ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ದೇಶಿಯ ಆಟೋ ಉದ್ಯಮವು ಸ್ವಾತಂತ್ರ್ಯ ಭಾರತದ ನಂತರ ಭಾರೀ ಬದಲಾವಣೆಯೊಂದಿಗೆ ಇದೀಗ ಜಾಗತಿಕವಾಗಿ ಗುರುತಿಸಿಕೊಂಡಿದ್ದು, ಹಲವಾರು ಏರಿಳಿತಗಳನ್ನು ಕಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹತ್ತಾರು ಕಾರು ಕಂಪನಿಗಳು ಹಲವಾರು ಬಗೆಯ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮೇಡ್ ಇನ್ ಇಂಡಿಯಾ ಖ್ಯಾತಿಯ ಕೆಲವೇ ಕೆಲವು ಕಾರುಗಳು ಮಾತ್ರ ಇದೀಗ ಮಾರುಕಟ್ಟೆಯಲ್ಲಿವೆ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಕಳೆದ ಎರಡು ದಶಕಗಳ ಅವಧಿಯಲ್ಲಿ ಭಾರತೀಯ ಆಟೋ ಉದ್ಯಮವು ಸಾಕಷ್ಟು ಬದಲಾವಣೆಯನ್ನು ಪಡೆದುಕೊಂಡಿದ್ದು, ಹಲವಾರು ವಿದೇಶಿ ಮಾರುಕಟ್ಟೆಯಲ್ಲಿನ ಕಾರು ಕಂಪನಿಗಳು ದೇಶಿಯ ಆಟೋ ಉದ್ಯಮದಲ್ಲಿ ಅಧಿಪತ್ಯ ಸಾಧಿಸಿವೆ. ಹೀಗಿದ್ದರೂ ಮೇಡ್ ಇನ್ ಇಂಡಿಯಾ ಖ್ಯಾತಿಯ ವಿವಿಧ ಕಾರು ಮಾದರಿಗಳು ಈಗಲೂ ಕೂಡಾ ಅಚ್ಚರಿ ಉಂಟು ಮಾಡುವುದಲ್ಲದೆ ಹಲವು ಹೊಸತನಕ್ಕೆ ಸಾಕ್ಷಿಯಾಗಿವೆ. ಹಾಗಾದ್ರೆ ಭಾರತದಲ್ಲಿ ಜನಪ್ರಿಯಗೊಂಡ ಟಾಪ್ 5 ಮೇಡ್ ಇನ್ ಕಾರುಗಳ ಕುರಿತಾಗಿ ಈ ಲೇಖನದಲ್ಲಿ ಚರ್ಚಿಸೋಣ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ರೆವಾ ಐ

ಬೆಂಗಳೂರು ಮೂಲದ ರೆವಾ ನಿರ್ಮಾಣದ ರೆವಾ ಐ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ನಿರ್ಮಾಣದ ಅತಿ ಕಡಿಮೆ ಬೆಲೆಯ ಕಾರು ಮಾದರಿ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿತ್ತು. ಮಹೀಂದ್ರಾ ಕಂಪನಿಯೊಂದಿಗೆ ಸಹಭಾಗೀತ್ವಕ್ಕೂ ಮುನ್ನವೇ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿಶ್ವದ ಪ್ರಮುಖ 26 ದೇಶಗಳಲ್ಲಿ ಮಾರಾಟವಾಗುತ್ತಿದ್ದ ರೆವಾ ಐ ಕಾರು ಮಹೀಂದ್ರಾ ಇ2ಒ ಜೊತೆಗೆ ವಿಲೀನ ಮಾಡಲಾಯ್ತು.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

2011ರ ತನಕವು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದ್ದ ರೆವಾ ಐ ಕಾರು ದೇಶದ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದು, ಮಹೀಂದ್ರಾ ಕಂಪನಿಯು ಇದೀಗ ಇ2ಓ ಮಾದರಿಯನ್ನು ಸಹ ಸ್ಥಗಿತಗೊಳಿಸಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಆಧಾರದ ಮೇಲೆ ಹೊಸ ಕಾರು ಮಾದರಿಗಳತ್ತ ಗಮನಹರಿಸಿದೆ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಡಿಸಿ ಅವಾಂತಿ

1993ರಲ್ಲಿ ಸ್ಥಾಪನೆಗೊಂಡ ಡಿಸಿ ಡಿಸೈನ್ ಕಂಪನಿಯು ದೇಶದ ಅತಿ ದೊಡ್ಡ ಕಾರು ವಿನ್ಯಾಸ ಕಂಪನಿಯಾಗಿದ್ದು, ಇದೇ ಕಂಪನಿ ಭಾರತದಲ್ಲಿ ಮೊದಲ ಬಾರಿಗೆ 2012ರಲ್ಲಿ ಡಿಸಿ ಅವಾಂತಿ ಎನ್ನುವ ಬಜೆಟ್ ಬೆಲೆಯ ಸೂಪರ್ ಕಾರು ಮಾದರಿಯೊಂದನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸುವ ಮೂಲಕ ಐಷಾರಾಮಿ ಕಾರು ಕಂಪನಿಗಳಿಗೆ ಶಾಕ್ ನೀಡಿತ್ತು.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

2.0-ಲೀಟರ್ ಪೆಟ್ರೋಲ್ ಟರ್ಬೋ ಎಂಜಿನ್‌ ಪಡೆದುಕೊಂಡಿದ್ದ ಡಿಸಿ ಅವಾಂತಿ ಸ್ಪೋರ್ಟ್ ಸೂಪರ್ ಕಾರು ಮಾದರಿಯು 248-ಬಿಎಚ್‌ಪಿಯೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್‌ಗಳನ್ನು ಪಡೆದುಕೊಂಡಿತ್ತು. ಆದರೆ ಹೊಸ ಕಾರು ಮಾರುಕಟ್ಟೆಗೆ ಬಂದ ಕೆಲವೇ ದಿನಗಳಲ್ಲಿ ಉತ್ಪಾದನೆ ನಿಂತು ಹೊಯ್ತು. ತದನಂತರ ಡಿಸಿ ಡಿಸೈನ್ ಕಂಪನಿಯು ಹೊಸ ಕಾರುಗಳ ಉತ್ಪಾದನೆ ಬದಲಾಗಿ ಕಾರಿನ ವಿನ್ಯಾಸಪಡಿಸುವತ್ತ ಹೆಚ್ಚು ಜನಪ್ರಿಯವಾಗಿದೆ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಹಿಂದೂಸ್ತಾನ್ ಅಂಬಾಸಿಡರ್

ಕ್ಲಾಸಿಕ್ ಕಾರು ಅಂದಾಕ್ಷಣವೇ ಬಹುತೇಕರ ಮನಸ್ಸಲ್ಲಿ ಮೊದಲಿಗೆ ಬರುವುದೇ ಅಂಬಾಸಿಡರ್ ಕಾರಿನ ಕಲ್ಪನೆ. ಅದಕ್ಕೆ ಕಾರಣ ಹಲವು. ಭಾರತದ ರಸ್ತೆಗಳನ್ನಾಳಿದ ರಾಜ ಎಂದೇ ಖ್ಯಾತಿ ಹೊಂದಿದ್ದ ಅಂಬಾಸಿಡರ್ ಕಾರುಗಳು ಇದೀಗ ಉತ್ಪಾದನೆ ಮತ್ತು ಮಾರಾಟ ಇಲ್ಲದಿದ್ದರೂ ಕಾರು ಪ್ರೇಮಿಗಳ ಮನಸ್ಸಿನಿಂದ ದೂರವಾಗಲು ಸಾಧ್ಯವೇ ಇಲ್ಲ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿದ್ದ ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು ತನ್ನ ಐಕಾನಿಕ್ ಅಂಬಾಸಿಡರ್ ನಿರ್ಮಾಣವನ್ನು ಪ್ರಕ್ರಿಯೆಯನ್ನು 2014ರಿಂದಲೇ ಸಂಪೂರ್ಣವಾಗಿ ಬಂದ್ ಮಾಡಿದೆ. ಬೆಲೆ, ನಿರ್ವಹಣೆ, ನಿರ್ಮಾಣದ ಗುಣಮಟ್ಟ, ಆರಾಮದಾಯಕ ಪ್ರಯಾಣ ಹೀಗೆ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಂಡಿದ್ದ ಅಂಬಾಸಿಡರ್ ದೇಶದ ಹೆಮ್ಮೆ ಎಂದರೆ ತಪ್ಪಾಗುವುದಿಲ್ಲ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಬ್ರಿಟನ್‌ನ ಮೋರಿಸ್ ಆಕ್ಸ್‌ಫರ್ಡ್ 3 ಕಾರಿನ ಮೂಲ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿದ್ದ ಅಂಬಾಸಿಡರ್ ಕಾರುಗಳು 1957ರಿಂದ 2014ರ ತನಕ ದೇಶದಲ್ಲಿ ಮಾರಾಟದಲ್ಲಿದ್ದವು. ಜೊತೆಗೆ ಕಾರಿನ ಗುಣಮಟ್ಟ ಮತ್ತು ಬೆಲೆ ವಿಚಾರವಾಗಿ ಅತ್ಯಂತ ವಿಶ್ವಾಸಾರ್ಹ ಕಾರೆಂದು ಗುರುತಿಸಿಕೊಂಡಿತ್ತು.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ 2013ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್, ರಷ್ಯಾ ಲಿಮೊಸಿನ್ ಹಾಗೂ ಬ್ಲ್ಯಾಕ್ ಲಂಡನ್ ಕ್ಲಾಬ್ ಗಳನ್ನು ಹಿಂದಿಕ್ಕಿದ್ದ ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯು ಅಂಬಾಸಿಡರ್ ಕಾರುಗಳ ನಿರ್ಮಾಣಕ್ಕೆ 2013ರ ವಿಶ್ವದ ಅತ್ಯುತ್ತಮ ಟ್ಯಾಕ್ಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಮಾರುತಿ ಆಲ್ಟೊ

ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಆಲ್ಟೊ ಕೂಡಾ ಒಂದಾಗಿದ್ದು, ಬರೋಬ್ಬರಿ 2 ದಶಕಗಳಿಂದಲೂ ಆಲ್ಟೊ ಕಾರು ಈಗಲೂ ಬಹುಬೇಡಿಕೆಯ ಕಾರು ಮಾದರಿಯಾಗಿದೆ. 2000ದಲ್ಲಿ ಬಿಡುಗಡೆಯಾದ ಆಲ್ಟೊ 800 ಕಾರು ತದನಂತರ ಗ್ರಾಹಕರ ಬೇಡಿಕೆ ಅನುಸಾರ ಹಲವಾರು ಸರಣಿಗಳೊಂದಿಗೆ ಬಿಡುಗಡೆಗೊಂಡಿದ್ದು, ಇದುವರೆಗೆ ಭಾರತದಲ್ಲಿ ಬರೋಬ್ಬರಿ 40 ಲಕ್ಷ ಆಲ್ಟೊ ಕಾರುಗಳು ಮಾರಾಟಗೊಂಡಿವೆ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಕಾಲ ಕಾಲಕ್ಕೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳುತ್ತಲೇ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಆಲ್ಟೊ ಮಾದರಿಯು ದೇಶಿಯ ಗ್ರಾಹಕರಲ್ಲಿ ಶೇ.70ರಷ್ಟು ಗ್ರಾಹಕರ ಮೊದಲ ಆಯ್ಕೆಯೇ ಆಲ್ಟೊ ಎಂಬ ಹೆಗ್ಗಳಿಕೆ ಈ ಕಾರಿಗಿದೆ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಟಾಟಾ ಇಂಡಿಕಾ

ಟಾಟಾ ಮೋಟಾರ್ಸ್ ಕಂಪನಿಯ ಜನಪ್ರಿಯತೆಯನ್ನು ಬದಲಿಸಿದ್ದ ಇಂಡಿಕಾ ಹ್ಯಾಚ್‌ಬ್ಯಾಕ್ ಕಾರು ಭಾರತೀಯ ಆಟೋ ಉದ್ಯಮದಲ್ಲೇ ಹಲವು ಹೊಸ ಬದಲಾವಣೆಗೆ ಕಾರಣವಾಗಿಲ್ಲದೆ ಹಲವು ಕಾರು ಮಾದರಿಗಳ ನಿರ್ಮಾಣಕ್ಕೆ ಪ್ರೇರಣೆಯಾಗಿದೆ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಇಂಡಿಕಾ ನಿರ್ಮಾಣಕ್ಕೂ ಮುನ್ನ ಕೇವಲ ವಾಣಿಜ್ಯ ವಾಹನಗಳ ಅಭಿವೃದ್ದಿ ಮತ್ತು ಮಾರಾಟ ಮಾತ್ರ ಗಮನಹರಿಸಿದ್ದ ಟಾಟಾ ಕಂಪನಿಯು ಇಂಡಿಕಾ ಕಾರಿನ ಯಶಸ್ವಿ ನಂತರ ಹಲವಾರು ಕಾರು ಮಾದರಿಗಳನ್ನು ಪರಿಚಯಿಸಿತು. ಇಂಡಿಕಾ ಕಾರಿನ ಆಧಾರದ ಮೇಲೆ ಹಲವು ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಮಾರಾಟ ಮಾಡಿರುವ ಟಾಟಾ ಕಂಪನಿಯು ಇದೀಗ ಪ್ರಯಾಣಿಕರ ವಾಹನ ಮಾರಾಟದಲ್ಲಿ ಗರಿಷ್ಠ ಸುರಕ್ಷಾ ಗುಣಮಟ್ಟದೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಮಹೀಂದ್ರಾ ಸ್ಕಾರ್ಪಿಯೋ

ವಾಹನ ಉದ್ಯಮದಲ್ಲಿ ಸುಮಾರು 50 ವರ್ಷಗಳ ಅನುಭವ ಹೊಂದಿರುವ ಮಹೀಂದ್ರಾ ಕೂಡಾ ಪ್ರಯಾಣಿಕ ವಾಹನಗಳ ಅಭಿವೃದ್ದಿಗೂ ಮುನ್ನ ವಾಣಿಜ್ಯ ವಾಹನ ಮಾರಾಟದಲ್ಲಿ ಮಾತ್ರ ಮುಂಚೂಣಿ ಹೊಂದಿತ್ತು. ತದನಂತರ 2002ರಲ್ಲಿ ಬಿಡುಗಡೆ ಮಾಡಲಾದ ಸ್ಕಾರ್ಪಿಯೋ ಕಾರು ಮಹೀಂದ್ರಾ ಕಂಪನಿಯ ದಿಕ್ಕನ್ನೇ ಬದಲಿಸಿದ್ದಲ್ಲದೆ ಹಲವಾರು ಪ್ರಯಾಣಿಕ ವಾಹನಗಳ ಅಭಿವೃದ್ದಿ ಪ್ರೇರಣೆಯಾಯ್ತು.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಸ್ಕಾರ್ಪಿಯೋ ಕಾರು ಭಾರತದಲ್ಲಿ ಬಿಡುಗಡೆಗೊಂಡು ಸುಮಾರು 18 ವರ್ಷಗಳನ್ನು ಪೂರೈಸಿದರೂ ಪ್ರಯಾಣಿಕ ಕಾರು ಮಾರಾಟದಲ್ಲಿ ಇಂದಿಗೂ ತನ್ನದೆ ಆದ ವೈಶಿಷ್ಟ್ಯತೆಗಳೊಂದಿಗೆ ಮುಂಚೂಣಿಯಲ್ಲಿದ್ದು, ಶೀಘ್ರದಲ್ಲೇ ಹೊಸ ತಲೆಮಾರಿನ ವಿನ್ಯಾಸದೊಂದಿಗೆ ರಸ್ತೆಗಿಳಿಯಲು ಸಿದ್ದವಾಗಿದೆ.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಟಾಟಾ ನ್ಯಾನೋ

ದೇಶದ ಪ್ರತಿಯೊಂದು ಕುಟುಂಬವು ಒಂದು ಸಣ್ಣದಾದ ಕಾರು ಹೊಂದಬೇಕೆಂಬ ಕನಸಿನೊಂದಿಗೆ ಉದ್ಯಮಿ ರತನ್ ಟಾಟಾ ಅವರು ಅಗ್ಗದ ಬೆಲೆಯ ನ್ಯಾನೋ ಕಾರನ್ನು 2009ರಲ್ಲಿ ಬಿಡುಗಡೆ ಮಾಡಿದ್ದರು. ಕೇವಲ ರೂ.1 ಲಕ್ಷ ಬೆಲೆ ಅಂತರದಲ್ಲಿ ನ್ಯಾನೋ ಕಾರನ್ನು ಬಿಡುಗಡೆ ಮಾಡಿದ್ದ ರತನ್ ಟಾಟಾ ಅವರು ಕನಸಿನ ಕಾರು ಮಾದರಿಯು ಇದೀಗ ಮಾರುಕಟ್ಟೆಯಿಂದ ಸ್ಥಗಿತವಾದರೂ ಅಗ್ಗದ ಬೆಲೆಯ ಅತ್ಯತ್ತಮ ಕಾರು ಮಾದರಿಯ ಎಂಬ ಹೆಗ್ಗಳಿಕೆ ಹೊಂದಿತ್ತು.

ಭಾರತದ ಜನಪ್ರಿಯ 'ಮೇಡ್ ಇನ್ ಇಂಡಿಯಾ' ಕಾರುಗಳಿವು..!

ಆದರೆ ವಾಹನ ಉದ್ಯಮದಲ್ಲಿ ನಿರಂತರವಾಗಿ ಜಾರಿ ತರಲಾಗುತ್ತಿರುವ ಹೊಸ ಎಮಿಷನ್ ನಿಯಮಗಳು ಹಲವಾರು ಸಣ್ಣ ಕಾರುಗಳ ಉತ್ಪಾದನೆ ಬ್ರೇಕ್ ಹಾಕಿದ್ದು, ನಿಯಮ ಮೀರಿ ಮಾಲಿನ್ಯ ಉತ್ಪಾದನೆ ಮತ್ತು ಪ್ರಯಾಣಿಕರ ಸುರಕ್ಷಾ ಗುಣಮಟ್ಟ ಇಲ್ಲದ ಹಿನ್ನಲೆ ನ್ಯಾನೋ ಸೇರಿದಂತೆ ಹಲವು ಕಾರುಗಳು ಮಾರುಕಟ್ಟೆಯಿಂದ ಸ್ಥಗಿತಗೊಂಡಿವೆ.

Most Read Articles

Kannada
English summary
Here Are The Top-Five Famous ‘Made-In-India’ Cars Till Date. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X