ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಇಂಡಿಯಾ ಸದ್ದಿಲ್ಲದೆ ತನ್ನ ಗ್ರಾಹಕರಿಗಿ ಹೊಸ ಯೋಜನೆಯನ್ನು ರೂಪಿಸಿದೆ. ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಹಬ್ಬದ ಅವಧಿಯಲ್ಲಿ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

2018ರ ಸೆಪ್ಟೆಂಬರ್ ನಿಂದ ಫೋಕ್ಸ್‌ವ್ಯಾಗನ್ ಅಮಿಯೊ, ಪೊಲೊ, ವೆಂಟೊ ಕಾರುಗಳನ್ನು ಖರೀದಿಸಿದವರು ತಮ್ಮ ಕಾರಿನ ಬ್ಯಾಟರಿಗಳಲ್ಲಿ ವಿಸ್ತೃತ ವಾರಂಟಿಯನ್ನು ಪಡೆಯುತ್ತಾರೆ. ಕಾರು ತಯಾರಕರು ಸಾಮಾನ್ಯವಾಗಿ ಬ್ಯಾಟರಿಯಲ್ಲಿ ಕೇವಲ 12 ತಿಂಗಳ ವಾರಂಟಿಯನ್ನು ನೀಡುತ್ತಾರೆ. ಒಂದು ವರ್ಷದ ನಂತರ ಬ್ಯಾಟರಿಯು ದೋಷ ಕಂಡುಬಂದಲ್ಲಿ ಗ್ರಾಹಕರು ನೇರವಾಗಿ ಬ್ಯಾಟರಿ ತಯಾರಕರ ಬಳಿಗೆ ಹೋಗಲು ಕೇಳಲಾಗುತ್ತದೆ.

ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

ಆದರೆ ಫೋಕ್ಸ್‌ವ್ಯಾಗನ್ ಇಂಡಿಯಾ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸರಿಪಡಿಸಲಾಗುತ್ತದೆ. ಪ್ರಸ್ತುತ ಎಲೆಕ್ಟ್ರಿಕ್ ಕಾರು ತಯಾರಕರು ಮಾತ್ರ ಗ್ರಾಹಕರಿಗೆ ಬ್ಯಾಟರಿಯಲ್ಲಿ ಸುಮಾರು 5-8 ವರ್ಷಗಳವರೆಗೆ ವಾರಂಟಿಯನ್ನು ನೀಡುತ್ತಾರೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

ಕಾರು ಖರೀದಿಸಿದ ಮೊದಲ ಎರಡು ವರ್ಷಗಳಲ್ಲಿ ಬ್ಯಾಟರಿಯ ಅಸಮರ್ಪಕ ಕಾರ್ಯಗಳು ಅಥವಾ ದೋಷಗಳು ಸಂಭವಿಸಿದಲ್ಲಿ ಮಾಲೀಕರು ನೇರವಾಗಿ ಫೋಕ್ಸ್‌ವ್ಯಾಗನ್ ಸರ್ವಿಸ್ ಸೆಂಟರ್ ಹೋಗಿ ವಾರಂಟಿಯನ್ನು ಪಡೆಯಬಹುದು. ಅಗತ್ಯವಿದ್ದರೆ ರಿಪೇರಿ ಮಾಡಲಾಗುತ್ತದೆ.

ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

ಐಸಿಇ ಎಂಜಿನ್ಗಳಿಗಾಗಿ ಫೋಕ್ಸ್‌ವ್ಯಾಗನ್ ನೀಡಿದ ಆಫರ್ ಇತರ ಕಾರು ತಯಾರಕರಿಗೆ ತಮ್ಮ ಗ್ರಾಹಕರಿಗೆ ಈ ಆಫರ್ ನೀಡಲು ಉತ್ತೇಜಿಸುತ್ತದೆ. ಇದಲ್ಲದೇ ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಕಾರುಗಳಿಗೆ ಭರ್ಜರಿ ಆಫರ್ ಗಳನ್ನು ಕೂಡ ನೀಡಲಾಗುತ್ತಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್‌ ಕಂಪನಿಯು ಪೊಲೊ ಹಾಗೂ ವೆಂಟೊಗಳ ಆಟೋಮ್ಯಾಟಿಕ್ ಮಾದರಿಗಳನ್ನು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಫೋಕ್ಸ್‌ವ್ಯಾಗನ್‌ ಕಂಪನಿಯು ಮಾರುಕಟ್ಟೆ ತಂತ್ರವನ್ನು ಗಮನದಲ್ಲಿಟ್ಟುಕೊಂಡು ಈ ಎರಡೂ ಮಾದರಿಗಳನ್ನು ಟಾಪ್-ಎಂಡ್ ಮಾದರಿಯಲ್ಲಿ ಬಿಡುಗಡೆಗೊಳಿಸಿದೆ.

ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್‌ ಕಂಪನಿಯ ಈ ಎರಡು ಕಾರುಗಳಲ್ಲಿ 1.0-ಲೀಟರಿನ ಟಿಎಸ್‌ಐ 3-ಸಿಲಿಂಡರ್‌ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 109 ಬಿಹೆಚ್‌ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 1,750-4,000 ಆರ್‌ಪಿಎಂ ನಡುವೆ ಟಾರ್ಕ್ ಉತ್ಪಾದಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

ಈ ಎಂಜಿನ್‌ನೊಂದಿಗೆ 6-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೀಡಲಾಗಿದೆ. ಇನ್ನು ಫೋಕ್ಸ್‌ವ್ಯಾಗನ್‌ ಕಂಪನಿಯು ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಇತ್ತೀಚೆಗೆ ಪೊಲೊ ಹಾಗೂ ವೆಂಟೊ ಕಾರುಗಳ ಸ್ಪೆಷ; ಎಡಿಷನ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ಮೊದಲ ಬಾರಿಗೆ ಬ್ಯಾಟರಿಗಳ ಮೇಲೆ ಎಕ್ಸ್‌ಟೆಂಡೆಡ್‌ ವಾರಂಟಿ ನೀಡುತ್ತಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯ ಟಿ-ರಾಕ್ ಮತ್ತು ಟಿಗ್ವಾನ್ ಎಸ್‍ಯುವಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಇದರಿಂದ ಫೋಕ್ಸ್‌ವ್ಯಾಗನ್ ಕಂಪನಿಯು ಬಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

Most Read Articles

Kannada
English summary
Volkswagen India Introduces Industry-first Extended Battery Warranty. Read In Kannada.
Story first published: Thursday, November 12, 2020, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X