ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

ಕೆನಡಾ ಮೂಲದ ಬಹುಭಾಷಾ ನಟಿ ನೋರಾ ಫತೇಹಿ ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ಬಿಎಂಡಬ್ಲ್ಯು 5 ಸೀರಿಸ್ ಕಾರ್ ಅನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಅವರು ಖರೀದಿಸಿರುವ ಹೊಸ ಕಾರಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ.

ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

ಕಾರಿನ ವಿತರಣೆಯನ್ನು ತೆಗೆದುಕೊಳ್ಳುವಾಗ ನೋರಾ ಫತೇಹಿ ತೆಗೆದ ಫೋಟೋಗಳನ್ನು ಬಿಎಂಡಬ್ಲ್ಯು ಇಂಡಿಯಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದೆ. ನೋರಾ ಫತೇಹಿರವರು ಖರೀದಿಸಿರುವ ಈ ಪ್ರೀಮಿಯಂ ಸೆಡಾನ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.55.40 ಲಕ್ಷದಿಂದ ರೂ.68.39 ಲಕ್ಷಗಳಾಗಿದೆ.

ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

ಬಿಎಂಡಬ್ಲ್ಯು 5 ಸೀರಿಸ್ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ 530 ಐಎಂ ಸ್ಪೋರ್ಟ್, 520 ಡಿ ಐಷಾರಾಮಿ ಲೈನ್, 530 ಐ ಸ್ಪೋರ್ಟ್ ಹಾಗೂ 530 ಡಿ ಸ್ಪೋರ್ಟ್ ಮಾದರಿಗಳು ಸೇರಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

530 ಐಎಂ ಸ್ಪೋರ್ಟ್ ಮಾದರಿಯಲ್ಲಿ ಅಳವಡಿಸಲಾಗಿರುವ 2.0 ಲೀಟರಿನ ಪೆಟ್ರೋಲ್ ಎಂಜಿನ್ 252 ಬಿಹೆಚ್‌ಪಿ ಪವರ್ ಹಾಗೂ 350 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ.

ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

520 ಡಿ ಮಾದರಿಯಲ್ಲಿ 2.0 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 190 ಬಿಹೆಚ್‌ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 3.0 ಲೀಟರಿನ ಡೀಸೆಲ್ ಎಂಜಿನ್ ಜೊತೆಗೆ 265 ಬಿಹೆಚ್‌ಪಿ ಪವರ್ ಹಾಗೂ 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

ಈ ಕಾರು ಕೇವಲ 6.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನಲ್ಲಿ 12.3 ಇಂಚಿನ ಡಿಜಿಟಲ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಂ, ಆಪಲ್ ಕಾರ್ ಪ್ಲೇ ಹಾಗೂ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದೆ.

ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

ಇವುಗಳ ಜೊತೆಗೆ ಗೆಸ್ಚರ್ ಕಂಟ್ರೋಲ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಪಾರ್ಕಿಂಗ್ ಹಾಗೂ ಚಾಲನಾ ಸೌಲಭ್ಯಗಳಿಗಾಗಿ, ಮುಂಭಾಗ ಹಾಗೂ ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್, ಹ್ಯಾಂಡ್ಸ್ ಫ್ರೀ ಪಾರ್ಕಿಂಗ್, 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್, ಆಂಬಿಯೆಂಟ್ ಲೈಟಿಂಗ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಪಾರ್ಕ್ ಅಸಿಸ್ಟ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

6 ಏರ್‌ಬ್ಯಾಗ್, ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಕ್ರ್ಯಾಶ್ ಸೆನ್ಸಾರ್‌ನಂತಹ ಸುರಕ್ಷತಾ ಫೀಚರ್'ಗಳನ್ನು ಸಹ ಈ ಕಾರು ಹೊಂದಿದೆ. ಈ ಕಾರನ್ನು ಆಲ್ಪೈನ್ ವೈಟ್, ಬ್ಲ್ಯಾಕ್ ಸಫೈರ್, ಮೆಡಿಟರೇನಿಯನ್ ಬ್ಲೂ ಹಾಗೂ ಬ್ಲೂಸ್ಟೋನ್ ಮೆಟಾಲಿಕ್ ಎಂಬ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಕ್ರಿಸ್‌ಮಸ್‌ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಕಾರು ಖರೀದಿಸಿದ ಬಹುಭಾಷಾ ನಟಿ

ನೋರಾ ಫತೇಹಿರವರು ಮರ್ಸಿಡಿಸ್ ಬೆಂಝ್ ಜಿಎಲ್‌ಎ 200 ಡಿ,ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ಹೋಂಡಾ ಸಿಟಿ ಕಾರುಗಳನ್ನು ಸಹ ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ದುಬಾರಿ ಬೆಲೆಯ ಕಾರನ್ನು ಅಂದರೆ ಹೊಸ ಬಿಎಂಡಬ್ಲ್ಯು 5 ಸೀರಿಸ್ ಕಾರನ್ನು ಖರೀದಿಸಿದ್ದಾರೆ.

Most Read Articles

Kannada
English summary
Multi language actress Nora Fatehi buys new BMW 5 series car. Read in Kannada.
Story first published: Monday, December 28, 2020, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X