ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‍ಯುವಿಯಾದ ಇಕ್ಯೂಸಿ 400 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಈ ಇಕ್ಯೂಸಿ ಎಸ್‍ಯುವಿಯು ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಬೇಕಾಗಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ ಈ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿಯ ಬಿಡುಗಡೆಯನ್ನು ಮುಂದೂಡಿದ್ದರು. ಆದರೆ ಶೀಘ್ರದಲ್ಲೇ ಮರ್ಸಿಡಿಸ್ ಬೆಂಝ್ ಕಂಪನಿಯು ಈ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇದೀಗ ದೆಹಲಿಯ ಡೀಲರ್ ಬಳಿ ಹೊಸ ಮರ್ಸಿಡಿಸ್ ಬೆಂಝ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ ಕಾಣಿಸಿಕೊಂಡಿದೆ. ಡೀಲರ್ ಬಳಿ ಇರುವ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯ ಚಿತ್ರಗಳನ್ನು ಟೀಮ್ ಬಿಹೆಚ್‍ಪಿ ಬಹಿರಂಗಪಡಿಸಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ದೇಶಿಯ ಮಾರುಕಟ್ಟೆಯಲ್ಲಿರುವ ಐಷಾರಾಮಿ ಕಾರುಗಳ ಪೈಕಿ ಮರ್ಸಿಡಿಸ್ ಬೆಂಝ್ ಕಂಪನಿಯ ಕಾರುಗಳು ಅಗ್ರಸ್ಥಾನದಲ್ಲಿವೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯೂ ಸಹ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಮರ್ಸಿಡಿಸ್ ಬೆಂಝ್ ಕಂಪನಿಯು ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಜಾಗತಿಕವಾಗಿ ಮೊದಲ ಬಾರಿಗೆ 2016ರ ಪ್ಯಾರಿಸ್ ಮೋಟಾರ್ ಶೋದಲ್ಲಿ ಅನಾವರಣಗೊಳಿಸಿತ್ತು. ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 80 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕನ್ನು ಅಳವಡಿಸಲಾಗಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 445-471 ಕಿ.ಮೀಗಳವರೆಗೆ ಚಲಿಸುತ್ತದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯ ಮೋಟಾರ್ 402 ಬಿಹೆಚ್‍ಪಿ ಪವರ್ ಮತ್ತು 760 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಬಿಎಂಡಬ್ಲ್ಯು ಎಕ್ಸ್7 ಡಾರ್ಕ್ ಶ್ಯಾಡೋ ಎಸ್‍ಯುವಿ

ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಈ ಎಲೆಕ್ಟ್ರಿಕ್ ಎಸ್‍ಯುವಿಯು ಕೇವಲ 5.1 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 180 ಕಿ.ಮೀಗಳಾಗಿದೆ. ಜಿಎಲ್‌ಸಿ ಎಸ್‍ಯುವಿ ಮಾದರಿಯ ವಿನ್ಯಾಸವನ್ನು ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿಯು ಹೊಂದಿದೆ.

ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಈ ಎಸ್‍ಯುವಿಯಲ್ಲಿ ಹೊಸ ಹೆಡ್‌ಲೈಟ್‌ಗಳೊಂದಿಗೆ ಎಲ್‌ಇಡಿ ಸ್ಟ್ರಿಪ್ ಗ್ರಿಲ್‌ನಲ್ಲಿ ಮರ್ಸಿಡಿಸ್ ಬ್ಯಾಡ್ಜಿಂಗ್ ಅನ್ನು ಅಳವಡಿಸಲಾಗಿದೆ. ಕೇವಲ 40 ನಿಮಿಷಕ್ಕೆ ಶೇಕಡಾ 80 ರಷ್ಟು ಚಾರ್ಜ್‌ ಆಗುವಂತಹ ಪಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಇದರೊಂದಿಗೆ ಜರ್ಮನಿಯ ಮರ್ಸಿಡಿಸ್ ಬೆಂಝ್ ತನ್ನ ಹೊಸ ಎಸ್-ಕ್ಲಾಸ್ ಕಾರನ್ನು ಕೂಡ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇತ್ತೀಚೆಗೆ ಈ 2021ರ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದರು.

ಡೀಲರ್ ಬಳಿ ಕಾಣಿಸಿಕೊಂಡ ಮರ್ಸಿಡಿಸ್ ಇಕ್ಯೂಸಿ 400 ಎಲೆಕ್ಟ್ರಿಕ್ ಎಸ್‍ಯುವಿ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

Most Read Articles

Kannada
English summary
Mercedes EQC 400 Electric SUV Spotted At Delhi Dealership. Read In Kannnada.
Story first published: Monday, August 24, 2020, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X