ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಟಾಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಆಲ್‌‌ಟ್ರೊಜ್ ಕಾರನ್ನು ಬಿಡುಗಡೆಗೊಳಿಸಿತು. ಟಾಟಾ ಆಲ್‌‌ಟ್ರೊಜ್ ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಕಾರುಗಳಲ್ಲಿ ಒಂದಾಗಿದೆ.

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಟಾಟಾ ಆಲ್‌‌ಟ್ರೊಜ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಪ್ರೀಮಿಯಂ ಕಾರನ್ನು ಮಾಡಿಫೈ ಮಾಡುವುದು ಬಹಳ ವಿರಳ. ಆದರೆ ಕೇರಳದ ಕೊನ್ನಿ ಮೂಲದ ಅಮಲ್ಜಿತ್ ಅವರು ಈ ಪ್ರೀಮಿಯಂ ಕಾರನ್ನು ಆಕರ್ಷಕವಾಗಿ ಮಾಡಿಫೈಗೊಳಿಸಿದ್ದಾರೆ. ಅವರು ಆಲ್‌‌ಟ್ರೊಜ್ ಕಾರಿನಲ್ಲಿ 17 ಇಂಚಿನ ಎಡಿ ರಿಮ್‌ಗಳಿಂದ ಕೂಡಿದ ಮೈಕೆಲಿನ್ ಟಯರುಗಳನ್ನು ಒಳಗೊಂಡಿದೆ.

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಈ ಮಾಡಿಫೈ ಟಾಟಾ ಆಲ್‌‌ಟ್ರೊಜ್ ಕಾರಿನಲ್ಲಿ ಸಿಲ್ವರ್ ಫಿನಿಶಿಂಗ್ ಹೊಂದಿರುವ ಮಲ್ಟಿ-ಸ್ಪೋಕ್ ರಿಮ್ಸ್ ಹ್ಯಾಚ್‌ಬ್ಯಾಕ್‌ಗೆ ಸ್ಪೋರ್ಟಿಯರ್ ಲುಕ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಕ್ರೋಮ್ ಬಿಟ್‌ಗಳನ್ನು ಪಿಯಾನೋ-ಬ್ಲ್ಯಾಕ್ ವಿನೈಲ್ ನಿಂದ ಕೂಡಿದೆ.ಈ ಮಾಡಿಫೈಗೊಂಡ ಟಾಟಾ ಆಲ್‌‌ಟ್ರೊ ಬ್ರೇಕ್ ಕಾಲಿಪರ್‌ಗಳು ಫೆರಾರಿ ಯೆಲ್ಲೋ ಬಣ್ಣವನ್ನು ಹೊಂದಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಸ್ಟಾಕ್ ಎಕ್ಸಾಸ್ಟ್ ಅನ್ನು ರೆಮುಸ್‌ನಿಂದ ಪಡೆದ ವಾಲ್ವೆಟ್ರಾನಿಕ್ ಎಕ್ಸಾಸ್ಟ್ ನಿಂದ ಬದಲಾಯಿಸಲಾಗಿದೆ. ಇನ್ನು ಈ ಕಾರಿನ ಮುಂಭಾಗದ ಬಂಪರ್‌ನಲ್ಲಿ ಶಾರ್ಕ್ ಫಿನ್ ತರಹದ ಸ್ಪ್ಲಿಟರ್‌ಗಳು ಮತ್ತು ಜೆಲ್ ನಂಬರ್ ಪ್ಲೇಟ್‌ಗಳೊಂದಿಗೆ ಕಸ್ಟಮ್ ಲಿಪ್ ಪಡೆಯುತ್ತದೆ.

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಇನ್ನು ಮಾಡಿಫೈ ಟಾಟಾ ಆಲ್‌‌ಟ್ರೊಜ್ ಹೆಡ್‌ಲ್ಯಾಂಪ್‌ಗಳು ಸ್ಮೋಕ್ಡ್ ಎಫೆಕ್ಟ್ ಅನ್ನು ಹೊಂದಿದೆ. ಸ್ಟಾಕ್ ಲಗ್ ನಟ್ಸ್ ಮತ್ತು ವಾಲ್ವ್ ಕ್ಯಾಪ್‌ಗಳನ್ನು ಬ್ಲಾಕ್ಸ್‌ನಿಂದ ಪಡೆದವುಗಳೊಂದಿಗೆ ಬದಲಾಯಿಸಲಾಗುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಒಟ್ಟಿನಲ್ಲಿ ಟಾಟಾ ಆಲ್‌‌ಟ್ರೊಜ್ ಪ್ರೀಮಿಯಂ ಕಾರನ್ನು ವಿಭಿನ್ನವಾಗಿ ಮತ್ತು ಆಕರ್ಷಕವಾಗಿ ಮಾಡಿಫೈಗೊಳಿಸಿದ್ದಾರೆ. ಇನ್ನು ಈ ಕಾರಿನ ಇಂಟಿರಿಯರ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಈ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಮೌಂಟಡ್ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಟಾಟಾ ಆಲ್‌‌ಟ್ರೊಜ್ ಎರಡು ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. ಇದರಲ್ಲಿ 1.2-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಇದರೊಂದಿಗೆ 1.5-ಲೀಟರ್, ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಕೂಡ ಹೊಂದಿದೆ. ಈ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಮಾಡಿಫೈಗೊಂಡು ಮಿಂಚಿದ ಜನಪ್ರಿಯ ಟಾಟಾ ಆಲ್‌‌ಟ್ರೊಜ್ ಕಾರು

ಸಾಮಾನ್ಯ ಟಾಟಾ ಆಲ್‌‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದೆ. ಟಾಟಾ ಆಲ್‌‌ಟ್ರೊಜ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಉತ್ತಮ ಪೈಪೋಟಿಯನ್ನು ನೀಡುತ್ತಿದೆ.

Most Read Articles

Kannada
English summary
Modified Tata Altroz Looks STUNNING After Ceramics Treatment. Read In Kannada.
Story first published: Saturday, October 10, 2020, 20:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X