Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಹುನಿರೀಕ್ಷಿತ ಟಾಟಾ ನೆಕ್ಸಾನ್ ಎಕ್ಸ್‌ಎಂ(ಎಸ್) ವೆರಿಯೆಂಟ್ ಬಿಡುಗಡೆ
ಟಾಟಾ ಮೋಟಾರ್ಸ್ ಕಾರುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳ ಪಟ್ಟಿಯಲ್ಲಿ ನೆಕ್ಸಾನ್ ಕಾಂಪ್ಯಾಕ್ಟ್-ಎಸ್‍ಯುವಿಯು ಅಗ್ರಸ್ಥಾನದಲ್ಲಿದೆ. ಇದೀಗ ಟಾಟಾ ತನ್ನ ನೆಕ್ಸಾನ್ ಮಾದರಿಯ ಎಕ್ಸ್‌ಎಂ(ಎಸ್) ಎಂಬ ಹೊಸ ವೆರಿಯೆಂಟ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಟಾಟಾ ನೆಕ್ಸಾನ್ ಎಕ್ಸ್‌ಎಂ(ಎಸ್) ವೆರಿಯೆಂಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಹೊಸ ನೆಕ್ಸಾನ್ ಎಕ್ಸ್‌ಎಂ(ಎಸ್) ಆರಂಭಿಕೆ ಬೆಲೆಯು ರೂ.8.36 ಲಕ್ಷಗಳಾಗಿದೆ. ಇನ್ನು ಹೊಸ ವರಿಯೆಂಟ್‌ನ ಡೀಸೆಲ್-ಆಟೋಮ್ಯಾಟಿಕ್ ಆವೃತ್ತಿಗೆ ರೂ.10.30 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. ಬಿಡುಗಡೆಯಾಗಲಿರುವ ಕಿಯಾ ಸೊನೆಟ್ ಮಾದರಿಗೆ ನೆಕ್ಸಾನ್ ಪೈಪೋಟಿ ನೀಡಲು ಸಜ್ಜಾಗಿದೆ.

ಹೊಸ ಟಾಟಾ ನೆಕ್ಸಾನ್ ಎಕ್ಸ್‌ಎಂ(ಎಸ್) ವೆರಿಯೆಂಟ್ ನೆಕ್ಸಾನ್ ಸರಣಿಯ ‘ಎಕ್ಸ್‌ಇ' ಮತ್ತು ‘ಎಕ್ಸ್‌ಎಂ' ವರಿಯೆಂಟ್‌ಗಳಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಹೊಸ ನೆಕ್ಸಾನ್ ಎಕ್ಸ್‌ಎಂ(ಎಸ್) ವೆರಿಯೆಂಟ್ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಎಲೆಕ್ಟ್ರಿಕ್ ಸನ್‌ರೂಫ್ ಸೇರ್ಪಡೆಯ ಹೊರತಾಗಿ, ಹೊಸ ನೆಕ್ಸನ್ ಎಕ್ಸ್‌ಎಂ(ಎಸ್) ವರಿಯೆಂಟ್‌ನಲ್ಲಿ ಹಲವು ಪ್ರೀಮಿಯಂ ಫೀಚರ್ ಗಳನ್ನು ಹೊಂದಿದೆ. ಈ ಎಕ್ಸ್‌ಎಂ(ಎಸ್) ವೆರಿಯೆಂಟ್‌ನಲ್ಲಿ ಹೆಡ್‌ಲ್ಯಾಂಪ್, ರೈನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಸ್ಟೀಯರಿಂಗ್-ಮೌಂಟಡ್ ಕಂಟ್ರೋಲ್ ಗಳನ್ನು ಒಳಗೊಂಡಿದೆ.

ಹೊಸ ಟಾಟಾ ನೆಕ್ಸಾನ್ ಎಕ್ಸ್‌ಎಂ(ಎಸ್) ವರಿಯೆಂಟ್‌ನಲ್ಲಿ ‘ಎಕ್ಸ್‌ಎಂ' ಮಾದರಿಯಲ್ಲಿರುವಂತಹ ಎಲ್‌ಇಡಿ ಡಿಆರ್‌ಎಲ್‌ಗಳು, ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಹಿಲ್-ಹೋಲ್ಡ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದರೂಂದಿಗೆ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಮಲ್ಟಿಪಲ್ ಡ್ರೈವ್ ಮೋಡ್‌ಗಳನ್ನು ಹೊಂದಿವೆ. ಟಾಟಾ ನೆಕ್ಸಾನ್ ಎಕ್ಸ್‌ಎಂ(ಎಸ್) ವರಿಯೆಂಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ.

ಇದರಲ್ಲಿ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾಆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಹೊಸ ಟಾಟಾ ನೆಕ್ಸನ್ ಎಕ್ಸ್‌ಎಂ(ಎಸ್) ವೆರಿಯೆಂಟ್‌ನಲ್ಲಿ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ. ಹೆಚ್ಚಿನ ಗ್ರಾಹಕರನ್ನು ಬ್ರಾಂಡ್‌ನತ್ತ ಆಕರ್ಷಿಸಲು ಈ ಫೀಚರ್ ಅನ್ನು ಪರಿಚಯಿಸಲಾಗಿದೆ. ಟಾಟಾ ನೆಕ್ಸಾನ್ ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಗೆ ಟಕ್ಕರ್ ಕೊಡಲು ರೆಡಿಯಾಗಿದೆ.