ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಪೊಲೊ ಮತ್ತು ವೆಂಟೊ ಕಾರುಗಳನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ದೇಶಾದ್ಯಂತ ಲಾಕ್‌ಡೌನ್ ಘೋಷಿಸುವ ಮೊದಲೇ ಈ ಎರಡೂ ಮಾದರಿಗಳ ಬೆಲೆಗಳನ್ನು ಪ್ರಕಟಿಸಿದ್ದರು.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ದೇಶದಾದ್ಯಂತ ಕರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಮಾಡಲಾಗಿತ್ತು. ಇದರಿಂದಾಗಿ ಈ ಆಟೋಮ್ಯಾಟಿಕ್ ರೂಪಾಂತರಗಳ ವಿತರಣೆಯು ವಿಳಂಭವಾಗಿದೆ. ಪೊಲೊ ಮತ್ತು ವೆಂಟೊ ಕಾರುಗಳ ಆಟೋಮ್ಯಾಟಿಕ್ ರೂಪಾಂತರಗಳ ವಿತರಣೆಯನ್ನು ಆಗಸ್ಟ್ ತಿಂಗಳಲ್ಲಿ ಪ್ರಾರಂಭಿಸಬಹುದು ಎಂದು ವರದಿಗಳು ಪ್ರಕಟವಾಗಿದೆ. ಫೋಕ್ಸ್‌ವ್ಯಾಗನ್ ಸರಣಿಯಲ್ಲಿ ಪೊಲೊ ಮತ್ತು ವೆಂಟೊ ಜನಪ್ರಿಯ ಮಾದರಿಗಳಾಗಿವೆ

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ಹೊಸ ಫೋಕ್ಸ್‌ವ್ಯಾಗನ್ ವೆಂಟೊ 1.0 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಹೆಚ್ಚಿನ ಪವರ್ ಡ್ರೈವಿಬಿಲಿಟಿ, ಉತ್ತಮ ಕಾರ್ಯಕ್ಷಮತೆ, ಸುಧಾರಿತ ಇಂಧನ ದಕ್ಷತೆಯನ್ನು ನೀಡುತ್ತದೆ ಮತ್ತು ಹೆಚ್ಚು ಸಮರ್ಥನೀಯ ಎಂಜಿನ್ ಆಯ್ಕೆಯಾಗಿದೆ. ಈ ವೆಂಟೊ ಕಾರಿನಲ್ಲಿ ಫೋಕ್ಸ್‌ವ್ಯಾಗನ್‍ನ ಪ್ರಶಸ್ತಿ ವಿಜೇತ ಟಿ‍ಎಸ್‍ಐ ತಂತ್ರಜ್ಞಾನವನ್ನು ಒಳಗೊಂಡಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ಫೋಕ್ಸ್‌ವ್ಯಾಗನ್ ವೆಂಟೊ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಿಯಾಝ್, ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ಫೋಕ್ಸ್‌ವ್ಯಾಗನ್ ಪೊಲೊ ಕಾರಿನಲ್ಲಿ 1.2 ಲೀಟರ್ ಎಂಜಿನ್ ಅನ್ನು ಬದಲಾಯಿಸಿ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 110 ಬಿ‍‍ಹೆಚ್‍‍‍ಪಿ ಪವರ್ ಮತ್ತು 175 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನ್ಯುವಲ್ ಗೇರ್‍‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ಪೊಲೊ ಕಾರಿನ ಇತರ ರೂಪಾಂತರಗಳಲ್ಲಿ 6 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಪ್ರತಿ ಲೀಟರ್‌ಗೆ 18.24 ಕಿ.ಮೀ ಮೈಲೇಜ್ ಅನ್ನು ಹೊಂದಿದೆ. ಈ ಹಿಂದಿನ ಮಾದರಿಗಳಲ್ಲಿ ಇದ್ದ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಬದಲಾಯಿಸಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರು ಹಲವಾರು ರೂಪಾಂತಗಳಿವೆ. ಇದು ಟ್ರೆಂಡ್‍‍‍ಲೈನ್, ಕಂಫರ್ಟ್‍‍ಲೈನ್ ಹೈಲೈನ್ ಮತ್ತು ಹೈಲೈನ್ ಪ್ಲಸ್ ಆಗಿದೆ. ಹೊಸ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ-ಲೈನ್ ಟಾಪ್-ಸ್ಪೆಕ್ ರೂಪಾಂರವಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಕಾರುಗಳು ಹೊಸ 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಜಿಟಿ ಆವೃತ್ತಿಯು ಹೆಚ್ಚು ಜನಪ್ರಿಯವಾಗಿದೆ.

ಶೀಘ್ರದಲ್ಲೇ ಪ್ರಾರಂಭವಾಗಲಿದೆ ಫೋಕ್ಸ್‌ವ್ಯಾಗನ್ ಪೊಲೊ, ವೆಂಟೊ ಆಟೋಮ್ಯಾಟಿಕ್ ಆವೃತ್ತಿಗಳ ವಿತರಣೆ

ದೇಶದಾದ್ಯಂತ ಕರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಮಾಡಲಾಗಿತ್ತು. ಇದರಿಂದಾಗಿ ಈ ಆಟೋಮ್ಯಾಟಿಕ್ ರೂಪಾಂತರಗಳ ವಿತರಣೆಯು ವಿಳಂಭವಾಗಿದೆ ಎಂದು ನಿರೀಕ್ಷಿಸುತ್ತೇವೆ. ಶೀಘ್ರದಲ್ಲೇ ಈ ಕಾರುಗಳ ವಿತರಣೆಯನ್ನು ಆರಂಭಿಸಬಹುದು.

Most Read Articles

Kannada
English summary
Volkswagen Polo & Vento Automatic Deliveries Expected To Begin In August. Read In Kannada.
Story first published: Saturday, June 13, 2020, 13:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X