ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಫೋಕ್ಸ್ ವ್ಯಾಗನ್ ಕಂಪನಿಯು ತನ್ನ ಹೊಸ ವೆಂಟೊ ಕಾಂಪ್ಯಾಕ್ಟ್ ಸೆಡಾನ್‍‍ನ ಅಧಿಕೃತ ಸ್ಕೆಚ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಹೊಸ ವೆಂಟೊ ಸ್ಕೆಚ್ ಚಿತ್ರದಲ್ಲಿ ಕಾರಿನ ಹೊಸ ವಿನ್ಯಾಸವು ಬಹಿರಂಗವಾಗಿದೆ. ಹೊಸ ವೆಂಟೊ ಕಾಂಪ್ಯಾಕ್ಟ್ ಸೆಡಾನ್‍‍ನ ಸ್ಕೆಚ್ ಚಿತ್ರದಲ್ಲಿ ಫೋಕ್ಸ್ ವ್ಯಾಗನ್ ಪೊಲೊ ಮಾದರಿಯ ವಿನ್ಯಾಸಕ್ಕೆ ಹೆಚ್ಚಿನ ಸಾಮ್ಯತೆಯನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಅಧಿಕೃತ ಸ್ಕೆಚ್ ಚಿತ್ರದಲ್ಲಿ ಮುಂಬರುವ ಪೋಕ್ಸ್ ವ್ಯಾಗನ್ ವೆಂಟೊ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಬಾನೆಟ್ ಅನ್ನು ಹೊಂದಿದೆ. ಇದು ಫೋಕ್ಸ್ ವ್ಯಾಗನ್ ಜೆಟ್ಟಾ ಕಾರಿನ ಮಾದರಿಯಂತಿದೆ. 2021ರ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಾಂಪ್ಯಾಕ್ಟ್ ಸೆಡಾನ್‍ನಲ್ಲಿ ಮರುವಿನ್ಯಾಸಗೊಳಿಸಲಾದ ಬಂಪರ್ , ಹೊಸ ಎಲ್‍ಇಡಿ ಹೆಡ್‍‍ಲೈಟ್ ಮತ್ತು ದೊಡ್ಡದಾದ ಏರ್‍‍ಡ್ಯಾಮ್ ಅನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಕಾರಿನ ಹಿಂಭಾಗದ ವಿನ್ಯಾಸವನ್ನು ಕೆಲವು ಬದಲಾವಣೆ ಮಾಡಲಾಗಿದೆ. ಇನ್ನು ಈ ಹೊಸ ಕಾರಿನ ಹಿಂಭಾಗದಲ್ಲಿ ಹೊಸ ಟೇಲ್ ಲ್ಯಾಂಪ್, ಮಸ್ಕ್ಯುಲರ್ ಬಂಪರ್ ಮತ್ತು ಫಾಕ್ಸ್ ಡ್ಯುಯಲ್ ಎಕ್ಸಾಸ್ಟ್ ಟಿಪ್‍ಗಳನ್ನು ಅಳವಡಿಸಲಾಗಿದ

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಬಿಡುಗಡೆಗೊಳಿಸಲಾದ ಸ್ಕೆಚ್ ಚಿತ್ರದಲ್ಲಿ ಹೊಸ ವೆಂಟೊ ಕಾರಿನ ಇಂಟಿರಿಯರ್ ಮಾಹಿತಿಯು ಬಹಿರಂಗವಾಗಿದೆ. ಹೊಸ ಇಂಟಿರಿಯರ್‍‍ನಲ್ಲಿ ಫೋಕ್ಸ್ ವ್ಯಾಗನ್ ಜೆಟ್ಟಾ ಮಾದರಿಯಂತೆ ಸ್ಟೀಟಿಯರಿಂಗ್ ವ್ಹೀಲ್ ಅನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ವೆಂಟೊ ಕಾರಿನ ಇಂಟಿರಿಯರ್‍‍ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನೊಂದಿಗೆ ಎರಡೂ ಬದಿಯಲ್ಲಿ ಎಸಿ ವೆಂಟ್ಸ್ ಮತ್ತು ಕ್ಲೈಮೆಂಟ್ ಕಂಟ್ರೋಲ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 8 ಇಂಚಿನ ಪ್ಲೋಟಿಂಗ್ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಫೋಕ್ಸ್ ವ್ಯಾಗನ್ ವೆಂಟೊ ಕಾರಿನಲ್ಲಿ ಎಲೆಕ್ಟ್ರಿಕ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಅರಾಮದಾಯಕ ಸೀಟ್‍ಗಳು, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಎಸಿ ವೆಂಟ್ಸ್ ಗಳನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಹೊಸ ತಲೆಮಾರಿನ ಫೋಕ್ಸ್ ವ್ಯಾಗನ್ ವೆಂಟೊ ಕಾರಿನಲ್ಲಿ ಎಂಜಿನ್‍ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಕಾಂಪ್ಯಾಕ್ಟ್ ಸೆಡಾನ್‍ನಲ್ಲಿ ಹೊಸ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಹೊಸ 1.0 ಲೀಟರ್ ಮೂರು ಸಿಲಿಂಡರ್ ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 113 ಬಿ‍‍ಹೆಚ್‍‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಟಾರ್ಕ್ ಕರ್ನ್ ವಾಟರ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿರಲಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಫೋಕ್ಸ್ ವ್ಯಾಗನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.77 ಲಕ್ಷದಿಂದ ರೂ.14.49 ಲಕ್ಷಗಳಾಗಿದೆ. ಹೊಸ ತಲೆಮಾರಿನ ವೆಂಟೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.10 ಲಕ್ಷದಿಂದ ರೂ.16 ಲಕ್ಷಗಳವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ

ಫೋಕ್ಸ್ ವ್ಯಾಗನ್ ಕಂಪನಿಯು ಸ್ಕೆಚ್ ಚಿತ್ರದಲ್ಲಿ ಹೊಸ ತಲೆಮಾರಿನ ವೆಂಟೊ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ವೆಂಟೊ ಕಾರು ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
Volkswagen Vento Official Sketches Revealed: Redesigned Exterior, Impressive Interior. Read in Kannada.
Story first published: Tuesday, February 11, 2020, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X