ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಪ್ರಮುಖ ಮೂರು ಹೊಸ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಮಾದರಿಯು ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ ಆವೃತ್ತಿಯು ಶೀಘ್ರದಲ್ಲೇ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ವೇಳೆ ಮೊದಲ ಬಾರಿಗೆ ಹೊಸ ಕಾರಿನ ಇಂಟಿರಿಯರ್ ಮಾಹಿತಿ ಲಭ್ಯವಾಗಿದೆ. ಕಾನ್ಸೆಪ್ಟ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳಲಿರುವ ಹೊಸ ಕಾರು ಮಾರುತಿ ಎಸ್ ಪ್ರೆಸ್ಸೊ ಮತ್ತು ಹ್ಯುಂಡೈ ಸ್ಯಾಂಟ್ರೊ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಾಹನ ಉನ್ನತೀಕರಣದ ಜೊತೆಗೆ ಬಿಡುಗಡೆಯಾಗಲಿರುವ ಹೊಸ ವಾಹನಗಳ ಅಭಿವೃದ್ದಿ ಮೇಲೂ ಗಮನಹರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಬಹುನೀರಿಕ್ಷಿತ ಹೆಚ್‌ಬಿಎಕ್ಸ್ ಮೈಕ್ರೊ ಎಸ್‌ಯುವಿ, ಗ್ರಾವಿಟಾಸ್ ಎಸ್‌ಯುವಿ ಮತ್ತು ಹ್ಯಾರಿಯರ್ ಪೆಟ್ರೋಲ್ ಮಾದರಿಯ ಬಿಡುಗಡೆಗೆ ಸಜ್ಜಾಗುತ್ತಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಎಂಟ್ರಿ ಲೆವಲ್‌ ಕಾರು ಮಾದರಿಯಾಗಿ ಬಿಡುಗಡೆಯಾಗಲಿರುವ ಮೈಕ್ರೊ ಎಸ್‌ಯುವಿ ಮಾದರಿಯು ಕಾನ್ಸೆಪ್ಟ್ ಮಾದರಿಯಲ್ಲೇ ಆಕರ್ಷಕ ವಿನ್ಯಾಸದೊಂದಿಗೆ ರಸ್ತೆಗಿಳಿಯಲು ಸಜ್ಜಾಗುತ್ತಿದ್ದು, ಹೊಸ ಕಾರನ್ನು ಡ್ಯುಯಲ್ ಟೋನ್ ಅಲಾಯ್ ವೀಲ್ಹ್‌, ಆಕರ್ಷಕ ಫ್ರಂಟ್ ಫಾಸಿಯಾ, ಡಿ ಕಟ್ ಸ್ಟೀರಿಂಗ್ ಸೌಲಭ್ಯದೊಂದಿಗೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ನಂತರ ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಮೇಲೆ ಉತ್ಪಾದನೆ ಮಾಡಲಾಗುತ್ತಿರುವ ಎರಡನೇ ಆವೃತ್ತಿಯಾಗಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಶೀಘ್ರದಲ್ಲೇ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿದ್ದು, ಹೊಸ ಕಾರಿನಲ್ಲಿ 1.2-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಹೊಸ ಕಾರಿನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಕುರಿತಾಗಿ ಇದುವರೆಗೂ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ ಎಂಟ್ರಿ ಲೆವಲ್ ಕಾರುಗಳಲ್ಲಿ ಹೊಸ ಮೈಕ್ರೊ ಎಸ್‌ಯುವಿ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಹೊಸ ಕಾರಿನಲ್ಲಿ ಸ್ಪೋರ್ಟಿ ಖದರ್ ಹೆಚ್ಚಿಸಲು ವಿಶೇಷ ಡಿಸೈನ್‌ಗಳನ್ನು ನೀಡಲಾಗಿದ್ದು, ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟ್‌ಅಪ್, ಆಕರ್ಷಕವಾದ ಬಂಪರ್, ಸ್ಕ್ವಾರ್ಡ್ ಔಟ್ ವೀಲ್ಹ್ ಆರ್ಚ್, ರೂಫ್ ಮೌಂಟೆಡ್ ಕ್ಯಾರಿಯರ್ ಸೌಲಭ್ಯಗಳು ಕಾರಿನ ಬಲಿಷ್ಠತೆ ಮತ್ತಷ್ಟು ಮೆರಗು ನೀಡಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಹೊಸ ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ.4.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಸದ್ಯ ಮಾರುಕಟ್ಟೆಯಲ್ಲಿ ಸುರಕ್ಷತೆ ವಿಚಾರವಾಗಿ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿರುವ ಟಾಟಾ ಕಂಪನಿಯು ಎಂಟ್ರಿ ಲೆವಲ್ ಮಾದರಿಯಲ್ಲೂ ಉತ್ತಮ ಸೇಫ್ಟಿ ರೇಟಿಂಗ್ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದು, ಹೊಸ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ವರ್ಷದ ಸಂಭ್ರಮದಲ್ಲಿ ಬಿಡುಗಡೆಯಾಗಲಿದೆ ಟಾಟಾ ಹೆಚ್‌ಬಿಎಕ್ಸ್

ಟಾಟಾ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರುಗಳ ಮೂಲಕ ಪ್ರತಿ ತಿಂಗಳು 40 ಸಾವಿರ ಕಾರು ಮಾರಾಟ ಗುರಿಹೊಂದಿರುವ ಟಾಟಾ ಕಂಪನಿಗೆ ಹೆಚ್‌ಬಿಎಕ್ಸ್ ಮತ್ತಷ್ಟ ಬಲತುಂಬಲಿದೆ.

Most Read Articles

Kannada
English summary
Tata HBX Spotted Testing Interior Features Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X