ಲೆದರ್ ಸೀಟುಗಳು, ಪವರ್ ಹೊಂದಾಣಿಕೆ ಮಾಡಬಹುದಾದ ಒಆರ್‌ವಿಎಂಗಳು ಮತ್ತು ಡ್ರೈವರ್ ಸೀಟ್ ಅನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಎಂಜಿ ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ

ಮಾರ್ವೆಲ್ ಎಕ್ಸ್ ಎಲೆಕ್ಟ್ರಿಕ್ ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಕಂಪನಿ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಉತ್ತಮವಾಗಿ ಮಾರಾಟವಾಗುವುದರಿಂದ ಈ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

Most Read Articles

Kannada
English summary
The MG Marvel X is a Harrier-sized autonomous EV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X