ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ಹೊಸ ಐ30 ಕಾರಿನ ಉತ್ಪಾದನೆಯನ್ನು ಯುರೋಪಿನಲ್ಲಿರುವ ತನ್ನ ಸ್ಥಾವರದಲ್ಲಿ ಮೇ 25ರಿಂದ ಪ್ರಾರಂಭಿಸುವುದಾಗಿ ಹ್ಯುಂಡೈ ತಿಳಿಸಿದೆ. ಹ್ಯುಂಡೈನ ಜೆಕ್ ರಿಪಬ್ಲಿಕ್ ಉತ್ಪಾದನಾ ಘಟಕದಲ್ಲಿ ಈ ಜನಪ್ರಿಯ ಮಾದರಿಯನ್ನು ಉತ್ಪಾದಿಸಲಿದೆ.

ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ವಿಶೇಷವೆಂದರೆ ಈ ಕಾರನ್ನು ಹ್ಯಾಚ್‌ಬ್ಯಾಕ್, ವ್ಯಾಗನ್ ಮತ್ತು ಫಾಸ್ಟ್‌ಬ್ಯಾಕ್ ಮೂರು ವಿಭಾಗದಲ್ಲಿ ಮಾರಾಟ ಮಾಡಲಾಗುತ್ತದೆ. ಹ್ಯುಂಡೈ ಐ30 ಕಾರು ಯುರೋಪಿನ ಮಾರುಕಟ್ಟೆಯಲ್ಲಿ 2007 ರಿಂದ ಮಾರಾಟದಲ್ಲಿದೆ. ಯುರೋಪಿನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. 2008ರಲ್ಲಿ ಮಾರಾಟ ಹೆಚ್ಚಾದಾಗ ಜೆಕ್ ರಿಪಬ್ಲಿಕ್ ಉತ್ಪಾದನಾ ಘಟಕದಲ್ಲಿ ಈ ಕಾರಿನ ಉತ್ಪಾದನೆಯನ್ನು ಹೆಚ್ಚಿಸಿದ್ದರು.

ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ಕಳೆದ ವರ್ಷ, ಎಚ್‌ಎಂಎಂಸಿ ಸ್ಥಾವರವು ಮೂರು ದಶಲಕ್ಷ ಯುನಿಟ್ ಗಳನ್ನು ಉತ್ಪಾದಿಸುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದ್ದರು. ಇದರೊಂದಿಗೆ ಹ್ಯುಂಡೈ ಕಂಪನಿಯು ಒಂದು ಮಿಲಿಯನ್ ಟಕ್ಸನ್ ಎಸ್‍ಯುವಿಗಳನ್ನು ಉತ್ಪಾದಿಸುವ ಮೂಲಕ ಮತ್ತೊಂದು ದಾಖಲೆಯನ್ನು ಮಾಡಿದ್ದರು.

MOST READ: ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ಎಚ್‌ಎಂಎಂಸಿಯ ವಾಹನಗಳನ್ನು ಐದು ಖಂಡಗಳ 70 ಕ್ಕೂ ಹೆಚ್ಚು ದೇಶಗಳಿಗೆ ವಿತರಿಸಲಾಗುತ್ತದೆ ಮತ್ತು ಇದು ಯುರೋಪಿನಲ್ಲಿ ದಕ್ಷಿಣ ಕೊರಿಯಾದ ಬ್ರ್ಯಾಂಡ್‌ನ ವ್ಯವಹಾರದ ಕೇಂದ್ರಭಾಗವಾಗಿದೆ.

ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ಇದರೊಂದಿಗೆ ಹ್ಯುಂಡೈ ಕಂಪನಿಯು ಹೊಸ ಐ30 ಪ್ರೀಮಿಯಂ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸ್ಪಾಟ್ ಟೆಸ್ಟ್ ನಡೆಸಿ ಸಜ್ಜಾಗುತ್ತಿದೆ. ಹ್ಯುಂಡೈ ಕಂಪನಿಯು ಐ30 ಪ್ರೀಮಿಯಂ ಕಾರನ್ನು ಬಿಡುಗಡೆಗೊಳಿಸುವ ಮೊದಲು 2020ರ ಐ20 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿ

ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ಐ30 ಪ್ರೀಮಿಯಂ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ. ಹ್ಯುಂಡೈ ಐ30 ಕಾರಿಗೆ ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.10 ರಿಂದ 12 ಲಕ್ಷಗಳಾಗಿರಬಹುದು. ಹೊಸ ಐ30 ಪ್ರೀಮಿಯಂ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ಹ್ಯುಂಡೈ ಐ30 ಕಾರು ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ರೀತಿಯಲ್ಲಿ 1.6 ಡಿ ಬ್ಯಾಡ್ಜ್ ಅನ್ನು ಹೊಂದಿದೆ. ಇದರ ಪ್ರಕಾರ ಈ ಐ30 ಕಾರಿನಲ್ಲಿ 1.6 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 115 ಬಿಹೆಚ್‌ಪಿ ಪವರ್ ಮತ್ತು 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು ಎಂದು ನಿರೀಕ್ಷ್ಜಿಸುತ್ತೇವೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಯುನಿಟ್ ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಯುನಿಟ್ ಅನ್ನು ಹೊಂದಿರಬಹುದು. ಯುರೂಪಿನಲ್ಲಿರುವ ಐ30 ಕಾರಿನಲ್ಲಿ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಹೊಸ ಐ30 ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾದ ಹ್ಯುಂಡೈ

ಈ ಹೊಸ ಹ್ಯುಂಡೈ ಐ30 ಪ್ರೀಮಿಯಂ ಕಾರನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿರುತ್ತದೆ. ಈ ಹೊಸ ಐ30 ಪ್ರೀಮಿಯಂ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು.

Most Read Articles

Kannada
English summary
New Hyundai i30 Production To Commence On May 25 In Europe. Read in Kannada.
Story first published: Saturday, May 23, 2020, 21:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X