ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ಮಹಾಮಾರಿ ಕರೋನಾ ವೈರಸ್ ಅಟ್ಟಹಾಸದಿಂದಾಗಿ ಇದುವರೆಗೆ 50 ಸಾವಿರಕ್ಕೂ ಹೆಚ್ಚು ಜನ ಪ್ರಾಣಕಳೆದುಕೊಂಡಿದ್ದು, ವೈರಸ್‌ವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಟೋ ಉದ್ಯಮವು ಕೂಡಾ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದೆ.

ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ಕರೋನಾ ವೈರಸ್ ಹೊಡೆದೊಡಿಸಲು ವಿಧಿಸಲಾಗಿರುವ ಲಾಕ್‌‌ಡೌನ್ ಅನ್ನು ಹಂತ ಹಂತವಾಗಿ ಇದೀಗ ತೆರವುಗೊಳಿಸಲಾಗುತ್ತಿದ್ದು, ಹಸಿರು ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಬದ್ದ ಅವಕಾಶ ನೀಡಲಾಗುತ್ತಿದೆ. ಇದರಿಂದ ಕೆಲವು ಸುರಕ್ಷಾ ಕ್ರಮಗಳೊಂದಿಗೆ ವಾಣಿಜ್ಯ ವ್ಯಾಪಾರವನ್ನು ಪುನಾರಂಭಿಸುತ್ತಿರುವ ಉದ್ಯಮ ಸಂಸ್ಥೆಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ಜರ್ಮನ್ ಕಾರು ಉತ್ಪಾದನಾ ಕಂಪನಿ ಫೋಕ್ಸ್‌ವ್ಯಾಗನ್ ಕೂಡಾ ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದೆ.

ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ಆನ್‌ಲೈನ್ ಮೂಲಕ ಕಾರು ಮಾರಾಟ ಪ್ರಕ್ರಿಯೆಗಳನ್ನು ಕೈಗೊಳ್ಳಲಿರುವ ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಗ್ರಾಹಕರ ಮನೆ ಬಾಗಿಲಿಗೆ ಹೊಸ ಕಾರು ಉತ್ಪನ್ನಗಳನ್ನು ತಲುಪಿಸಲಿದ್ದು, ಈ ವೇಳೆ ಗರಿಷ್ಠ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಿದೆ.

ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ಹೊಸ ಗೈಡ್‌ಲೆನ್ಸ್ ಪ್ರಕಾರ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯೊಂದಿಗೆ ಉತ್ಪನ್ನಗಳನ್ನು ತಲುಪಿಸುವುದರ ಜೊತೆಗೆ ಉದ್ಯೋಗಿಗಳಿಗೂ ಗರಿಷ್ಠ ಸುರಕ್ಷತೆ ಒದಗಿಸಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಆರ್ಥಿಕ ಸಂಕಷ್ಟದಿಂದ ಹೊರಬರಲು ವಿವಿಧ ಹೊಸ ಯೋಜನೆಗಳನ್ನು ರೂಪಿಸುತ್ತಿದೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ಇನ್ನು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿರುವ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಗ್ರಾಹಕರಿಗೆ ಹೆಚ್ಚುವರಿ ವಾರಂಟಿ ಅವಧಿಯನ್ನು ಘೋಷಣೆ ಮಾಡಿರುವುದಲ್ಲದೆ ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆಯ ನೀತಿ ಭಾರೀ ಪ್ರಮಾಣದ ದೇಣಿಗೆ ನೀಡಿ ಬದ್ದತೆ ತೊರಿದ್ದು, ಯುರೋಪಿನ್ ವಿವಿಧ ರಾಷ್ಟ್ರಗಳಲ್ಲಿ ವೆಂಟಿಲೆಟರ್‌ ಮತ್ತು ಅಗತ್ಯ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಸಹಕಾರಿಯಾಗುತ್ತಿದೆ.

ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆಗೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ವಿವಿಧ ರಾಜ್ಯ ಸರ್ಕಾರಗಳಿಗೆ ವಿತರಣೆ ಮಾಡುತ್ತಿವೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪಾದನೆ ಮಾಡುತ್ತಿವೆ.

ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆಯು ಸೋಂಕಿತರ ಸಾವಿನ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಎಫೆಕ್ಟ್- ಆನ್‌ಲೈನ್ ಕಾರು ಮಾರಾಟಕ್ಕೆ ಚಾಲನೆ ನೀಡಿದ ಫೋಕ್ಸ್‌ವ್ಯಾಗನ್

ಈ ಹಿನ್ನಲೆಯಲ್ಲಿ ಸದ್ಯ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಘಟಕಗಳಲ್ಲೇ ಅಗತ್ಯ ವೈದಕೀಯ ಉಪಕರಣಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಗರಿಷ್ಠ ಸಹಾಯ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಕಾರಣವಾಗಿದೆ.

Most Read Articles

Kannada
English summary
Volkswagen car sales online platform launched details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X