ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಆತಂಕದಲ್ಲಿದ್ದು, ವಾಣಿಜ್ಯ ವ್ಯಾಪಾರ ಕುಸಿತದಿಂದಾಗಿ ಆರ್ಥಿಕ ಅಭಿವೃದ್ದಿಯು ಸಂಪೂರ್ಣವಾಗಿ ನೆಲಕಚ್ಚಿದೆ. ಇದರಲ್ಲಿ ಆಟೋ ಉದ್ಯಮವು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ವಿವಿಧ ಆಟೋ ಕಂಪನಿಗಳು ಹೊಸ ವಾಹನಗಳ ಬಿಡುಗಡೆಯನ್ನು ಮುಂದೂಡಿಕೆ ಮಾಡಿವೆ.

ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಫ್ರೆಂಚ್ ಆಟೋ ಕಂಪನಿ ರೆನಾಲ್ಟ್ ಕೂಡಾ ಕರೋನಾ ಸಂಕಷ್ಟದಿಂದಾಗಿ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ವಾಹನ ಮಾರಾಟದಲ್ಲಿ ಕೆಲವು ಕಠಿಣ ಕ್ರಮಗಳನ್ನು ಪ್ರಕಟಿಸಿದೆ. ಸದ್ಯ ಹೊಸ ವಾಹನಗಳ ಬಿಡುಗಡೆಯನ್ನು ಮುಂದೂಡಿಕೆ ಮಾಡಲು ನಿರ್ಧರಿಸಿರುವ ರೆನಾಲ್ಟ್ ಮತ್ತು ಸಮೂಹ ಕಂಪನಿಗಳು ವೈರಸ್ ಪ್ರಮಾಣವು ತಗ್ಗಿದ ನಂತರವಷ್ಟೇ ಹೊಸ ವಾಹನಗಳ ಬಿಡುಗಡೆಗೆ ಮುಂದಾಗಿದೆ.

ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಇದರಿಂದಾಗಿ ಭಾರತದಲ್ಲಿ ಬಿಡುಗಡೆಯ ಸಿದ್ದತೆಯಲ್ಲಿದ್ದ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮುಂದೂಡಿರುವ ರೆನಾಲ್ಟ್ ಇಂಡಿಯಾ ಕಂಪನಿಯು 2020ರ ಕೊನೆಯಲ್ಲಿ ಇಲ್ಲವೇ 2021ರ ಆರಂಭದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಸದ್ಯ ಹೊಸ ಕಾರನ್ನು ಹೆಚ್‌ಬಿಸಿ ಕೋಡ್‌ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಕಿಗರ್ ಹೆಸರನ್ನೇ ಅಧಿಕೃತವಾಗಿ ಕರೆಯುವುದು ಬಹುತೇಕ ಖಚಿತವಾಗಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡಸ್ಟರ್ ಕಾರಿಗಿಂತಲೂ ತುಸು ಸಣ್ಣ ಗಾತ್ರವನ್ನು ಹೊಂದಲಿರುವ ಕಿಗರ್ ಕಾರು ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಸೂಕ್ತ ಆಯ್ಕೆಯಾಗಲಿದ್ದು, ಕೈಗೆಟುಕುವ ಬೆಲೆಯೊಂದಿಗೆ ಮಧ್ಯಮ ವರ್ಗದ ಗ್ರಾಹಕರ ಗಮನಸೆಳೆಯಲಿದೆ.

ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಇತರೆ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಂತಲೂ ಕಿಗರ್ ಕಾರು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರ ಐದು ಆಸನ ಮಾದರಿಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಹೊಸ ಕಾರಿನ ಎಂಜಿನ್ ಆಯ್ಕೆ ಆಕರ್ಷಕವಾಗಿದ್ದು, ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

MOST READ: ಎರಡು ಚಕ್ರಗಳಲ್ಲಿ ಚಲಿಸಿದ ಟ್ರಾಕ್ಟರ್, ಆನಂದ್ ಮಹೀಂದ್ರಾ ಹೇಳಿದ್ದೇನು?

ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಹೊಸ ಕಿಗರ್ ಕಾರಿನಲ್ಲಿ ರೆನಾಲ್ಟ್ ಸಂಸ್ಥೆಯು ಹೊಸದಾಗಿ ಅಭಿವೃದ್ದಿಗೊಳಿಸಲಾಗುತ್ತಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡುವ ಸಾಧ್ಯತೆಗಳಿದ್ದು, ಇದೇ ಎಂಜಿನ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ಟ್ರೈಬರ್ ಟರ್ಬೋ ಆವೃತ್ತಿಯಲ್ಲೂ ಜೋಡಣೆ ಮಾಡಲು ನಿರ್ಧರಿಸಲಾಗಿದೆ.

ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಹೀಗಾಗಿ ಕಿಗರ್ ಕಾರು ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಮಾರಾಟವಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರಲಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕರೋನಾ ಸಂಕಷ್ಟ- ಕಿಗರ್ ಕಾರು ಬಿಡುಗಡೆ ಮುಂದೂಡಿದ ರೆನಾಲ್ಟ್..!

ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.8 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಕಿಗರ್ ಮತ್ತು ನಿಸ್ಸಾನ್ ಹೊಸ ಮ್ಯಾಗ್ನೆಟ್ ಕಾರು ಕೂಡಾ ಒಂದೇ ಮಾದರಿಯ ಎಂಜಿನ್ ಪಡೆದುಕೊಳ್ಳಲಿವೆ.

Most Read Articles

Kannada
English summary
Renault Kiger Launch To Be Pushed To 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X