ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಭಾರತದಲ್ಲಿ ಹೊಸ ಕಾರುಗಳ ಅಭಿವೃದ್ದಿಗಾಗಿ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿರುವ ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು ಮುಂದಿನ ಎರಡು ವರ್ಷಗಳಲ್ಲಿ ಹಲವಾರು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲಿದ್ದು, ಹೊಸ ಯೋಜನೆಗಾಗಿ ಭಾರೀ ಪ್ರಮಾಣದ ಹೂಡಿಕೆಯನ್ನು ಸಹ ಮಾಡಿವೆ.

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಮಹೀಂದ್ರಾ ಕಂಪನಿಯು ಶೇ.51ರಷ್ಟು ಮತ್ತು ಫೋರ್ಡ್ ಕಂಪನಿಯು ಶೇ.49ರಷ್ಟು ಹೂಡಿಕೆಯೊಂದಿಗೆ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಹೊಸ ಯೋಜನೆಗಾಗಿ ಬರೋಬ್ಬರಿ ರೂ. 4,300 ಕೋಟಿ ಬಂಡವಾಳ ಹೂಡಿಕೆ ಮಾಡಿವೆ. ಹೊಸ ಯೋಜನೆ ಅಡಿ ಸಾಮಾನ್ಯ ಕಾರು ಮಾದರಿಗಳಲ್ಲದೆ ಎಲೆಕ್ಟ್ರಿಕ್ ಕಾರು ಮಾದರಿಗಳು ಸಹ ಸೇರಿದ್ದು, ಸಹಭಾಗಿತ್ವ ಯೋಜನೆ ಅಡಿ ನಿರ್ಮಾಣವಾಗುವ ಮೊದಲ ಕಾರು 2021ರ ಆರಂಭದಲ್ಲಿ ರಸ್ತೆಗಿಳಿಯಲಿದೆ.

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಜಂಟಿ ಯೋಜನೆ ಅಡಿ ಅಭಿವೃದ್ದಿಗೊಳ್ಳುತ್ತಿರುವ ಹೊಸ ಸಿ ಸೆಗ್ಮೆಂಟ್ ಕಾರು ಎಕ್ಸ್‌ಯುವಿ500 ಕಾರಿಗೆ ಸರಿಸಮನಾಗಿ ಬಿಡುಗಡೆಯಾಗಲಿದ್ದು, ನೆಕ್ಸ್ಟ್ ಜನರೇಷನ್ ಎಕ್ಸ್‌ಯುವಿ 500 ಬಿಡುಗಡೆಯ ನಂತರವೇ ಫೋರ್ಡ್ ಮತ್ತು ಮಹೀಂದ್ರಾ ನಿರ್ಮಾಣ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಜಂಟಿ ಯೋಜನೆ ಅಡಿ ಅಭಿವೃದ್ದಿಗೊಳ್ಳುವ ಹೊಸ ಕಾರಿನ ವಿನ್ಯಾಸವನ್ನು ಇಟಾಲಿಯನ್ ಕಾರು ವಿನ್ಯಾಸ ಕಂಪನಿಯಾದ ಪಿನಿನ್‌ಫರಿನಾದಿಂದ ವಿನ್ಯಾಸಗೊಳಿಸಲಾಗಿದ್ದು, ಪಿನಿನ್‌ಫರಿನಾ ವಿಶ್ವದ ಹಲವಾರು ಜನಪ್ರಿಯ ಕಾರುಗಳಿಗೆ ವಿನ್ಯಾಸ ಒದಗಿಸಿ ಜನಪ್ರಿಯತೆ ಪಡೆದಿದೆ.

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಪಿನಿನ್‌ಫರಿನಾ ಕಂಪನಿಯಲ್ಲಿ ಸದ್ಯ ಭಾರತದ ನಾಲ್ಕನೇ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಯಾದ ಮಹೀಂದ್ರಾ ಕೂಡಾ ಸ್ಟಾಕ್ ಹೊಂದಿದ್ದು, ಇದೀಗ ಫೋರ್ಡ್ ಜೊತೆಗಿನ ಹೊಸ ಯೋಜನೆಯಡಿಯ ಕಾರು ಮಾದರಿಗೂ ಇದೇ ಕಂಪನಿಯು ವಿನ್ಯಾಸ ಒದಗಿಸುತ್ತಿದೆ. ಸಿ ಸೆಗ್ಮೆಂಟ್ ಮಾತ್ರವಲ್ಲದೆ ಇಕೋಸ್ಪೋಟ್ ಮಾದರಿಗೆ ಸಮನಾಗಿ ಬಿಡುಗಡೆಯಾಗಲಿರುವ ಮತ್ತೊಂದು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗೂ ಇದೇ ಕಂಪನಿಯು ವಿನ್ಯಾಸ ಒದಗಿಸುತ್ತಿದ್ದು, ಜಂಟಿ ಯೋಜನೆ ಅಡಿ ಹೊಸ ಕಾರುಗಳು ಭಾರತದಲ್ಲಿ ಸದ್ದು ಮಾಡಲಿವೆ.

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15 ಲಕ್ಷದಿಂದ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿರುವುದು ಫೋರ್ಡ್-ಮಹೀಂದ್ರಾ ಸಹಭಾಗಿತ್ವದ ಹೊಸ ಕಾರುಗಳಿಗೆ ಪ್ರಮುಖ ಪ್ರೇರಣೆಯಾಗಿದೆ.

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಹಾಗೆಯೇ ಬಿ-ಸೆಗ್ಮೆಂಟ್‌ನಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಸಹಕರಿಸುವ ಮೂಲಕ ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಗ್ರಾಹಕರ ಬೇಡಿಕೆಯೆಂತೆ ಒಟ್ಟು 9 ಹೊಸ ಕಾರುಗಳನ್ನು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದ್ದು, ಫೋರ್ಡ್ ಎಕ್ಸ್‌ಪ್ಲೊರರ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಹೊಸ ಸಹಭಾಗಿತ್ವ ಯೋಜನೆಯಿಂದ ಎರಡು ಕಂಪನಿಗಳಿಗೂ ಸಾಕಷ್ಟು ಲಾಭವಿದ್ದು, ಕಾರು ಉತ್ಪಾದನೆಗೆ ವಿಫುಲ ಅವಕಾಶ ದೊರೆಯುವುದಲ್ಲದೆ ಫೋರ್ಡ್ ಕಾರುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಮೂಲಕ ಮಹೀಂದ್ರಾ ಕೂಡಾ ಉತ್ತಮ ಆದಾಯ ಕಂಡುಕೊಳ್ಳಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಹೀಂದ್ರಾ ಮತ್ತು ಫೋರ್ಡ್ ಸಹಭಾಗೀತ್ವದ ಹೊಸ ಎಸ್‌ಯುವಿ ಕಾರಿನ ಡಿಸೈನ್ ಬಹಿರಂಗ

ಜೊತೆಗೆ ಗುಜರಾತ್‌ನಲ್ಲಿರುವ ಫೋರ್ಡ್ ಕಾರು ಉತ್ಪಾದನಾ ಘಟಕದಲ್ಲಿ ಮಹೀಂದ್ರಾ ಕಾರುಗಳ ಉತ್ಪಾದನೆಗೂ ಅವಕಾಶ ಸಿಗುವುದರಿಂದ ಉತ್ತರ ಭಾರತದ ಪ್ರಮುಖ ನಗರಗಳಲ್ಲಿನ ಕಾರು ಬೇಡಿಕೆಯನ್ನು ಸರಿಯಾದ ಸಮಯಕ್ಕೆ ಪೂರೈಕೆ ಮಾಡಲು ಸಹಕಾರಿಯಾಗಲಿದೆ.

Source: Autocar India

Most Read Articles

Kannada
English summary
Upcoming Ford SUVs In India Will Be Designed By Mahindra Owned Pininfarina. Read in Kannada.
Story first published: Tuesday, September 29, 2020, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X