ಕಂಪ್ಯಾಕ್ಟ್ ಎಸ್‌‌ಯುವಿ ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

ದಸರಾ ಮತ್ತು ದೀಪಾವಳಿ ಸಂಭ್ರಮದ ವೇಳೆ ಬಹುತೇಕ ಆಟೋ ಕಂಪನಿಗಳು ನೀರಿಕ್ಷೆಗೂ ಮೀರಿ ಗ್ರಾಹಕರ ಬೇಡಿಕೆ ಪಡೆದುಕೊಂಡಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿದೆ.

ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

ಕರೋನಾ ವೈರಸ್ ಪರಿಣಾಮ ಕುಸಿದಿದ್ದ ವಾಹನ ಮಾರಾಟವು ಇದೀಗ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದ್ದು, ಟಾಟಾ ಮೋಟಾರ್ಸ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಹೊಸ ವಾಹನ ಮಾರಾಟದಲ್ಲಿ ನೀರಿಕ್ಷೆಗೂ ಮೀರಿ ಬೆಳವಣಿಗೆ ಕಂಡಿವೆ. ಕರೋನಾ ವೈರಸ್ ಪರಿಣಾಮ ಏಪ್ರಿಲ್, ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಸತತ ಮಾರಾಟ ಕುಸಿತ ಕಂಡಿದ್ದ ಆಟೋ ಕಂಪನಿಗಳು ಅಗಸ್ಟ್ ಅವಧಿಯಲ್ಲಿ ಸಾಧಾರಣ ಮಟ್ಟದಲ್ಲಿ ವಾಹನಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ್ದವು.

ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

ಆದರೆ ಸೆಪ್ಟೆಂಬರ್ ಅವಧಿಯಲ್ಲಿ ಹಲವು ಆಟೋ ಕಂಪನಿಗಳು ಶೇ. 10 ರಿಂದ ಶೇ. 30 ರಷ್ಟು ಬೆಳವಣಿಗೆ ಸಾಧಿಸಿದ್ದರೆ ಇನ್ನೂ ಕೆಲವು ಕಂಪನಿಗಳು ತುಸು ಹಿನ್ನಡೆ ಅನುಭವಿಸಿದ್ದವು. ಆದರೆ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಹುತೇಕ ಆಟೋ ಕಂಪನಿಗಳ ವಾಹನ ಮಾರಾಟವು ಕಳೆದ ವರ್ಷಕ್ಕಿಂತ ದುಪ್ಪಟ್ಟು ಹೆಚ್ಚಳವಾಗಿದೆ.

ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಕೂಡಾ ಕಳೆದ ತಿಂಗಳು ನವೆಂಬರ್‌ನಲ್ಲಿ 21,600 ಯುನಿಟ್ ಮಾರಾಟದೊಂದಿಗೆ 2019ರ ನವೆಂಬರ್‌ಗಿಂತಲೂ ಶೇ.108ರಷ್ಟು ಬೆಳವಣಿಗೆ ಸಾಧಿಸಿದ್ದು, ಕಳೆದ ವರ್ಷದ ನವೆಂಬರ್‌ನಲ್ಲಿ ಕೇವಲ 10,400 ಯನಿಟ್ ಮಾರಾಟವಾಗಿದ್ದವು.

ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

ಸ್ವದೇಶಿ ಕಂಪನಿಗಳ ನಿರ್ಮಿತ ವಾಹನ ಬಳಕೆಗೆ ಗ್ರಾಹಕರ ಒಲವು ಮತ್ತು ಪ್ರಯಾಣಿಕ ಸುರಕ್ಷತೆ ವಿಚಾರವಾಗಿ ಗಮನಸೆಳೆದಿರುವ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಆರು ತಿಂಗಳಿನಲ್ಲಿ ವಾಹನ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದ್ದು, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕೂಡಾ ಕಳೆದ ತಿಂಗಳು ಒಟ್ಟು 6,021 ಯನಿಟ್ ಮಾರಾಟಗೊಂದಿಗೆ ಶೇ.75 ರಷ್ಟು ಬೆಳವಣಿಗೆ ಸಾಧಿಸಿದೆ.

ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

2019ರ ನವೆಂಬರ್‌ನಲ್ಲಿ ಕೇವಲ 3,437 ಯುನಿಟ್ ಮಾರಾಟವಾಗಿದ್ದ ನೆಕ್ಸಾನ್ ಕಾರು ಮಾದರಿಯು ಇದೀಗ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ನಂತರ ಸೇಫ್ಟಿ ರೇಟಿಂಗ್ಸ್‌ನಲ್ಲಿ 5 ಸ್ಟಾರ್ ಪಡೆದ ಕಾರು ಮಾದರಿಯಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

ಇನ್ನು ಬಿಎಸ್-6 ಎಮಿಷನ್ ನಂತರ ಹಲವಾರು ಬದಲಾವಣೆಗಳೊಂದಿಗೆ ಮಾರಾಟವಾಗುತ್ತಿರುವ ನೆಕ್ಸಾನ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.70 ಲಕ್ಷ ಬೆಲೆ ಹೊಂದಿದೆ.

ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

ವಿವಿಧ ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಬರೋಬ್ಬರಿ 36 ವೆರಿಯೆಂಟ್ಸ್ ಹೊಂದಿರುವ ನೆಕ್ಸಾನ್ ಕಾರು ಮಾದರಿಯು ಬಿಎಸ್-6 ಪ್ರೇರಣೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಬಹುತೇಕ ವೆರಿಯೆಂಟ್‌ಗಳಲ್ಲಿ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯ ಸೌಲಭ್ಯವನ್ನು ನೀಡಲಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕಾರು ಮಾರಾಟದಲ್ಲಿ ಶೇ.75ರಷ್ಟು ಬೆಳವಣಿಗೆ ಸಾಧಿಸಿದ ಟಾಟಾ ನೆಕ್ಸಾನ್

1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 118-ಬಿಹೆಚ್‍ಪಿ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದ್ದಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 108-ಬಿಹೆಚ್‍ಪಿ ಮತ್ತು 260-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Tata Nexon Achieves 75 Percent Sales Growth In November. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X