ಆಟೋ ಎಕ್ಸ್‌ಪೋ 2020: ಟಾಟಾ ಹೆಕ್ಸಾ ಸಫಾರಿ ಎಡಿಷನ್ ಕಾರು ಅನಾವರಣ

ಟಾಟಾ ಮೋಟಾರ್ಸ್ ಕಂಪನಿಯು ಈಗ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಹೆಕ್ಸಾ ಸಫಾರಿ ಎಡಿಷನ್ ಕಾರ್ ಅನ್ನು ಪ್ರದರ್ಶಿಸಿದೆ. ಈ ಕಾರಿನಲ್ಲಿ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಕ್ಸಾ ಸಫಾರಿ ಎಡಿಷನ್ ಕಾರು ಅನಾವರಣ

ಹೆಕ್ಸಾ ಸಫಾರಿ ಎಡಿಶನ್ ಕಾರಿನಲ್ಲಿ 2.2-ಲೀಟರಿನ ಬಿ‍ಎಸ್ 6 ಡೀಸೆಲ್ ಎಂಜಿನ್‌ ಅಳವಡಿಸಲಾಗುತ್ತದೆ. ಈ ಎಂಜಿನ್ 153 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬಿಎಸ್ 4 ಎಂಜಿನ್ 151 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್ಎಂ ಉತ್ಪಾದಿಸುತ್ತದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಕ್ಸಾ ಸಫಾರಿ ಎಡಿಷನ್ ಕಾರು ಅನಾವರಣ

ಹೆಕ್ಸಾ ಸಫಾರಿ ಎಡಿಷನ್, ಸ್ಟಾಂಡರ್ಡ್ ಮಾದರಿಗೆ ಹೋಲಿಸಿದರೆ ಹೆಚ್ಚು ಬೋಲ್ಡ್ ಆದ ಲುಕ್ ಅನ್ನು ಹೊಂದಿದೆ. ಈ ಕಾರು ಸ್ಪೆಷಲ್ ಬ್ಯಾಡ್ಜಿಂಗ್‍ನ ಜೊತೆಗೆ ಬಿಳಿ ಬಣ್ಣದ ಇಂಟಿರಿಯರ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಕ್ಸಾ ಸಫಾರಿ ಎಡಿಷನ್ ಕಾರು ಅನಾವರಣ

ಈ ಎಂಜಿನ್ ಜೊತೆಗೆ 5 ಸ್ಪೀಡಿನ ಮ್ಯಾನುವಲ್, 6-ಸ್ಪೀಡಿನ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಎಂಬ ಮೂರು ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಕ್ಸಾ ಸಫಾರಿ ಎಡಿಷನ್ ಕಾರು ಅನಾವರಣ

ಈ ಟ್ರಾನ್ಸ್ ಮಿಷನ್‍‍ಗಳನ್ನು ಅಪ್‍‍ಡೇಟ್‍‍ಗೊಳಿಸಲಾಗಿರುವ ಹೆಕ್ಸಾ ಕಾರಿನಲ್ಲಿಯೂ 4x4 ಡ್ರೈವ್‌ಟ್ರೇನ್‌ನೊಂದಿಗೆ ನೀಡಲಾಗುವುದು.

ಆಟೋ ಎಕ್ಸ್‌ಪೋ 2020: ಟಾಟಾ ಹೆಕ್ಸಾ ಸಫಾರಿ ಎಡಿಷನ್ ಕಾರು ಅನಾವರಣ

ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 10-ಸ್ಪೀಕರ್ ಮ್ಯೂಸಿಕ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಬಿಡಿ ಹೊಂದಿರುವ ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಕ್ಸಾ ಸಫಾರಿ ಎಡಿಷನ್ ಕಾರು ಅನಾವರಣ

ಮಾರಾಟವಾಗುತ್ತಿರುವ ಟಾಟಾ ಹೆಕ್ಸಾ ಕಾರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ 13.7 ಲಕ್ಷ ರೂಪಾಯಿಗಳಿಂದ 19.27 ಲಕ್ಷ ರೂಪಾಯಿಗಳಾಗಿದೆ.

Most Read Articles

Kannada
English summary
BS6 Tata Hexa Safari Edition Showcased At Auto Expo With Cosmetic Updates. Read in Kannada.
Story first published: Thursday, February 6, 2020, 18:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X