ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ300 ಕಾಂಪ್ಯಾಕ್ಟ್ ಎಸ್‍ಯುವಿಯ ಪರ್ಫಾಮೆನ್ಸ್ ಮಾದರಿಯನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತ್ತು. ಸ್ಪೋಟ್ಜ್ ಎಂದು ಕರೆಯಲ್ಪಡುವ ಈ ಪರ್ಫಾಮೆನ್ಸ್ ಮಾದಿರಿಯು ಬ್ರ್ಯಾಂಡ್‌ನ ಎಂಸ್ಟಾಲಿಯನ್ ಟಿ-ಜಿಡಿ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಹೊಸ ಟರ್ಬೋ-ಪೆಟ್ರೋಲ್ ಎಂಜಿನ್ ನೊಂದಿಗೆ ಎಕ್ಸ್‌ಯುವಿ 300 ಸ್ಪೋರ್ಟ್ಜ್ ಭಾರತದಲ್ಲಿ ಬಿಡುಗಡೆಯಾದಾಗ ತನ್ನ ಸರಣಿಯಲ್ಲಿ ಪವರ್ ಫುಲ್ ಎಸ್‍ಯುವಿಯಾಗಿರಲಿದೆ. ಈ ಹೊಸ ಮಹೀಂದ್ರಾ ಸ್ಪೋಟ್ಜ್ ಕಾಂಪ್ಯಾಕ್ಟ್ ಎಸ್‍ಯುವಿಯು ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಬಹಿರಂಗವಾಗಿದೆ. ಮಹೀಂದ್ರಾ ಎಕ್ಸ್‌.ಯುವಿ 300 ಸ್ಪೋರ್ಟ್ಜ್ ಎಸ್‍ಯುವಿಯು ಈ ವರ್ಷದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ಸೋಂಕಿನ ಭೀತಿಯಿಂದ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್ ಎಸ್‍ಯುವಿಯಲ್ಲಿ 1.2-ಲೀಟರ್, ಮೂರು ಸಿಲಿಂಡರ್, ಡೈರೆಕ್ಟ್-ಇಂಜೆಕ್ಷನ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 129 ಬಿಹೆಚ್‌ಪಿ ಪವರ್ ಮತ್ತು 230 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಹಿಂದಿನ ಟರ್ಬೂ-ಪೆಟ್ರೋಲ್ ಎಂಜಿನ್‌ಗೆ ಹೋಲಿಸಿದರೆ, ಹೊಸ ಟಿ-ಜಿಡಿ ಎಂಜಿನ್ ಹೋಲಿಸಿದರೆ 20 ಬಿಹೆಚ್‌ಪಿ ಪವರ್ ಮತ್ತು 30 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಿ-ಜಿಡಿಐ ಎಂಜಿನ್ ಅನ್ನು ಆರು-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ಗೆ ಜೋಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಇನ್ನು ಬಾನೆಟ್‌ನ ಅಡಿಯಲ್ಲಿನ ಬದಲಾವಣೆಗಳ ಜೊತೆಗೆ ಎಕ್ಸ್‌ಯುವಿ300 ಸ್ಪೋರ್ಟ್ಜ್ ಮಾದರಿಯ ಸ್ಟ್ಯಾಂಡರ್ಡ್ ರೂಪಾಂತರವು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಹೊಸ ಎಸ್‍ಯುವಿಯ ಬಾನೆಟ್‌ನಲ್ಲಿ ಹೊಸ ಗ್ರಾಫಿಕ್ಸ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್ ಎಸ್‍ಯುವಿಯ ಡ್ಯಾಶ್‌ಬೋರ್ಡ್, ಸ್ಟೀಯರಿಂಗ್ ವ್ಹೀಲ್ ಮತ್ತು ಏರ್-ಕಾನ್ ಸೇರಿದಂತೆ ಕ್ಯಾಬಿನ್‌ನಾದ್ಯಂತ ಹೊಸ ರೆಡ್ ಎಕ್ಸೆಸ್ಟ್ ಗಳನ್ನು ಹೊಂದಿರುತ್ತದೆ.

ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಇನ್ನು ಕೆಂಪು ಬಣ್ಣದ ಕಾಂಟ್ರಾಸ್ಟ್ ಹೊಲಿಗೆಯೊಂದಿಗೆ ನವೀಕರಿಸಿದ ಸೀಟುಗಳನ್ನು ಹೊಂದಿರುತ್ತದೆ. ಇನ್ನು ಇಂಟಿರಿಯರ್ ನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಹೆಚ್ಚುವರಿ ಫೀಚರುಗಳನ್ನು ಹೊಂದಿರಲಿದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಮಹೀಂದ್ರಾ ಎಕ್ಸ್‌ಯುವಿ300 ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್ ಮತ್ತು ಮಾರುತಿ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿಯುಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ಹೊಸ ಸ್ಪೋರ್ಟ್ಜ್ ಮಾದರಿಯು ಬಿಡುಗಡೆಯಾಗುವ ವೇಳೆಗೆ ಕಿಯಾ ಸೊನೆಟ್ ಮತ್ತು ನಿಸ್ಸಾನ್ ಮ್ಯಾಗ್ನೆಟ್ ನಂತಹ ಹೊಸ ಪ್ರತಿಸ್ಪರ್ಧಿಗಳಿರುತ್ತದೆ.

ಮತ್ತಷ್ಟು ತಡವಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ಮಾದರಿ ಬಿಡುಗಡೆ

ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್ ಎಸ್‍ಯುವಿಯ ಬಿಡುಗಡೆಯು ಕರೋನಾ ಸೋಂಕಿನ ಭೀತಿಯಿಂದ ಮತ್ತಷ್ಟು ವಿಳಂಬವಾಗಿದೆ. ಈ ಹೊಸ ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್ ಪರ್ಫಾಮೆನ್ಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Most Read Articles

Kannada
English summary
Mahindra XUV300 Sportz T-GDi Launch Timeline Revealed. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X