ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ಟೊಯೊಟಾ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಇನೋವಾ ಸಹ ಒಂದು. ಇನೋವಾ ದೊಡ್ಡ ಕುಟುಂಬಗಳಿಗೆ ಸೂಕ್ತವಾದ ಕಾರು. ಇನೋವಾ ಕಾರು ಹೆಚ್ಚು ಸ್ಪೇಸ್ ಹಾಗೂ ಸೀಟುಗಳನ್ನು ಹೊಂದಿದೆ. ಈ ಕಾರಣಕ್ಕೆ ಟೊಯೊಟಾ ಇನೋವಾ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ.

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ಯುವಕನೊಬ್ಬ ಈ ಕಾರನ್ನು ಮೋಟಾರು ಮನೆಯನ್ನಾಗಿ ಮಾಡಿಫೈ ಮಾಡಿದ್ದಾನೆ. ಅಂದರೆ ಟೊಯೊಟಾ ಇನೋವಾ ಕಾರನ್ನು ಸಣ್ಣ ಮನೆಯಂತೆ ಬದಲಿಸಲಾಗಿದೆ. ಟ್ರಕ್ಕಿಂಗ್ ಹಾಗೂ ಕ್ರೂಸಿಂಗ್ ಉತ್ಸಾಹಿಗಳನ್ನು ಆಕರ್ಷಿಸಲು ಕೆಲವು ದೇಶಗಳಲ್ಲಿ ಮೋಟಾರು ಮನೆಗಳನ್ನು ತಯಾರಿಸಲಾಗುತ್ತದೆ. ಭಾರತದಲ್ಲಿ ಈ ರೀತಿಯ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವುದಿಲ್ಲ.

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ಅದಕ್ಕಾಗಿ ಕೆಲವರು ತಮ್ಮ ವಿಶಾಲವಾದ ವಾಹನಗಳನ್ನೇ ಮೋಟಾರು ಮನೆಗಳಾಗಿ ಪರಿವರ್ತಿಸುತ್ತಾರೆ. ಅದರಂತೆ ಈ ಯುವಕನು ಸಹ ತನ್ನ ಟೊಯೊಟಾ ಇನೋವಾ ಕಾರನ್ನು ಮಾಡಿಫೈ ಮಾಡಿದ್ದಾನೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ಈ ಕಾರನ್ನು ಮಲಗುವ ಕೋಣೆ, ಶೌಚಾಲಯ, ಅಡುಗೆ ಮನೆಗಳ ರೀತಿಯಲ್ಲಿ ರಿಡಿಸೈನ್ ಮಾಡಲಾಗಿದೆ. ಈ ಕಾರಿನ ಇಂಟಿರಿಯರ್ ನಲ್ಲಿಯೂ ಸಹ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ಈ ಕಾರಿನ ಮಾಲೀಕ ಕೇರಳದ ಅಬ್ದುಕಾ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಅವರು ಪ್ರಯಾಣದ ಬಗ್ಗೆ ಆಸಕ್ತಿ ಹೊಂದಿದ್ದು, ತಮ್ಮ ಕುಟುಂಬದವರೊಂದಿಗೆ ಕಾಲ ಕಳೆಯಲು ತಮ್ಮ ಟೊಯೊಟಾ ಇನೋವಾ ಕಾರನ್ನು ಮೋಟಾರು ಮನೆಯನ್ನಾಗಿ ಮಾಡಿಫೈಗೊಳಿಸಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ವಿವಿಧ ಬದಲಾವಣೆಗಳ ನಂತರ ಈ ಕಾರಿನಲ್ಲಿ ಐದು ಸೀಟುಗಳನ್ನು ಉಳಿಸಿಕೊಳ್ಳಲಾಗಿದೆ. ಈ ಕಾರಿನ ಹಿಂಭಾಗದಲ್ಲಿ ಹಾಸಿಗೆ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಕಾರಿನಲ್ಲಿ ರ‍್ಯಾಕ್ ರೀತಿಯ ರಚನೆಯನ್ನು ಮಾಡಲಾಗಿದೆ.

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ಈ ರ‍್ಯಾಕ್ ಅನ್ನು ಕಾರಿನ ಕೆಳಗೆ ಅಳವಡಿಸಲಾಗಿದೆ. ಈ ರ‍್ಯಾಕ್ ಗ್ಯಾಸ್ ಸ್ಟೌವ್ ಹಾಗೂ ಸಣ್ಣ ಕೇಸ್ ಸ್ಟೋರೇಜ್ ಸೌಲಭ್ಯಗಳನ್ನು ಹೊಂದಿದೆ. ಪಾತ್ರೆಗಳನ್ನು ತೊಳೆಯಲು ಹಾಗೂ ಅಡುಗೆ ಮಾಡಲು ನೀರು ಪಡೆಯಲು ಪೈಪ್ ಅನ್ನು ಅಳವಡಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ನೀರು ಪಡೆಯಲು ಈ ಇನೋವಾ ಕಾರಿನೊಳಗೆ 40 ಲೀಟರ್ ಗಳ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಈ ಎಲ್ಲಾ ಫೀಚರ್ ಗಳನ್ನು ಕಾರಿನೊಳಗೆ ಸಣ್ಣ ಬಾಕ್ಸ್ ಗಳಾಗಿ ರ‍್ಯಾಕ್ ಗಳ ರೂಪದಲ್ಲಿ ಇಡಲಾಗಿದೆ. ಇವುಗಳನ್ನು ಬೇಕಾದಾಗ ಹೊರ ತೆಗೆಯಬಹುದು.

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ಶೌಚಾಲಯವನ್ನು ಸಹ ಇದೇ ರೀತಿ ಹೊರ ತೆಗೆದು ಕಾರಿನೊಳಗೆ ಬಳಸಬಹುದು. ಹೊರಗೆ ಬಳಸುವಾಗ ಕವರ್ ಮಾಡಲು ಡೇರೆಯನ್ನು ನೀಡಲಾಗಿದೆ. ಕಾರಿಗೆ ಅಗತ್ಯವಾದ ಎಲೆಕ್ಟ್ರಿಕ್ ಪವರ್ ನೀಡಲು ಕಾರಿನೊಳಗೆ ಸಣ್ಣ ಇನ್ವರ್ಟರ್ ಅನ್ನು ಅಳವಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇದರಿಂದ ಸೆಲ್ ಫೋನ್ ಗಳನ್ನು ಚಾರ್ಜ್ ಮಾಡಬಹುದು. ಅಬ್ದುಕಾ ಈ ಮಾಡಿಫಿಕೇಶನ್ ಗಳನ್ನು ಕೇವಲ 15 ದಿನಗಳ ಹಿಂದೆ ಮಾಡಿದ್ದಾರೆ. ಅವರು ಈ ಮಾಡಿಫೈಗೊಂಡ ಕಾರನ್ನು ಪರೀಕ್ಷಿಸಿದ್ದು, ಶೀಘ್ರದಲ್ಲೇ ಈ ಕಾರಿನಲ್ಲಿ ಪ್ರಯಾಣಿಸುವುದಾಗಿ ಹೇಳಿದ್ದಾರೆ.

ಮಿನಿ ಮನೆಯಂತೆ ಮಾಡಿಫೈಗೊಂಡ ಟೊಯೊಟಾ ಇನೋವಾ

ಮೊದಲು ಕೇರಳ ಪ್ರವಾಸ ಕೈಗೊಂಡು ನಂತರ ದೇಶದ ಇತರ ಭಾಗಗಳಿಗೆ ಭೇಟಿ ನೀಡಲು ಯೋಜಿಸಿದ್ದಾರೆ. ಭಾರತದಲ್ಲಿ ಈ ಹಿಂದೆಯೂ ವಾಹನಗಳನ್ನು ಇದೇ ರೀತಿಯಲ್ಲಿ ಮಾಡಿಫೈಗೊಳಿಸಲಾಗಿತ್ತು. ಈ ಹಿಂದೆ ತಮಿಳುನಾಡಿನ ಯುವಕನೊಬ್ಬ ಆಟೋವನ್ನು ಅಪಾರ್ಟ್ ಮೆಂಟ್ ರೀತಿಯಲ್ಲಿ ಮಾಡಿಫೈ ಮಾಡಿದ್ದ.

Most Read Articles

Kannada
English summary
Toyota Innova modified like mini home. Read in Kannada.
Story first published: Monday, October 12, 2020, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X