ಕರೋನಾ ಸಂಕಷ್ಟದಲ್ಲೂ 34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ಲಾಕ್‌ಡೌನ್ ಸಂದರ್ಭದಲ್ಲಿ ಭಾರೀ ಪ್ರಮಾಣದ ನಷ್ಟ ಅನುಭಿಸಿದ್ದ ಆಟೋ ಕಂಪನಿಗಳು ಇದೀಗ ನೀರಿಕ್ಷೆಗೂ ಮೀರಿ ಗ್ರಾಹಕರ ಬೇಡಿಕೆ ಪಡೆದುಕೊಳ್ಳುತ್ತಿದ್ದು, ರೆನಾಲ್ಟ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮಾರಾಟ ಮಳಿಗೆಗಳನ್ನು ವಿವಿಧ ನಗರಗಳಿಗೆ ವಿಸ್ತರಣೆ ಮಾಡುತ್ತಿದೆ.

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ಕರೋನಾ ವೈರಸ್ ಪರಿಣಾಮ ಕಳೆದ ಕೆಲ ತಿಂಗಳ ಹಿಂದೆ ಹೊಸ ವಾಹನ ಮಾರಾಟದಲ್ಲಿ ಭಾರೀ ಕುಸಿತ ಉಂಟಾದ ಪರಿಣಾಮ ನೂರಾರು ವಾಹನ ಮಾರಾಟ ಮಳಿಗೆಗಳನ್ನು ಕದಮುಚ್ಚಿದ್ದವು. ಆದರೆ ಕರೋನಾ ವೈರಸ್ ಪರಿಣಾಮವೇ ಇದೀಗ ಹೊಸ ವಾಹನಗಳು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ವಿವಿಧ ಆಟೋ ಕಂಪನಿಗಳ ನೂರಾರು ಹೊಸ ವಾಹನ ಮಾರಾಟ ಮಳಿಗೆಗಳು ಇದೀಗ ತಲೆಎತ್ತಿವೆ.

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ಕಳೆದ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 34 ಹೊಸ ಕಾರು ಮಾರಾಟ ಮಳಿಗೆಗಳು ಮತ್ತುಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಒಟ್ಟು 90 ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡುವ ಗುರಿಹೊಂದಿದೆ.

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯು ಭಾರತದಲ್ಲಿ ಸದ್ಯ ಹೊಸ ವಾಹನ ಮಾರಾಟ ಮಳಿಗೆಗಳನ್ನು ಸೇರಿ ಒಟ್ಟು 475 ಮಾರಾಟ ಮಳಿಗೆಗಳನ್ನು ಹೊಂದಿದ್ದು, ಹೊಸ ವಾಹನ ಮಾರಾಟ ಮಳಿಗೆಗಳನ್ನು ಮೆಟ್ರೋ ನಗರಗಳಿಂತಲೂ ಹೆಚ್ಚು ಎರಡನೇ ದರ್ಜೆಯ ಮಾಹಾನಗರಗಳಲ್ಲಿ ತೆರೆಯಲಾಗುತ್ತಿದೆ.

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ಎಂಟ್ರಿ ಲೆವಲ್ ಕಾರುಗಳ ಮೂಲಕ ಜನಪ್ರಿಯಗೊಂಡಿರುವ ಮಾರುತಿ ಸುಜುಕಿ ಕಂಪನಿಗೆ ಪೈಪೋಟಿ ನೀಡಲು ಮುಂದಾಗಿರುವ ರೆನಾಲ್ಟ್ ಕಂಪನಿಯು ಭಾರತದಲ್ಲಿ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗಿದ್ದು, ಗ್ರಾಮೀಣ ವಿಭಾಗದ ಗ್ರಾಹಕರ ಗುರಿಯಾಗಿಸಿ ಎಂಟ್ರಿ ಲೆವಲ್ ಕಾರುಗಳನ್ನು ರಸ್ತೆಗಿಳಿಸಲು ಮುಂದಾಗಿದೆ.

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ಇದಕ್ಕಾಗಿಯೇ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ನಡೆಸಿರುವ ರೆನಾಲ್ಟ್ ಕಂಪನಿಯು ಹೊಸ ಕಾರುಗಳ ಉತ್ಪನ್ನಗಳೊಂದಿಗೆ ಹೊಸದಾಗಿ 330 ಹೊಸ ಕಾರು ಮಾರಾಟ ಮಳಿಗೆಗಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತೆರೆಯಲು ಸಿದ್ದವಾಗಿವೆ.

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ಗ್ರಾಮೀಣ ವಿಭಾಗದ ಗ್ರಾಹಕರನ್ನೇ ಗುರಿಯಾಗಿಸಿ ವಿವಿಧ ಮಾದರಿಯ ಬಜೆಟ್ ಕಾರುಗಳನ್ನು ಸಿದ್ದಪಡಿಸುತ್ತಿರುವುದಾಗಿ ಸಂದರ್ಶನದೊಂದರಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿರುವ ರೆನಾಲ್ಟ್ ಹಿರಿಯ ಅಧಿಕಾರಿಗಳು, ಬಜೆಟ್ ಬೆಲೆಯ ಮಾರುತಿ ಸುಜುಕಿ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟ್ರೈಬರ್ ಮತ್ತು ಕ್ವಿಡ್ ಕಾರು ಮಾದರಿಗಳ ಮಾರಾಟ ಮೂಲಕ ಕಾರು ಮಾರಾಟದಲ್ಲಿ ಟಾಪ್ 6 ಸ್ಥಾನಕ್ಕೇರಿರುವ ರೆನಾಲ್ಟ್ ಕಂಪನಿಯು ಶೀಘ್ರದಲ್ಲೇ ಟ್ರೈಬರ್ ಟರ್ಬೋ ಪೆಟ್ರೋಲ್, ಕಿಗರ್ ಕಂಪ್ಯಾಕ್ಟ್ ಎಸ‌್‌ಯುವಿ ಮತ್ತು ಕ್ಯಾಪ್ಟರ್ ಬಿಎಸ್-6 ಮಾದರಿಗಳ ಬಿಡುಗಡೆಯಾಗಿ ಸಿದ್ದವಾಗುತ್ತಿದೆ.

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದ್ದು, ಡಸ್ಟರ್ ಟರ್ಬೋ ಪೆಟ್ರೋಲ್ ಮಾದರಿಯು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆಯುತ್ತಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

34 ಹೊಸ ಕಾರು ಮಾರಾಟ ಮಳಿಗೆಗಳನ್ನು ತೆರೆದ ರೆನಾಲ್ಟ್ ಇಂಡಿಯಾ

ಹೊಸ ಎಮಿಷನ್ ಪ್ರಕಾರ ಪೆಟ್ರೋಲ್ ಎಂಜಿನ್ ಆಯ್ಕೆಯ ಕಾರುಗಳನ್ನು ಮಾತ್ರವೇ ಮಾರಾಟ ಮಾಡುತ್ತಿರುವ ರೆನಾಲ್ಟ್ ಕಂಪನಿಯು ಗ್ರಾಮೀಣ ಭಾಗದ ಗ್ರಾಹಕರನ್ನು ಗುರಿಯಾಗಿ ಬಜೆಟ್ ಬೆಲೆಯ ಕಾರುಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಹೊಸ ಕಾರುಗಳು ಮಾರುತಿ ಸುಜುಕಿ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿವೆ ಎನ್ನಲಾಗಿದೆ.

Most Read Articles

Kannada
English summary
Renault Expands Dealer Network Across India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X