Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲಿದೆ ಈ ರೋಬೋಟ್
ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಮೊದಲ ಮೊಬೈಲ್ ಚಾರ್ಜಿಂಗ್ ರೋಬೋಟ್ ಅನ್ನು ಪರಿಚಯಿಸಿದೆ. ಈ ರೋಬೋಟ್ ಅನ್ನು ಪಾರ್ಕಿಂಗ್ ಪ್ರದೇಶಗಳಲ್ಲಿರುವ ಅಟಾನಾಮಸ್ ವಾಹನಗಳನ್ನು ಮಾತ್ರ ಚಾರ್ಜ್ ಮಾಡಲು ಬಳಸಲಾಗುತ್ತದೆ.

ಅಟಾನಾಮಸ್ ಆಗಿ ಕಾರ್ಯನಿರ್ವಹಿಸುವ ಈ ರೋಬೋಟ್ ಗಳನ್ನು ಅಪ್ಲಿಕೇಶನ್ ಮೂಲಕ ಅಥವಾ ಕಾರ್-ಟು-ಎಕ್ಸ್ ಕಮ್ಯೂನಿಕೇಷನ್ ಮೂಲಕ ಸ್ಟಾರ್ಟ್ ಮಾಡಬಹುದು. ಇವುಗಳನ್ನು ನಿರ್ವಹಿಸಲು ಮಾನವರ ಅಗತ್ಯವಿಲ್ಲ. ರೋಬೋಟ್ ಆಟೋಮ್ಯಾಟಿಕ್ ಆಗಿ ಕಾರಿನ ಬಳಿ ಬಂದು ಕಾರನ್ನು ಚಾರ್ಜ್ ಮಾಡುತ್ತದೆ. ಚಾರ್ಜಿಂಗ್ ಸಾಕೆಟ್ ಪ್ಲಗ್ ತೆರೆಯುವುದರಿಂದ ಹಿಡಿದು ಪ್ಲಗ್ ಅನ್ನು ಕನೆಕ್ಟ್ ಮಾಡಿ ಅನ್ ಪ್ಲಗ್ ಮಾಡುವವರೆಗೆ ಎಲ್ಲಾ ಕಾರ್ಯವನ್ನು ಈ ರೋಬೋಟ್ ಮಾಡುತ್ತದೆ.

ಯುನಿವರ್ಸಲ್ ಚಾರ್ಜಿಂಗ್ ಮೂಲಸೌಕರ್ಯವು ಎಲೆಕ್ಟ್ರಿಕ್ ವಾಹನಗಳ ಯಶಸ್ಸಿಗೆ ಪ್ರಮುಖ ಅಂಶವಾಗಿದೆ. ಈ ಚಾರ್ಜಿಂಗ್ ರೋಬೋಟ್ ಅವುಗಳಲ್ಲಿ ಒಂದು. ಆದರೆ ಈ ರೋಬೋಟ್ ಯೋಜನೆ ಭವಿಷ್ಯದಲ್ಲಿ ನೆರವಿಗೆ ಬರುತ್ತದೆ ಎಂದು ಫೋಕ್ಸ್‌ವ್ಯಾಗನ್ ಕಂಪನಿ ಹೇಳಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹಲವು ವಾಹನಗಳನ್ನು ಒಂದೇ ಸಮಯಕ್ಕೆ ಚಾರ್ಜ್ ಮಾಡಲು ಈ ಮೊಬೈಲ್ ರೋಬೋಟ್ ವಾಹನದ ಬಳಿ ಮೊಬೈಲ್ ಎನರ್ಜಿ ಸ್ಟೋರೇಜ್ ಯುನಿಟ್ ಅನ್ನು ತೆಗೆದುಕೊಳ್ಳುತ್ತದೆ. ನಂತರ ವಾಹನವನ್ನು ಚಾರ್ಜ್ ಮಾಡಲು ಎನರ್ಜಿ ಸ್ಟೋರೇಜ್ ಮಾಡುತ್ತದೆ. ಮತ್ತೊಂದು ವಾಹನವನ್ನು ಚಾರ್ಜ್ ಮಾಡುವಾಗ ಈ ವಿಧಾನವನ್ನು ಪುನರಾವರ್ತಿಸುತ್ತದೆ.

ವಾಹನವನ್ನು ಚಾರ್ಜ್ ಮಾಡಿದ ನಂತರ ರೋಬೋಟ್ ಮೊಬೈಲ್ ಎನರ್ಜಿ ಸ್ಟೋರೇಜ್ ಯೂನಿಟ್ ಅನ್ನು ಸಂಗ್ರಹಿಸಿ ಅದನ್ನು ಸೆಂಟ್ರಲ್ ಚಾರ್ಜಿಂಗ್ ಸ್ಟೇಷನ್‌ಗೆ ಹಿಂತಿರುಗಿಸುತ್ತದೆ. ಈ ಯೂನಿಟ್ ಡಿಸಿ ಚಾರ್ಜಿಂಗ್'ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಕುರಿತು ಮಾತನಾಡಿರುವ ಫೋಕ್ಸ್‌ವ್ಯಾಗನ್ ಕಂಪನಿಯು, ಭವಿಷ್ಯದಲ್ಲಿ ಉತ್ತಮ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸುವುದು ಅವಶ್ಯಕವಾಗಿದೆ. ಇದು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿದೆ. ಈ ಸವಾಲುಗಳನ್ನು ಎದುರಿಸಲು ನಾವು ಹೊಸ ಪರಿಹಾರಗಳನ್ನು ತರುತ್ತಿದ್ದೇವೆ. ನಮ್ಮ ಬಳಿ ಮೊಬೈಲ್ ಚಾರ್ಜಿಂಗ್ ರೋಬೋಟ್ ಹಾಗೂ ಫ್ಲೆಕ್ಸಿಬಲ್ ಫಾಸ್ಟ್ ಚಾರ್ಜಿಂಗ್ ಸ್ಟೇಷನ್ ಗಳಂತಹ ಯೋಜನೆಗಳಿವೆ ಎಂದು ಹೇಳಿದೆ.

ಫ್ಲೆಕ್ಸಿಬಲ್ ಕ್ವಿಕ್ ಚಾರ್ಜಿಂಗ್ ಸ್ಟೇಷನ್ ಅನ್ನು 2021ರ ಆರಂಭದಲ್ಲಿ ಆರಂಭಿಸಲಾಗುವುದು ಎಂದು ಕಂಪನಿ ಹೇಳಿದೆ. ಮೊಬೈಲ್ ಚಾರ್ಜಿಂಗ್ ರೋಬೋಟ್‌ನ ಅನುಕೂಲಗಳ ಬಗ್ಗೆ ಹೇಳಿರುವ ಕಂಪನಿಯು ಈ ರೋಬೋಟ್ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್'ಗಳ ನಿರ್ಮಾಣ ವೆಚ್ಚವನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದೇಶಾದ್ಯಂತ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್'ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು 10,000 ಪೆಟ್ರೋಲ್ ಬಂಕ್ ಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್'ಗಳನ್ನು ಸ್ಥಾಪಿಸುತ್ತಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಹೊಸ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶುಲ್ಕದ ಮೇಲೆ ರಿಯಾಯಿತಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ.