ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ಟಿಗ್ವಾನ್ ಇ-ಹೈಬ್ರಿಡ್ ಎಸ್‍ಯುವಿಯನ್ನು ಜಾಗತಿಕವಾಗಿ ಬಿಡುಗಡೆಗೊಳಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಲೈಫ್, ಎಲೆಗೆನ್ಸ್ ಮತ್ತು ಆರ್-ಲೈನ್ ಸೇರಿದಂತೆ ಮೂರು ಸಲಕರಣೆಗಳ ಪ್ಯಾಕ್‌ಗಳಲ್ಲಿ ಲಭ್ಯವಿದೆ. ಇನ್ನು ಟಿಗ್ವಾನ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2007ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದರು. ಹಿಂದಿನ ಮಾದರಿ ಟಿಗ್ವಾನ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದಾಗ 6 ದಶಲಕ್ಷಕ್ಕೂ ಹೆಚ್ಚಿನ ಯುನಿಟ್ ಗಳು ಮಾರಾಟವಾಗಿತ್ತು.

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಇನ್ನು ಹೊಸ ಟಿಗ್ವಾನ್ ಇ-ಹೈಬ್ರಿಡ್ ಎಸ್‍ಯುವಿಯಲ್ಲಿ ಹೊಸ ಟೈಲ್ ಲೈಟ್, ಮರುವಿನ್ಯಾಸಗೊಳಿಸಿದ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ನವೀಕರಿಸಿದ ಬಂಪರ್ ಅನ್ನು ಅಳವಡಿಸಲಾಗಿದೆ. ಇನ್ನು ಟಿಗ್ವಾನ್ ಬ್ಯಾಡ್ಜಿಂಗ್ ಅನ್ನು ಟೈಲ್‌ಗೇಟ್‌ನ ಮಧ್ಯಭಾಗಕ್ಕೆ ಸ್ಥಳಾಂತರಿಸಲಾಗಿದೆ. ಈ ಎಸ್‍ಯುವಿಯ ಹಿಂಭಾಗದಲ್ಲಿ ಹೆಚ್ಚುವರಿ ಕ್ರೋಮ್ ಬಿಟ್‌ಗಳನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಇನ್ನು ಟಿಗ್ವಾನ್ ಇ-ಹೈಬ್ರಿಡ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ ಕೂಡ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಈ ಟಿಗ್ವಾನ್ ಎಸ್‍ಯುವಿಯಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂನ ಇತ್ತೀಚಿನ ಆವೃತ್ತಿ ಮತ್ತು ದೊಡ್ಡ ಟಚ್‌ಸ್ಕ್ರೀನ್‌ಗಳನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‍ಯುವಿಯಲ್ಲಿ ಲೈವ್ ಟ್ರಾಫಿಕ್ ಡೇಟಾ ಮತ್ತು ಹಲವಾರು ಅಪ್ಲಿಕೇಶನ್ ಆಧಾರಿತ ಕನೆಕ್ಟಿವಿಟಿ ಫೀಚರ್ ಗಳನ್ನು ಹೊಂದಿದೆ. ಇನ್ನು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಅನ್ನು ಸಹ ನೀಡಲಾಗಿದೆ. ಇದರೊಂದಿಗೆ 10.0-ಇಂಚಿನ ಡಿಜಿಟಲ್ ಡಯಲ್ ಸ್ಕ್ರೀನ್ ಅನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‍ಯುವಿಯಲ್ಲಿ ಸೆಂಟರ್ ಕನ್ಸೋಲ್‌ನಲ್ಲಿ ಯುಎಸ್‌ಬಿ-ಸಿ ಪೋರ್ಟ್‌ಗಳು, ಹೊಸ ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೂಂದಿದೆ.

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಇನ್ನು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‍ಯುವಿಯಲ್ಲಿ 1.4-ಲೀಟರ್ ಟಿಎಸ್‌ಐ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದನ್ನು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಇದನ್ನು 6-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಇದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಮತ್ತು ಟಿಎಸ್‌ಐ ಎಂಜಿನ್ ಜಂಟಿಯಾಗಿ 400 ಎನ್‌ಎಂ ಟಾರ್ಕ್ ಉತ್ಪಾದಿಸಬಹುದು. ಪ್ಲಗ್-ಇನ್ ಹೈಬ್ರಿಡ್ ಡ್ರೈವ್ 241 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಇದು ಹೈಬ್ರಿಡ್ ಮೋಡ್‌ನಲ್ಲಿ ಹೆಚ್ಚುವರಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಎಲೆಕ್ಟ್ರಿಕ್ ಸಿಸ್ಟಂನಲ್ಲಿ ಈ ಕಾರು ಕೇವಲ 50 ಕಿ.ಮೀ ದೂರವನ್ನು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಇನ್ನು ಫೋಕ್ಸ್‌ವ್ಯಾಗನ್ ತನ್ನ ಹೊಸ ಟಿಗ್ವಾನ್ ಆರ್ ಎಸ್‍ಯುವಿಯನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆರ್ ಎಸ್‍ಯುವಿಯಲ್ಲಿ ಬ್ರ್ಯಾಂಡ್‌ನ ಗಾಲ್ಫ್ ಆರ್‌ ಮಾದರಿಯ ಎಂಜಿನ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆರ್ ಎಸ್‍ಯುವಿಯು 315 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆರ್ ಎಸ್‍ಯುವಿಯು ಕೇವಲ 4.9 ಸೆಕೆಂಡುಗಳಲ್ಲಿ 0-100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಮಾದರಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‌ಯುವಿ

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಇ-ಹೈಬ್ರಿಡ್ ಎಸ್‍ಯುವಿಯಲ್ಲಿ ದೇಶೀಯ ಸಾಕೆಟ್‌ಗಳಿಗೆ ಕನೆಕ್ಟರ್‌ನೊಂದಿಗೆ ಚಾರ್ಜರ್ ಬಳಸಿ 2.3 ಕಿ.ವ್ಯಾಟ್ ಅಥವಾ ಚಾರ್ಜಿಂಗ್ ಸ್ಟೇಷನ್ ಅಥವಾ ಹೋಮ್ ಚಾರ್ಜಿಂಗ್ ಸ್ಟೇಷನ್‌ನಲ್ಲಿ 3.6 ಕಿ.ವ್ಯಾಟ್ ಪ್ಲಗ್-ಇನ್ ಹೈಬ್ರಿಡ್ ಡ್ರೈವ್ ಅನ್ನು ಪ್ರೋಗ್ರಾಮ್ ಮಾಡಲಾಗಿದೆ. ಇದರಿಂದ ಬ್ಯಾಟರಿ ಸಾಕಷ್ಟು ಚಾರ್ಜ್ ಆಗಿದ್ದರೆ ಕಾರನ್ನು ಇವಿ ಮೋಡ್‌ನಲ್ಲಿ ಚಲಾಯಿಸಬಹುದು.

Most Read Articles

Kannada
English summary
All-New Volkswagen Tiguan eHybrid Launched Globally. Read In Kannada.
Story first published: Wednesday, December 16, 2020, 18:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X