ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಹ್ಯುಂಡೈ ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಹ್ಯುಂಡೈ ಕಂಪನಿಯ ಸ್ಯಾಂಟ್ರೊ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಹ್ಯುಂಡೈ ಕಂಪನಿಯು ಕೆಲವು ವರ್ಷಗಳ ಹಿಂದೆ ಸ್ಯಾಂಟ್ರೊ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಇತ್ತೀಚಿಗೆ ಈ ಕಾರ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸಲಾಗಿದೆ. ಇಂದಿಗೂ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಜನರು ಹ್ಯುಂಡೈ ಸ್ಯಾಂಟ್ರೊ ಜಿಂಗ್ ಕಾರ್ ಅನ್ನು ಚಾಲನೆ ಮಾಡುತ್ತಿದ್ದಾರೆ. ಇದು ಮಾತ್ರವಲ್ಲದೇ ಈ ಕಾರಿಗೆ ಹಲವಾರು ಮಾಡಿಫಿಕೇಶನ್'ಗಳನ್ನು ಸಹ ಮಾಡಲಾಗಿದೆ.

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಈ ಲೇಖನದಲ್ಲಿ ಮಾಡಿಫೈಗೊಂಡ ಸ್ಯಾಂಟ್ರೊ ಜಿಂಗ್ ಬಗೆಗಿನ ವಿವರಗಳನ್ನು ನೋಡೋಣ. ಮಾಡಿಫೈಗೊಂಡ ಸ್ಯಾಂಟ್ರೊ ಜಿಂಗ್ ಸುಮಾರು 16 ವರ್ಷ ಹಳೆಯದಾಗಿದೆ. ಮಾಡಿಫೈ ನಂತರ ಈ ಕಾರ್ ಅನ್ನು ಆಕರ್ಷಕವಾಗಿ ರಿಸ್ಟೋರ್ ಮಾಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಈ ಕಾರಿನ ಮಾಡಿಫಿಕೇಶನ್ ವೀಡಿಯೊವನ್ನು ಬ್ರೋಮೋಟಿವ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಮಾರುತಿ ಸುಜುಕಿ ಕಂಪನಿಯ ವ್ಯಾಗನ್ ಆರ್ ಕಾರಿಗೆ ಪೈಪೋಟಿ ನೀಡಲು ಹ್ಯುಂಡೈ ಸ್ಯಾಂಟ್ರೊ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಸ್ಯಾಂಟ್ರೊ ಎತ್ತರವಾಗಿರುವ ಹ್ಯಾಚ್‌ಬ್ಯಾಕ್ ಕಾರ್ ಆಗಿದೆ. ಈ ಕಾರಿನ ಮಾಲೀಕರು ಕಾರಿನ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಕಾರಣಕ್ಕೆ ಅವರು ತಮ್ಮ ಹಳೆಯ ಸ್ಯಾಂಟ್ರೊ ಜಿಂಗ್ ಕಾರ್ ಅನ್ನು ರಿಸ್ಟೋರ್ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಈ ಕಾರಿನ ಮಾಲೀಕರು ಕಾರನ್ನು ಚೆನ್ನಾಗಿ ಮೆಂಟೆನ್ ಮಾಡಿದ್ದಾರೆ. ಈ ಕಾರಿನ ಬಾಡಿ ಪ್ಯಾನೆಲ್‌ಗಳಲ್ಲಿ ಸಣ್ಣ ಡೆಂಟ್‌ಗಳಾಗಿದ್ದವು. ಈ ಹ್ಯುಂಡೈ ಸ್ಯಾಂಟ್ರೊ ಕಾರಿನಲ್ಲಿ ಕೆಲವು ಕಡೆ ತುಕ್ಕು ಹಿಡಿದಿತ್ತು.

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಕಾರ್ ಅನ್ನು ರಿ ಸ್ಟೋರ್ ಮಾಡುವಾಗ ಮೊದಲಿಗೆ ಕಾರಿನ ಬಂಪರ್‌ಗಳನ್ನು ತೆಗೆದುಹಾಕಲಾಗುತ್ತದೆ. ನಂತರ ಕಾರಿನಲ್ಲಿರುವ ಎಲ್ಲಾ ಡೆಂಟ್‌ಗಳನ್ನು ಗುರುತಿಸಲಾಗುತ್ತದೆ. ನಂತರ ಅವುಗಳನ್ನು ಬಣ್ಣದಿಂದ ಮಾರ್ಕ್ ಮಾಡಿ ಸರಿಪಡಿಸಲಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಡೆಂಟ್‌ಗಳನ್ನು ಸರಿಪಡಿಸಿದ ನಂತರ ಪ್ಯಾನೆಲ್'ಗಳ ಮೇಲಿದ್ದ ಸ್ಕ್ರಾಚ್'ಗಳನ್ನು ಪರಿಶೀಲಿಸಲಾಗುತ್ತದೆ. ಇಡೀ ಕಾರಿಗೆ ಒಂದೇ ರೀತಿಯ ನೋಟವನ್ನು ನೀಡಲು ಈ ಕಾರ್ಯವು ಪ್ರಮುಖ ಪಾತ್ರ ವಹಿಸುತ್ತದೆ.

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಕಾರಿನ ಎಲ್ಲಾ ಭಾಗಗಳಿಗೂ ಪುಟ್ಟಿ ಮಾಡಿ, ಹೆಚ್ಚುವರಿ ಪುಟ್ಟಿಯನ್ನು ತೆಗೆದುಹಾಕಲಾಗುತ್ತದೆ. ತುಕ್ಕು ಹಿಡಿದಿರುವ ಸ್ಥಳಗಳಲ್ಲಿ ಅವುಗಳನ್ನು ಕತ್ತರಿಸಿ ಹೊಸ ಮೆಟಲ್ ಶೀಟ್'ಗಳನ್ನು ಹಾಕಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಂತರ ಇಡೀ ಕಾರಿಗೆ ಕೋಟ್ ಆಫ್ ಪ್ರೈಮರ್ ಅಳವಡಿಸಲಾಗುತ್ತದೆ. ತುಕ್ಕು ಹಿಡಿಯುವುದನ್ನು ತಪ್ಪಿಸಲು ಈ ರೀತಿ ಮಾಡಲಾಗುತ್ತದೆ. ಬಾಡಿಯನ್ನು ಪ್ಯಾಚ್ ಮಾಡಿದ ನಂತರ ಸೀಲಾಂಟ್ ಅನ್ನು ಅದರ ಬಾಡಿಗೆ ಅಳವಡಿಸಲಾಗುತ್ತದೆ. ನಂತರ ಕಾರನ್ನು ಪೇಂಟ್ ಬೂತ್‌ಗೆ ಕೊಂಡೊಯ್ಯಲಾಗುತ್ತದೆ.

ಹೊಸದರಂತೆ ರಿಸ್ಟೋರ್ ಆದ 16 ವರ್ಷ ಹಳೆಯ ಸ್ಯಾಂಟ್ರೊ ಕಾರು

ಪೇಂಟ್ ಬೂತ್‌ನಲ್ಲಿ ಬಾನೆಟ್, ಡೋರ್, ಬೂಟ್, ಡೋರ್ ಹ್ಯಾಂಡಲ್ ಸೇರಿದಂತೆ ಎಲ್ಲಾ ಭಾಗಗಳನ್ನು ಪ್ರತ್ಯೇಕವಾಗಿ ಪೇಂಟ್ ಮಾಡಲಾಗುತ್ತದೆ. ಪೇಂಟ್ ಮಾಡಿದ ನಂತರ ಕಾರು ಹೊಸದರಂತೆ ಕಾಣುತ್ತದೆ. ಕಾರಿನ ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳನ್ನು ಸಹ ಪೇಂಟ್ ಮಾಡಲಾಗಿದೆ.

ಚಿತ್ರಕೃಪೆ: ಬ್ರೋಮೋಟಿವ್

Most Read Articles

Kannada
English summary
16 years old Santro car restored like new car. Read in Kannada.
Story first published: Tuesday, April 6, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X