ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ರೀಬ್ಯಾಡ್ಜ್ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳು ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಇದೀಗ ಸಹಭಾಗಿತ್ವದ ಯೋಜನೆ ಅಡಿ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯೊಂದನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿವೆ.

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಮಾರುತಿ ಸುಜುಕಿ ನಿರ್ಮಾಣದ ಬಲೆನೊ ಕಾರನ್ನು ಈಗಾಗಲೇ ಗ್ಲಾಂಝಾ ಎನ್ನುವ ಹೆಸರಿನೊಂದಿಗೆ ರೀಬ್ಯಾಡ್ಜ್ ಆವೃತ್ತಿ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ರೀಬ್ಯಾಡ್ಜ್ ಕಾರುಗಳನ್ನು ಬಿಡುಗಡೆ ಮಾಡಲಿದ್ದು, ಸಹಭಾಗಿತ್ವದ ಯೋಜನೆ ಅಡಿ ಉಭಯ ಕಂಪನಿಗಳು ಕ್ರೆಟಾ ಮತ್ತು ಸೆಲ್ಟೊಸ್ ಕಾರಿಗೆ ಪೈಪೋಟಿಯಾಗಿ ಹೊಸ ಕಾರು ಮಾದರಿಯೊಂದಿಗೆ ಸಿದ್ದಪಡಿಸುತ್ತಿರುವುದು ಬಹುತೇಕ ಖಚಿತವಾಗಿದೆ.

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ವಿಟಾರಾ ಬ್ರೆಝಾ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ರೂ.9 ಲಕ್ಷದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿ ಹೊಸ ಕಂಪ್ಯಾಕ್ಟ್ ಎಸ್‌ಯುವಿಯು ಮಾರುಕಟ್ಟೆ ಪ್ರವೇಶಿಸಲಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಮಾಹಿತಿಗಳ ಪ್ರಕಾರ, ಹೊಸ ಕಾರು ಅರ್ಬನ್ ಕ್ರೂಸರ್ ಎನ್ನುವ ಹೆಸರಿನೊಂದಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನ ಪಡೆದುಕೊಳ್ಳಲಿದೆ.

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಇತ್ತೀಚೆಗೆ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿರುವ ರೈಜ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಕೂಡಾ ಬಹುತೇಕ ವಿಟಾರಾ ಬ್ರೆಝಾ ಮಾದರಿ ಹೊಲಿಕೆಯನ್ನು ಪಡೆದುಕೊಂಡಿದ್ದು, ಅದೇ ಕಾರು ಮಾದರಿಯ ವಿನ್ಯಾಸಗಳನ್ನು ಹೊಸ ಕಾರಿನಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆಗಳಿವೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಸೆಲ್ಟೊಸ್, ಕ್ರೆಟಾ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ನಿರ್ಮಾಣದ ಹೊಸ ಕಾರು ಇದೇ ವರ್ಷಾಂತ್ಯಕ್ಕೆ ಗ್ರಾಹಕರ ಕೈ ಸೇರಲಿದೆ.

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಇನ್ನು ಸಹಭಾಗಿತ್ವದ ಯೋಜನೆ ಅಡಿ ಮಾರುತಿ ಸುಜುಕಿ ಮತ್ತು ಯೊಟೊಟಾ ಕಂಪನಿಗಳು ಈಗಾಗಲೇ ಹೊಸ ಕಾರುಗಳ ಉತ್ಪಾದನಾ ಯೋಜನೆಯನ್ನು ಈಗಾಗಲೇ ಚಾಲನೆ ನೀಡಿರುವುದಲ್ಲದೇ ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆಗೆ ಸಿದ್ದಗೊಳ್ಳುತ್ತಿದ್ದು, ಹೊಸ ವಾಹನಗಳ ಉತ್ಪಾದನಾ ವೆಚ್ಚ ತಗ್ಗಿಸಲು ಟೊಯೊಟಾ ಕಂಪನಿಯು ಹೊಸ ಪ್ಲ್ಯಾನ್‌ಗೆ ಮುಂದಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಪ್ರೀಮಿಯಂ ಕಾರುಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಬೆಲೆ ಹೆಚ್ಚಳವನ್ನು ತಗ್ಗಿಸುವುದರೊಂದಿಗೆ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿದ್ದು, ಬಿಡಿಭಾಗಗಳ ಬಳಕೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ಧರಿಸಿದೆ.

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಇದಕ್ಕಾಗಿ ಮಾರುತಿ ಸುಜುಕಿ ಕಂಪನಿಗೆ ಪೂರೈಕೆ ಮಾಡುವ ಬಿಡಿಭಾಗಗಳ ಉತ್ಪಾದನಾ ಕಂಪನಿಗಳಿಂದಲೇ ಟೊಯೊಟಾ ಕೂಡಾ ಬಿಡಿಭಾಗಗಳನ್ನು ಪಡೆದುಕೊಳ್ಳಲು ಮುಂದಾಗಿದ್ದು, ಮುಂಬರುವ ಹೊಸ ಬಜೆಟ್ ಬೆಲೆಯ ಕಾರುಗಳಲ್ಲಿ ಹೊಸ ಮಾದರಿಯ ಬಿಡಿಭಾಗಳನ್ನು ಬಳಸಿಕೊಳ್ಳಲು ಮುಂದಾಗಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಅರ್ಬನ್ ಕ್ರೂಸರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಟೊಯೊಟಾ ಹೊಸ ಕಾರು

ಹೊಸ ಯೋಜನೆಯಿಂದ ಕಾರುಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದಾದ ಬಗ್ಗೆ ಚಿಂತನೆ ನಡೆಸಿರುವ ಟೊಯೊಟಾ ಸಂಸ್ಥೆಯು ಗುಣಮಟ್ಟವನ್ನು ಸಹ ಕಾಯ್ದುಕೊಳ್ಳುವಲ್ಲಿ ಎಚ್ಚರ ವಹಿಸುತ್ತಿದ್ದು, ಸಾಧ್ಯವಷ್ಟು ಮಟ್ಟಿಗೆ ವೆಚ್ಚ ಕಡಿತಗೊಳಿಸುವಂತಹ ಬಿಡಿಭಾಗಗಳನ್ನು ಮಾರುತಿ ಸುಜುಕಿ ಬಿಡಿಭಾಗಗಳ ಪೂರೈಕೆದಾರರಿಂದ ಪಡೆದುಕೊಳ್ಳುವ ಯೋಜನೆಯಲ್ಲಿದೆ.

Most Read Articles

Kannada
English summary
Toyota badged Vitara Brezza could be named Urban Cruiser. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X