ವಿವಿಧ ಮಾದರಿಯ ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಕರೋನಾ ವೈರಸ್ ಪರಿಣಾಮ ಸಾಕಷ್ಟು ಇಳಿಕೆ ಕಂಡಿದ್ದ ವಾಣಿಜ್ಯ ವಾಹನಗಳ ಮಾರಾಟವು ಇದೀಗ ಚೇತರಿಸಿಕೊಳ್ಳುತ್ತಿದ್ದು, ದೇಶದ ಮುಂಚೂಣಿ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾದ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗವು ವಾಹನಗಳ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದೆ.

ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ದೇಶಿಯ ಮಾರುಕಟ್ಟೆಯಲ್ಲಿನ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಸದ್ಯ ಮೊದಲ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ದೀಪಾವಳಿಯ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಮಾಡಿತ್ತು. ಆದರೆ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇನ್ನು ಕೂಡಾ ನೀರಿಕ್ಷಿತ ಮಟ್ಟದ ವಾಹನಗಳನ್ನು ಮಾರಾಟ ಪರದಾಟುತ್ತಿರುವ ಕಂಪನಿಯು ಮಾರಾಟ ಸುಧಾರಣೆಗಾಗಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ದೀಪಾವಳಿ ಸಂಭ್ರಮದ ನಂತರವೂ ವಾಣಿಜ್ಯ ವಾಹನಗಳ ಮೇಲಿ ಡಿಸ್ಕೌಂಟ್ ಆಫರ್‌ಗಳನ್ನು ಮುಂದುವರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ನವೆಂಬರ್ ಅವಧಿಗಾಗಿ 'ಇಂಡಿಯಾ ಕಿ ದುಸ್ರಿ ದಿವಾಲಿ'(ಭಾರತಕ್ಕೆ ಮತ್ತೊಂದು ದೀಪಾವಳಿ) ಅಭಿಯಾನ ಕೈಗೊಂಡಿದ್ದು, ಹೊಸ ಅಭಿಯಾನದಡಿ ವಾಣಿಜ್ಯ ವಾಹನ ಖರೀದಿದಾರರಿಗೆ ಭರ್ಜರಿ ಆಫರ್ ನೀಡಲಿದೆ.

ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಅಭಿಯಾನದಡಿ ಆರಂಭಿಕ ವಾಣಿಜ್ಯ ವಾಹನ ಮಾದರಿಗಳಾದ ಟಾಟಾ ಏಸ್, ಟಾಟಾ ಯೋಧಾ ಮತ್ತು ಟಾಟಾ ಇಂಟ್ರಾ ವಾಹನಗಳ ಖರೀದಿ ಮೇಲೆ ಆಫರ್ ಲಭ್ಯವಿದ್ದು, ವಿವಿಧ ಆಫರ್‌ಗಳ ಜೊತೆಗೆ ಗಿಫ್ಟ್ ವೋಚರ್, ಲಕ್ಕಿ ಡ್ರಾ ಘೋಷಣೆ ಮಾಡಿದೆ.

ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಲಕ್ಕಿ ಡ್ರಾ ವಿಜೇತ ಗ್ರಾಹಕರಿಗೆ ರೂ.5 ಲಕ್ಷ ಮೌಲ್ಯದ ಗೋಲ್ಡ್ ವೋಚರ್ ಪಡೆದುಕೊಳ್ಳಲಿದ್ದು, ಲಕ್ಕಿ ಡ್ರಾ ಇತರೆ ವಿಜೇತರಿಗೆ ಎಲ್ಇಡಿ ಟಿವಿ, ವಾಷಿಂಗ್ ಮಷೀನ್, ಮೊಬೈಲ್ ಫೋನ್, ಫ್ಯೂಲ್ ವೋಚರ್ ಸೇರಿದಂತೆ ಹಲವಾರು ಬಹುಮಾನಗಳನ್ನು ಘೋಷಣೆ ಮಾಡಿದೆ. ಹೊಸ ಆಫರ್‌ಗಳು ನವೆಂಬರ್ 30ರ ಒಳಗಾಗಿ ವಾಹನ ಖರೀದಿಸುವ ಗ್ರಾಹಕರಿಗೆ ಮಾತ್ರ ಅನ್ವಯಸಲಿದ್ದು, ವಾಹನ ಖರೀದಿಯನ್ನು ಸುಲಭಗೊಳಿಸಲು ಎಕ್ಸ್‌ಚೆಂಜ್ ಆಫರ್, ಕ್ಯಾಶ್ ಡಿಸ್ಕೌಂಟ್ ಮತ್ತು ಕಡಿಮೆ ಬಡ್ಡಿದರದಲ್ಲಿ ಗರಿಷ್ಠ ಅವಧಿಯ ಸಾಲಸೌಲಭ್ಯಗಳನ್ನು ಒದಗಿಸಲಿದೆ.

ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಇನ್ನು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಗರಿಷ್ಠ ಮಾರಾಟವಾಗಿರುವ ವಾಹನ ಪೈಕಿ ಟಾಟಾ ಏಸ್ ಹೊಸ ದಾಖಲೆಗೆ ಕಾರಣವಾಗಿದ್ದು, ಟಾಟಾ ಏಸ್ ಬಿಡುಗಡೆಯಾದ 15 ವರ್ಷಗಳ ಅವಧಿಯಲ್ಲಿ ಇದುವರೆಗೆ 22 ಲಕ್ಷ ಯುನಿಟ್ ಮಾರಾಟದೊಂದಿಗೆ ಜನಪ್ರಿಯ ವಾಣಿಜ್ಯ ಮಾದರಿಯಾಗಿ ಹೊರಹೊಮ್ಮಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಪ್ರಯಾಣಿಕರ ವಾಹನಗಳ ಜೊತೆ ಜೊತೆಗೆ ವಾಣಿಜ್ಯ ವಾಹನಗಳ ಮಾರಾಟದಲ್ಲೂ ಹಲವಾರು ಬದಲಾವಣೆಗಳನ್ನು ಪರಿಚಯಿಸಿರುವ ಟಾಟಾ ಕಂಪನಿಯು ಬಹುತೇಕ ವಾಣಿಜ್ಯ ವಾಹನಗಳನ್ನು ಬಿಎಸ್-6 ಎಮಿಷನ್‌ಗೆ ಅನುಗುಣವಾಗಿ ಉನ್ನತೀಕರಿಸಿದ್ದು, ಬಿಎಸ್-6 ಜಾರಿ ನಂತರ ಟಾಟಾ ಕಂಪನಿಯು ಇದುವರೆಗೆ 50 ಸಾವಿರ ಯುನಿಟ್ ವಿವಿಧ ಮಾದರಿಯ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ.

ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಕರೋನಾ ವೈರಸ್ ಪರಿಣಾಮ ಕಳೆದ ಏಪ್ರಿಲ್‌ನಲ್ಲಿ ಶೂನ್ಯ ವಾಹನ ಮಾರಾಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಕಂಪನಿಗಳು ತದನಂತರ ಮೇ, ಜೂನ್ ಮತ್ತು ಜುಲೈ ಅವಧಿಯಲ್ಲೂ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದವು. ಅಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಹೊಸ ವಾಹನಗಳ ಮಾರಾಟವು ಹಂತ-ಹಂತವಾಗಿ ಚೇತರಿಕೆ ಕಾಣುತ್ತಿದ್ದು, ಇದೀಗ ದೀಪಾವಳಿ ಸಂಭ್ರಮದಲ್ಲೂ ಗರಿಷ್ಠ ಪ್ರಮಾಣದ ವಾಹನ ಮಾರಾಟ ನೀರಿಕ್ಷೆಗಳಿವೆ.

MOST READ: ಮಿಟ್ಸುಬಿಷಿ ಜೊತೆಗೂಡಿ ಹೊಸ ಸರಣಿ ಟ್ರ್ಯಾಕ್ಟರ್‌ಗಳ ಉತ್ಪಾದನೆಗೆ ಚಾಲನೆ ನೀಡಿದ ಮಹೀಂದ್ರಾ

ವಾಣಿಜ್ಯ ವಾಹನಗಳ ಖರೀದಿ ಮೇಲೆ ಆಫರ್ ಘೋಷಣೆ ಮಾಡಿದ ಟಾಟಾ ಮೋಟಾರ್ಸ್

ಇದೇ ಕಾರಣಕ್ಕೆ ಹಲವಾರು ಆಟೋ ಕಂಪನಿಗಳು ಗರಿಷ್ಠ ವಾಹನ ಮಾರಾಟ ಗುರಿಯೊಂದಿಗೆ ಅಕ್ಟೋಬರ್ ಮತ್ತು ನವೆಂಬರ್ ಅವಧಿಗೆ ಹಲವಾರು ಆಫರ್ ನೀಡಿದ್ದು, ಟಾಟಾ ಮೋಟಾರ್ಸ್ ಹೊಸ ವಾಹನಗಳ ಖರೀದಿ ಹೆಚ್ಚಳಕ್ಕೆ ಹೊಸ ಆಫರ್‌ಗಳು ಪ್ರಮುಖ ಕಾರಣವಾಗಿವೆ.

Most Read Articles

Kannada
English summary
Tata Motors Commercial Vehicle Offers In November 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X