ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಾದ ಹ್ಯಾರಿಯರ್ ಕಾರಿನಲ್ಲಿ ಹೊಸ ಬಣ್ಣದ ಆಯ್ಕೆ ಹೊಂದಿರುವ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಎಸ್‌ಯುವಿ ಖರೀದಿದಾರರನ್ನು ಹೆಚ್ಚಿನ ಮಟ್ಟದಲ್ಲಿ ಸೆಳೆಯುವ ನೀರಿಕ್ಷೆಯಲ್ಲಿದೆ.

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಎಸ್‌ಯುವಿ ಮಾದರಿಯಲ್ಲಿ ಈಗಾಗಲೇ ಸ್ಟ್ಯಾಂಡರ್ಡ್ ಆವೃತ್ತಿಯ ಜೊತೆಗೆ ಡಾರ್ಕ್ ಎಡಿಷನ್ ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.30 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಕ್ಯಾಮೊ ಎಡಿಷನ್ ಮಾದರಿಯು ಎಕ್ಸ್‌ಟಿ , ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್, ಎಕ್ಸ್‌ಜೆಡ್ಎ ಮತ್ತು ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್ ಹೊಂದಿದ್ದು, ಕ್ಯಾಮೊ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚುವರಿಯಾಗಿ ರೂ.10 ಸಾವಿರದಿಂದ ರೂ.30 ಸಾವಿರದಷ್ಟು ದುಬಾರಿಯಾಗಿರಲಿದೆ.

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಂತೆ ಫೀಚರ್ಸ್ ಹೊಂದಿರುವ ಕ್ಯಾಮೊ ಎಡಿಷನ್ ವಿಶೇಷವಾಗಿ ಹಸಿರು ಬಣ್ಣದೊಂದಿಗೆ ಕೆಲವು ವಿಶೇಷ ಆಯ್ಕೆಗಳನ್ನು ಹೊಂದಿದ್ದು, ಬ್ಲ್ಯಾಕ್ ಕ್ರೋಮ್‌ಗಳು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೆಡ್‌ಲೈಟ್, ಸೈಡ್ ಸ್ಕರ್ಟ್, ಬಂಪರ್‌ಗೆ ಹೊಂದಿಕೊಂಡಿರುವ ಗ್ಲಾಸ್ ಹೌಸ್ ಮತ್ತು ಟೈಲ್‌ಗೇಟ್ ಸುತ್ತಲು ಕಪ್ಪು ಬಣ್ಣದ ಕ್ರೋಮ್ ನೀಡಲಾಗಿದ್ದು, ಹೊಸ ಕಾರಿನಲ್ಲಿ ಹೆಚ್ಚುವರಿ ಪ್ಯಾಕೇಜ್‌ ಪಡೆಯುವ ಗ್ರಾಹಕರಿಗಾಗಿ ಬ್ಯಾನೆಟ್‌ನಲ್ಲಿ ಹ್ಯಾರಿಯರ್ ಲೊಗೊ, ಸೈಡ್ ಸ್ಟೆಪ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ ರೂಫ್, ಹುಡ್ ಮತ್ತು ಡೋರ್‌ಗಳ ಮೇಲೆ ಕ್ಯಾಮೊ ಡಿಕಾಲ್ಸ್ ನೀಡಲಾಗುತ್ತದೆ.

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹೊಸ ಕಾರಿನ ಒಳಭಾಗದಲ್ಲೂ ಕೆಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಡಾರ್ಕ್ ಎಡಿಷನ್ ಮಾದರಿಯಲ್ಲಿ ಆಲ್ ಬ್ಲ್ಯಾಕ್ ಥೀಮ್, ಗ್ರಿನ್ ಸ್ಟ್ಪೀಚಿಂಗ್, ಬ್ಲ್ಯಾಕ್‌ಸ್ಟೋನ್ ಮ್ಯಾಟ್ರಿಕ್ಸ್, ಫ್ಲಕ್ಸ್ ವುಡ್, 3ಡಿ ಮೊಲ್ಡೆಡ್ ಮ್ಯಾಟ್ಸ್, ಸ್ಕಫ್ಲ್ ಪ್ಲೇಟ್ ಮತ್ತು ಸೀಟ್ ಹಿಂಭಾಗದಲ್ಲಿ ಕ್ಯಾಮೊ ಫಾರೆಸ್ಟ್ ಅರ್ಗನೈಸರ್ ಪ್ಯಾಕೇಜ್ ಜೋಡಣೆ ಮಾಡಲಾಗಿದೆ.

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇನ್ನುಳಿದಂತೆ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಆಟೋಮ್ಯಾಟಿಕ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, 17-ಇಂಚಿನ ಅಲಾಯ್ ವೀಲ್ಹ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, 6-ಸ್ಪೀಕರ್ಸ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚಿನ್ ಡಿಜಿಟಲ್ ಡಿಸ್‌ಪ್ಲೇ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 60:40 ಅನುಪಾತದ ಹಿಂಭಾಗದ ಸೀಟ್‌ಗಳ ಸೌಲಭ್ಯವಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಕ್ಯಾಮೊ ಎಡಿಷನ್ ಖರೀದಿಸುವ ಗ್ರಾಹಕರು ಹೊಸ ಕಾರಿನಲ್ಲಿರುವ ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಮತ್ತಷ್ಟು ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹಕರಿಗಾಗಿ ಕ್ಯಾಮೊ ಸ್ಟೆಲ್ತ್ ಮತ್ತು ಕ್ಯಾಮೋ ಸ್ಟೆಲ್ತ್ ಪ್ಲಸ್ ಎನ್ನುವ ಎರಡು ಆಕ್ಸೆಸರಿಸ್ ಪ್ಯಾಕೇಜ್ ಘೋಷಣೆ ಮಾಡಿದ್ದು, ವಿಶೇಷ ಆಕ್ಸೆಸರಿಸ್ ಪ್ಯಾಕೇಜ್‌ಗಳು ಕ್ರಮವಾಗಿ ರೂ.27 ಸಾವಿರ ಮತ್ತು ರೂ. 50 ಸಾವಿರ ದರ ಹೊಂದಿವೆ.

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಇನ್ನು ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆ 2.-0-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ನೀಡಲಾಗಿದ್ದು, 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಹ್ಯಾರಿಯರ್ ಕ್ಯಾಮೊ ಎಡಿಷನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಹ್ಯಾರಿಯರ್ ಎಸ್‌ಯುವಿ ಮಾದರಿಯು ಸದ್ಯ ಸ್ಟ್ಯಾಂಡರ್ಡ್, ಡಾರ್ಕ್, ಕ್ಯಾಮೊ ಎಡಿಷನ್‌ ಒಳಗೊಂಡಂತೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 20.30 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಬರೋಬ್ಬರಿ 25 ವೆರಿಯೆಂಟ್‌ಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Tata Harrier Camo Edition Launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X