ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ಹೆಕ್ಟರ್ ಎಸ್‍ಯುವಿ ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲವನ್ನು ಮೂಡಿಸಿದೆ. ಎಂಜಿ ಹೆಕ್ಟರ್ ಎಸ್‍‍ಯುವಿಯು ಭಾರತಲ್ಲಿ ಉತ್ತಮವಾಗಿ ಮಾರಾಟವಾಗಿದೆ. ಅಲ್ಲದೆ ಎಂಜಿ ಹೆಕ್ಟರ್ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಗೆ ಕಿಯಾ ಮೋಟಾರ್ಸ್ ಕಂಪನಿಯು ಉತ್ತಮವಾಗಿ ಪೈಪೋಟಿಯನ್ನು ನೀಡುತ್ತಿದೆ. ಇದರಿಂದ ಕಿಯಾ ಕಾರ್ನಿವಲ್ ಎಂಪಿ‍ವಿಗೆ ಪೈಪೋಟಿಯನ್ನು ನೀಡಲು ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೊಸ ಎಂಪಿ‍ವಿಯನ್ನು ಬಿಡುಗಡೆಗೊಳಿಸಲಿದೆ. ಎಂಜಿ ಮೋಟಾರ್ ಕಂಪನಿಯು ಹೆಚ್ಚಾಗಿ ಎಸ್‍‍ಯುವಿಗಳಿಗೆ ಪ್ರಮುಖತೆಯನ್ನು ನೀಡುತ್ತಿದ್ದರು. ಆದರೆ ಇದೀಗ ಭಾರತದಲ್ಲಿ ಎಂಜಿ ಮೋಟಾರ್ ಹೊಸ ಸೆಡಾನ್ ಕಾರನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಇದರ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸರಣಿಯ ಕಾರುಗಳನ್ನು ವಿಸ್ತರಿಸಲು ನಿರ್ಧರಿಸಿದೆ. ಎಂಜಿ ಮೋಟಾರ್ ಕಂಪನಿಯು ಸೆಡಾನ್ ಕಾರನ್ನು ಬಿಡುಗಡೆಗೊಳಿಸಲಿದೆ ಎಂದು ಆಟೋಕಾರ್ ವರದಿ ಮಾಡಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ವಿಷನ್-ಐ ಎಂಪಿ‍‍ವಿ ಕಾನ್ಸೆಪ್ಟ್ ಹೊರತಾಗಿ ಎಂಜಿ ದೊಡ್ಡ ಸೆಡಾನ್ ಅನ್ನು ಸಹ ಪ್ರದರ್ಶಿಸುತ್ತದೆ.

ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಶಾಂಘೈ ಆಟೋಮೋಟಿವ್‍(ಎಸ್‍ಎಐ‍ಸಿ) ಹೆಸರಾಂತ ಬಾವೊಜುನ್‍‍ನ ಆರ್‍‍ಸಿ-6 ಆಧರಿಸಿ ಈ ಕಾರನ್ನು ಅಭಿವೃದ್ದಿ ಪಡಿಸಲಾಗಿದೆ. ಈ ಕಾರು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಈ ಸೆಡಾನ್ ಮೂರು ಬಾಕ್ಸ್ ವಿನ್ಯಾಸವನ್ನು ಹೊಂದಿದೆ. ಇನ್ನೂ ಈ ಸೆಡಾನ್‍‍ನಲ್ಲಿ ದೊಡ್ಡ ಗ್ರಿಲ್ ಅನ್ನು ಮತ್ತು ಫ್ಲಾಟ್ ಬಾನೆಟ್ ಅನ್ನು ಹೊಂದಿದೆ.

ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಇನ್ನು ಈ ಸೆಡಾನ್‍‍ನಲ್ಲಿ ಫಾಗ್‍ಲ್ಯಾಂಪ್ ಸುತ್ತಲೂ ಫೈಟರ್ ಜೆಟ್ ತರಹದ ಫಾಕ್ಸ್ ಇನ್‍‍ಟೆಕ್‍‍ಗಳನ್ನು ಅಳವಡಿಸಲಾಗಿದೆ. ಈ ಸೆಡಾನ್ 2,800 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದ್ದು, ಸ್ಕೋಡಾ ಸೂಪರ್ಬ್ ಗಿಂತ 41 ಎಂಎಂ ಕಡಿಮೆಯಾಗಿದೆ. ಈ ಸೆಡಾನ್‍‍ನ ಇಂಟಿರಿಯರ್‍‍ನಲ್ಲಿ ಸಾಕಷ್ಟು ಸ್ಪೇಸ್ ಅನ್ನು ಹೊಂದಿದೆ.

ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಚೀನಾ ಮಾರುಕಟ್ಟೆಯಲ್ಲಿರುವ ರೀತಿಯ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆಯಾ ಎಂಬುವುದು ತಿಳಿದು ಬಂದಿಲ್ಲ. ಈ ಸೆಡಾನ್‍‍ನಲ್ಲಿ ಇನ್ಸ್ ಟ್ರೂಮೆಂಟ್ ಪ್ಯಾನೆಲ್ ಬದಲಿಗೆ ಈ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನಲ್ಲಿರುವ ರೀತಿಯ ಟ್ವಿನ್ ಡಿಸ್‍‍ಪ್ಲೇಯನ್ನು ಹೊಂದಿರುವ ಸಾಧ್ಯತೆಗಳಿದೆ.

ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಇದಕ್ಕೆ ಹಲವಾರು ಫೀಚರ್ಸ್‍‍ಗಳು ಕನೆಕ್ಟಿವಿಟಿ ಹೊಂದಿರುವ ಸಾಧ್ಯತೆಗಳಿದೆ. ಈ ಸೆಡಾನ್‍‍ನಲ್ಲಿ ಎಂಜಿ ಹೆಕ್ಟರ್ ಮಾದರಿಯ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ. ಎಂಜಿ ಹೆಕ್ಟರ್ ಎಸ್‍ಯುವಿಯಲ್ಲಿ ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 143 ಬಿಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಇನ್ನೂ ಡೀಸೆಲ್ ಆವೃತ್ತಿಯಲ್ಲಿ 2.0 ಲೀಟರ್ ಟಬೋಜಾರ್ಜ್ಡ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮೂಲಕ 170 ಬಿಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎಂಜಿ ಮೋಟಾರ್

ಎಂಜಿ ಸೆಡಾನ್ 2021ರಲ್ಲಿ ಭಾರತದ ಶೋರೂಂಗಳನ್ನು ತಲುಪುವ ನಿರೀಕ್ಷೆಯಿದೆ. ಈ ಸೆಡಾನ್‍ನಲ್ಲಿ ಹಲವಾರು ಉನ್ನತ ಫೀಚರ್ಸ್‍‍ಗಳು ಮತ್ತು ಸಾಕಷ್ಟು ತಂತ್ರಜ್ಞಾನಗಳನ್ನು ಹೊಂದಿರಲಿದೆ. ಅಲ್ಲದೇ ಈ ಸೆಡಾನ್‍‍ಗೆ ಆಕರ್ಷಕವಾದ ಬೆಲೆಯನ್ನು ಘೋಷಿಸಬಹುದು. ಇದರ ಮೂಲಕ ಭಾರತದ ಜನಪ್ರಿಯ ಕಂಪನಿಗಳ ಸೆಡಾ‍‍ನ್‍‍ಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
MG sedan for India in the works. Read in Kannada.
Story first published: Friday, January 31, 2020, 19:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X