ಸ್ಥಗಿತವಾಗಲಿವೆ ನಿಸ್ಸಾನ್ ಕಂಪನಿಯ ಜನಪ್ರಿಯ ಕಾರು ಮಾದರಿಗಳು

ನಿಸ್ಸಾನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಮಾದರಿಗಳಾದ ಮೈಕ್ರಾ ಮತ್ತು ಸನ್ನಿ ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ. ಮೈಕ್ರಾ, ಮೈಕ್ರಾ ಆಕ್ಟಿವ್ ಮತ್ತು ಸನ್ನಿ ಮಾದರಿಗಳ ಹೆಸರನ್ನು ನಿಸ್ಸಾನ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಕಲಾಗಿದೆ.

ಸ್ಥಗಿತವಾಯ್ತು ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಗಳು

ಇನ್ನು ನಿಸ್ಸಾನ್ ಕಂಪನಿಯ ಸರಣಿಯಲ್ಲಿರುವ ಕಿಕ್ಸ್ ಮತ್ತು ಜಿಟಿ-ಆರ್ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಮೈಕ್ರಾ ಮಾದರಿಯು 1.2-ಲೀಟರ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 76 ಬಿಹೆಚ್‌ಪಿ ಪವರ್ ಮತ್ತು 104 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಸ್ಥಗಿತವಾಯ್ತು ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಗಳು

ಮೈಕ್ರಾ ಆಕ್ಟಿವ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 67 ಬಿಹೆಚ್‌ಪಿ ಪವರ್ ಮತ್ತು 104 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿತ್ತು.

MOST READ: ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮಾರುತಿ ಸ್ವಿಫ್ಟ್ ಫೇಸ್‌ಲಿಫ್ಟ್

ಸ್ಥಗಿತವಾಯ್ತು ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಗಳು

ಮೈಕ್ರಾದೊಂದಿಗೆ 1.5-ಲೀಟರ್ ಆಯಿಲ್ ಬರ್ನರ್ ಸಹ ಲಭ್ಯವಿತ್ತು, ಈ ಎಂಜಿನ್ 63 ಬಿಹೆಚ್‌ಪಿ ಪವರ್ ಮತ್ತು 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿತ್ತು.

ಸ್ಥಗಿತವಾಯ್ತು ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಗಳು

ನಿಸ್ಸಾನ್ ಸನ್ನಿ 1.5-ಲೀಟರ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 98 ಬಿಹೆಚ್‌ಪಿ ಪವರ್ ಮತ್ತು 134 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿಗೆ ಜೋಡಿಸಲಾಯಿತು. ಇದರೊಂದಿಗೆ ನಿಸ್ಸಾನ್ ಸನ್ನಿ ಮಾದರಿಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಹೊಂದಿದೆ. ಈ ಎಂಜಿನ್ 85 ಬಿಹೆಚ್‌ಪಿ ಪವರ್ ಮತ್ತು 200 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಸ್ಥಗಿತವಾಯ್ತು ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಗಳು

ನಿಸ್ಸಾನ್ ತನ್ನ ಬಿಎಸ್-6 ಕಿಕ್ಸ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 2020ರ ನಿಸ್ಸಾನ್ ಕಿಕ್ಸ್ ಕಾರಿನ ಮಾಹಿತಿಯು ಅಧಿಕೃತವಾಗಿ ಬಹಿರಂಗವಾಗಿದೆ.

ಸ್ಥಗಿತವಾಯ್ತು ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಗಳು

2020ರ ನಿಸ್ಸಾನ್ ಕಿಕ್ಸ್ ಕಾರು ಎಕ್ಸ್‌ಎಲ್, ಎಕ್ಸ್‌ವಿ, ಎಕ್ಸ್‌ವಿ ಪ್ರೀಮಿಯಂ ಮತ್ತು ಎಕ್ಸ್‌ವಿ ಪ್ರೀಮಿಯಂ (ಒ)ಎಂಬ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. 2020ರ ನಿಸ್ಸಾನ್ ಕಿಕ್ಸ್ ಕಾರಿನಲ್ಲಿ 1.3 ಲೀಟರ್ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಸ್ಥಗಿತವಾಯ್ತು ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಗಳು

ಈ ಎಂಜಿನ್ 154 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 8-ಹಂತದ ಸಿವಿಟಿಗೆ ಜೋಡಿಸಲಾಗಿದೆ. ನಿಸ್ಸಾನ್ ಸರಣಿಯಲ್ಲಿ ಅತಿ ಹೆಚ್ಚು ಪವರ್‍ ಫುಲ್ ಎಂಜಿನ್ ಇದಾಗಿದೆ.

ಸ್ಥಗಿತವಾಯ್ತು ನಿಸ್ಸಾನ್ ಕಂಪನಿಯ ಜನಪ್ರಿಯ ಮಾದರಿಗಳು

ನಿಸ್ಸಾನ್ ಕಂಪನಿಯು ತನ್ನ ಜನಪ್ರಿಯಾ ಮೈಕ್ರಾ ಮತ್ತು ಸನ್ನಿ ಮಾದರಿಗಳ ಹೆಸರನ್ನು ನಿಸ್ಸಾನ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಕಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಬಿಎಸ್-6 ಆವೃತ್ತಿಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

Most Read Articles

Kannada
English summary
Nissan Removed The Micra And Sunny From Its India Website. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X