ಆಟೋ ಉದ್ಯಮದಲ್ಲಿ ಕಳೆದ ವಾರ ಜರುಗಿದ ಪ್ರಮುಖ ಟಾಪ್ 5 ಘಟನೆಗಳಿವು

ಕಳೆದ ವಾರವು ಆಟೋ ಮೊಬೈಲ್ ಉದ್ಯಮಕ್ಕೆ ಸಂತಸವನ್ನುಂಟು ಮಾಡಿದೆ. ಕಳೆದ ವಾರ ಹೆಚ್ಚಿನ ಕಂಪನಿಗಳು ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಜೊತೆಗೆ ಡೀಲರ್‌ಗಳು ಶೋರೂಂಗಳನ್ನು ತೆರೆಯಲು ಶುರು ಮಾಡಿದ್ದಾರೆ. ಕೆಲವರು ತಾವು ಮಾಡಿದ ಬುಕ್ಕಿಂಗ್‌ಗಳನ್ನು ರದ್ದುಗೊಳಿಸುತ್ತಿದ್ದಾರೆ. ಕಳೆದ ವಾರ ನಡೆದ ಟಾಪ್ 5 ಘಟನೆಗಳನ್ನು ಈ ಲೇಖನದಲ್ಲಿ ನೋಡೋಣ.

ಆಟೋ ಉದ್ಯಮದಲ್ಲಿ ಕಳೆದ ವಾರ ಜರುಗಿದ ಪ್ರಮುಖ ಟಾಪ್ 5 ಘಟನೆಗಳಿವು

5. ಮಾರುತಿ ವ್ಯಾಗನ್ ಆರ್ ಎಲೆಕ್ಟ್ರಿಕ್ ಸ್ಪಾಟ್ ಟೆಸ್ಟ್: ಮಾರುತಿ ವ್ಯಾಗನ್ ಆರ್ (ಮಾರುತಿ ಸುಜುಕಿ ವ್ಯಾಗನ್ ಆರ್) ಎಲೆಕ್ಟ್ರಿಕ್ ಕಾರ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಇದರ ಜೊತೆಗೆ ಈ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ.

ಆಟೋ ಉದ್ಯಮದಲ್ಲಿ ಕಳೆದ ವಾರ ಜರುಗಿದ ಪ್ರಮುಖ ಟಾಪ್ 5 ಘಟನೆಗಳಿವು

4. ಮಹೀಂದ್ರಾ ಆನ್‌ಲೈನ್ ಪ್ಲಾಟ್‌ಫಾರ್ಮ್: ಮಹೀಂದ್ರಾ ಕಂಪನಿಯು ಆನ್‌ಲೈನ್ ಮಾರಾಟವನ್ನು ಆರಂಭಿಸಿದೆ. ಇದರ ಮೂಲಕ ದೇಶಾದ್ಯಂತವಿರುವ ಗ್ರಾಹಕರು ಮನೆಯಿಂದಲೇ ನಾಲ್ಕು ಹಂತಗಳಲ್ಲಿ ಮಹೀಂದ್ರಾ ಕಾರನ್ನು ಖರೀದಿಸಬಹುದು. ಮಹೀಂದ್ರಾ ಕಂಪನಿಯ ಈ ಆನ್‌ಲೈನ್ ಕಾರು ಖರೀದಿ ಆಯ್ಕೆಯು 24 ಗಂಟೆಗಳ ಕಾಲ ತೆರೆದಿರುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಆಟೋ ಉದ್ಯಮದಲ್ಲಿ ಕಳೆದ ವಾರ ಜರುಗಿದ ಪ್ರಮುಖ ಟಾಪ್ 5 ಘಟನೆಗಳಿವು

3. ಕಾರ್ ಬುಕ್ಕಿಂಗ್‌ ರದ್ದತಿ: ವರದಿಗಳ ಪ್ರಕಾರ, ಲಾಕ್‌ಡೌನ್ ನಂತರ ಅನೇಕ ಮಾರಾಟಗಾರರು ಬುಕ್ಕಿಂಗ್‌ ರದ್ದತಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಎಂಐ, ಕಾರು ಮೆಂಟೆನೆನ್ಸ್, ಹಣದ ಕೊರತೆ ಮುಂತಾದ ಕಾರಣಗಳಿಂದಾಗಿ ಗ್ರಾಹಕರು ಬುಕ್ಕಿಂಗ್‌‌ಗಳನ್ನು ರದ್ದುಪಡಿಸುತ್ತಿದ್ದಾರೆ.

ಆಟೋ ಉದ್ಯಮದಲ್ಲಿ ಕಳೆದ ವಾರ ಜರುಗಿದ ಪ್ರಮುಖ ಟಾಪ್ 5 ಘಟನೆಗಳಿವು

2. ಬಿಎಂಡಬ್ಲ್ಯು 8 ಸೀರಿಸ್ ಬಿಡುಗಡೆ: ಬಿಎಂಡಬ್ಲ್ಯು ಮೊದಲ ಬಾರಿಗೆ 8 ಸೀರಿಸ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.1.29 ಕೋಟಿಗಳಾಗಿದೆ. ಬಿಎಂಡಬ್ಲ್ಯು ಕಂಪನಿಯು ಈ ಕಾರುಗಳನ್ನು ಬಿಎಸ್ 6 ಪೆಟ್ರೋಲ್ ಎಂಜಿನ್‌ನಲ್ಲಿ ಬಿಡುಗಡೆಗೊಳಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆಟೋ ಉದ್ಯಮದಲ್ಲಿ ಕಳೆದ ವಾರ ಜರುಗಿದ ಪ್ರಮುಖ ಟಾಪ್ 5 ಘಟನೆಗಳಿವು

1. ಹೊಸ ಮಾರುತಿ ಎಸ್-ಕ್ರಾಸ್ ಬಿಡುಗಡೆ ಮಾಹಿತಿ: ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯಲ್ಲಿರುವ ಬಹುತೇಕ ಕಾರುಗಳನ್ನು ಬಿಎಸ್ 6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದೆ. ಮಾರುತಿ ಸುಜುಕಿ ಕಂಪನಿಯು ಲಾಕ್‌ಡೌನ್ ತೆರವುಗೊಂಡ ನಂತರ ಬಿಎಸ್ 6 ಪೆಟ್ರೋಲ್ ಎಂಜಿನ್ ಹೊಂದಿರುವ ಎಸ್-ಕ್ರಾಸ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

ಆಟೋ ಉದ್ಯಮದಲ್ಲಿ ಕಳೆದ ವಾರ ಜರುಗಿದ ಪ್ರಮುಖ ಟಾಪ್ 5 ಘಟನೆಗಳಿವು

ಇದರ ಜೊತೆಗೆ, ಕಾರು ಕಂಪನಿಗಳು ಕಾರುಗಳ ವಿತರಣೆಯನ್ನು ಸಹ ಆರಂಭಿಸಿವೆ. ಹ್ಯುಂಡೈ ಕಂಪನಿಯು ಕಳೆದ ಎರಡು ದಿನಗಳಿಂದ 170 ವಾಹನಗಳನ್ನು ವಿತರಿಸಿದೆ. ಕಿಯಾ ಕಂಪನಿಯು ಸಹ ವಿತರಣೆಯನ್ನು ಆರಂಭಿಸಿದೆ. ಮಾರುತಿ ಸುಜುಕಿ ಕಂಪನಿಯು ಮೇ 12ರಿಂದ ಉತ್ಪಾದನೆಯನ್ನು ಆರಂಭಿಸಲಿದೆ.

Most Read Articles

Kannada
English summary
Top car news of this week. Read in Kannada.
Story first published: Sunday, May 10, 2020, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X