ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ನಿವಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಕೂಪ್ ಎಸ್‍ಯುವಿಯನ್ನು ಬ್ರೆಜಿಲ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ನಿವಸ್ ಎಸ್‍ಯುವಿಯು ಬಿಡುಗಡೆಗೊಳಿಸಿದ ಕೆಲವೇ ಗಂಟೆಗಳಲ್ಲಿ ಭರ್ಜರಿಯಾಗಿ ಮಾರಾಟವಾಗಿದೆ.

ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯು ಬಿಡುಗಡೆಯಾದ ಕಲವೇ ಗಂಟೆಗಳಲ್ಲಿ 1,000 ಯುನಿಟ್ ಗಳು ಮಾರಾಟವಾಗಿದೆ. ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯು ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಫೋಕ್ಸ್‌ವ್ಯಾಗನ್ ಟಿ-ರಾಕ್ ಕೂಡ ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈಗಾಗಲೇ ಸಾವೊ ಬರ್ನಾರ್ಡೊ ಡೂ ಕ್ಯಾಂಪೊದಲ್ಲಿನ ಆಂಚಿಯೆಟಾ ಘಟಕದಲಿ ಈ ನಿವಸ್ ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ.

ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಸ್‌ಒವರ್ ಅಥವಾ ‘ಅರ್ಬನ್ ಎಸ್‌ಯುವಿಗಳಿಗೆ' ಬೇಡಿಕೆ ಹೆಚ್ಚಾಗುತ್ತಿದೆ. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಫಸ್ಟ್ ಜನರೇಷನ್ ಬಿಎಂಡಬ್ಲ್ಯು ಎಕ್ಸ್ 6 ಮೊದಲ ಕ್ರಾಸ್‌ಒವರ್ ಕೂಪ್ ಎಸ್‍ಯುವಿಯಾಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್ ಇಂಡಿಯಾ 2.0 ಯೋಜನೆಯಡಿಯಲ್ಲಿ ಟಿ-ಕ್ರಾಸ್ ಟಿ-ಕ್ರಾಸ್‌ಗೆ ಹೋಲುವಂತೆ ಕಾಣುವ ಟೈಗನ್ ಕ್ರಾಸ್‌ಒವರ್‌ಗೆ ಆಧಾರವಾಗಿರುವ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಭಾರತಕ್ಕಾಗಿ ತಯಾರಿಸಬಹುದು ಎಂದು ನಿರೀಕ್ಷಿಸುತ್ತೇವೆ. ಟ್ವಿಗನ್ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು.

ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯು 4,266 ಎಂಎಂ ಉದ್ದ ಮತ್ತು 2,560 ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯ ಎರಡು ಟಯರ್ ಗಳ ವಿಸ್ತರಣೆಯನ್ನು 2,650 ಎಂಎಂ ಅಷ್ಟು ಇದೆ. ನಿವಸ್ ಎಸ್‍ಯುವಿಯು ಟೈಗನ್ ಎಸ್‍ಯುವಿಗಿಂತ ದೊಡ್ಡ ಬೂಟ್ ಸ್ಪೇಸ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಈ ಹೊಸ ನಿವಸ್ ಎಸ್‍ಯುವಿಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ. ಈ ಹೊಸ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, 17 ಇಂಚಿನ ವ್ಹೀಲ್, ಪೂರ್ಣ ಪ್ರಮಾಣದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಂ, ಕೀ ಲೆಸ್ ಎಂಟ್ರಿ ಮತ್ತು ಪೂರ್ಣ-ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯಲ್ಲಿ ‘ವೋಕ್ಸ್ ಪ್ಲೇ' ಎಂದು ಕರೆಯಲ್ಪಡುವ ವೈಫೈ-ಒಳಗೊಂಡ ಸಿಸ್ಟಂ ಅನ್ನು ಹೊಂದಿದೆ. ಜೊತೆಗೆ 10ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತು ಹೆಚ್ಚುವರಿಯಾಗಿ ಅಪ್ಲಿಕೇಶನ್ ಸ್ಟೋರ್ ಅನ್ನು ಕೂಡ ಹೊಂದಿದೆ.

MOST READ: ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯಲ್ಲಿ 1.0-ಲೀಟರ್ ಟಿಎಸ್‌ಐ ಟರ್ಬೊ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 126 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂಭಾಗದ ಚಕ್ರಗಳಿಗೆ 6-ಸ್ಪೀಡ್ ಟಾರ್ಕ್-ಕರ್ನವಾಟರ್ ಮೂಲಕ ಪವರ್ ಅನ್ನು ಕಳುಹಿಸಲಾಗುತ್ತದೆ.

ಭರ್ಜರಿಯಾಗಿ ಮಾರಾಟವಾಯ್ತು ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿ

ಭವಿಷ್ಯದಲ್ಲಿ ಹೆಚ್ಚುವರಿಯಾಗಿ ಈ ಹೊಸ ನಿವಸ್ ಎಸ್‍ಯುವಿಯಲ್ಲಿ 1.5-ಲೀಟರ್ ಟಿಎಸ್ಐ ಎಂಜಿನ್ ಅನ್ನು ಅಳವಡಿಸಬಹುದು. ಈ ಪ್ರೀಮಿಯಂ ಕ್ರಾಸ್‌ಒವರ್ ಆದ ಫೋಕ್ಸ್‌ವ್ಯಾಗನ್ ನಿವಸ್ ಜಾಗತಿಕ ಮಾರುಕಟ್ಟೆಯಲ್ಲಿ ಆಡಿ ಕ್ಯೂ3 ಸ್ಪೋರ್ಟ್‌ಬ್ಯಾಕ್, ಬಿಎಂಡಬ್ಲ್ಯು ಎಕ್ಸ್4 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕೂಪೆ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Volkswagen Nivus Suv 1000 Units Sold Within Hour. Read In Kananda.
Story first published: Saturday, June 27, 2020, 19:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X