ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಆಡಿ ಇಂಡಿಯಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇ-ಟ್ರಾನ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಇದೇ ತಿಂಗಳು 22ರಂದು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಇ-ಟ್ರಾನ್ ಮಾದರಿಯ ವಾರಂಟಿ, ಸರ್ವಿಸ್ ಮತ್ತು ಬೈಬ್ಯಾಕ್ ಸೌಲಭ್ಯಗಳ ಮಾಹಿತಿ ಹಂಚಿಕೊಂಡಿದೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಆಡಿ ಕಂಪನಿಯು ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮೊದಲ ಬಾರಿಗೆ 2019ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಪ್ರದರ್ಶನಗೊಳಿಸಿತ್ತು. ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿರುವ ಕಂಪನಿಯು ಕೋವಿಡ್ ಕಾರಣಕ್ಕೆ ಭಾರತದಲ್ಲಿನ ಬಿಡುಗಡೆಯನ್ನು ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಿತ್ತು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಆಡಿ ಇ-ಟ್ರಾನ್ ಸೇರಿದಂತೆ ಹಲವು ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ಹಲವಾರು ಹೊಸ ಮಾದರಿಯ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಇ-ಟ್ರಾನ್ ಕಾರು ಗ್ರಾಹಕರ ಬೇಡಿಕೆಯೆಂತೆ 50, 55 ಮತ್ತು 55 ಸ್ಪೋರ್ಟ್‌ಬ್ಯಾಕ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳಲಿದೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಇದರಲ್ಲಿ ಇ-ಟ್ರಾನ್ 50 ಕ್ವಾಟ್ರೋ ಮಾದರಿಯು 71.2 ಕಿ.ವ್ಯಾ ಬ್ಯಾಟರಿ ಪ್ಯಾಕ್‌ನೊಂದಿಗೆ 312 ಬಿಹೆಚ್‌ಪಿ ಪವರ್ ಹಾಗೂ 540 ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ 55 ಕ್ವಾಟ್ರೋ ಮಾದರಿಯು 95 ಕಿ.ವ್ಯಾ ಬ್ಯಾಟರಿ ಪ್ಯಾಕ್‌ನೊಂದಿಗೆ 435 ಬಿಹೆಚ್‌ಪಿ ಪವರ್ ಹಾಗೂ 808 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಹಾಗೆಯೇ ಬೂಸ್ಟ್ ಮೋಡ್‌ನಲ್ಲಿ 503 ಬಿಹೆಚ್‌ಪಿ ಪವರ್ ಹಾಗೂ 973 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದ ನಂತರ ಇ-ಟ್ರಾನ್ ಎಸ್‌ಯುವಿಯು 441 ಕಿ.ಮೀಗಳವರೆಗೆ ಚಲಿಸುತ್ತದೆ. ಬ್ಯಾಟರಿ ಪ್ಯಾಕ್ ಆಧಾರದ ಮೇಲೆ ಕಾರಿನ ಬೆಲೆ ನಿರ್ಧಾರವಾಗಲಿದ್ದು, ಹೊಸ ಕಾರು ಮರ್ಸಿಡಿಸ್ ಇಕ್ಯೂಸಿ ಮತ್ತು ಜಾಗ್ವಾರ್ ಐ-ಪೇಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಹೊಸ ಕಾರು ಗ್ರಾಹಕರು ಸೆಳೆಯಲು ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಹೊಸ ಕಾರಿನ ಕಂಪನಿಯು ಘೋಷಣೆ ಮಾಡಿರುವ ವಾರಂಟಿ, ಸರ್ವಿಸ್ ಮತ್ತು ಬೈಬ್ಯಾಕ್ ಆಯ್ಕೆಗಳು ಹೊಸ ಕಾರಿನ ಖರೀದಿ ಮೌಲ್ಯವನ್ನು ಹೆಚ್ಚಿಸುತ್ತವೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಇ-ಟ್ರಾನ್ ಕಾರಿನ ಮೇಲೆ ಆಡಿ ಕಂಪನಿಯು ಎರಡು ವರ್ಷಗಳ ಕಾಲ ಸ್ಟ್ಯಾಂಡರ್ಡ್ ವಾರಂಟಿ ಘೋಷಿಸಿದ್ದು, ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಆಧಾರದ ಮೇಲೆ ವಾರಂಟಿ ನೀಡುತ್ತಿದೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಬ್ಯಾಟರಿ ಪ್ಯಾಕ್ ಮೇಲೆ ಗ್ರಾಹಕರ ಹೆಚ್ಚುವರಿ ಮೊತ್ತ ಪಾವತಿಸಿದ್ದಲ್ಲಿ ವಾರಂಟಿ ಅವಧಿಯನ್ನು ಮತ್ತೆ ಮೂರು ವರ್ಷಗಳ ಕಾಲ ವಿಸ್ತರಣೆ ಮಾಡುವ ಅವಕಾಶಗಳಿದ್ದು, ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿಗಾಗಿ 5 ವರ್ಷಗಳ ರೋಡ್ ಸೈಡ್ ಅಸಿಸ್ಟ್ ಸೌಲಭ್ಯ ನೀಡಲಾಗಿದೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಇದರ ಜೊತೆಗೆ ಹೊಸ ಕಾರು ಖರೀದಿಸಿದ ನಂತರ ಮೂರು ವರ್ಷಗಳ ಅವಧಿಯೊಳಗೆ ಕಾರ ನಿರ್ವಹಣೆ ಮಾಡಲು ಸಾಧ್ಯವಾಗದೆ ಮರುಮಾರಾಟ ಮಾಡುವ ಇಚ್ಚೆಯಿದ್ದಲ್ಲಿ ಅತ್ಯುತ್ತಮ ದರಗಳಲ್ಲಿ ಕಂಪನಿಯೇ ಉತ್ತಮ ದರದೊಂದಿಗೆ ಬೈಬ್ಯಾಕ್ ಮಾಡಲಿದ್ದು, ಗ್ರಾಹಕರಿಗೆ ಇದು ಹೊಸ ಕಾರಿನಿಂದ ಆಗಬಹುದಾದ ಆರ್ಥಿಕ ಸಂಕಷ್ಟ ತಪ್ಪಿಸಲಿದೆ.

ಇ-ಟ್ರಾನ್ ಬಿಡುಗಡೆಗೂ ಮುನ್ನ ಸರ್ವಿಸ್, ವಾರಂಟಿ ಮಾಹಿತಿ ಹಂಚಿಕೊಂಡ ಆಡಿ ಇಂಡಿಯಾ

ಇನ್ನು ಹೊಸ ಇ-ಟ್ರಾನ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.95 ಲಕ್ಷದಿಂದ ರೂ. 1 ಕೋಟಿ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಇವಿ ಕಾರು ಮಾದರಿಗಾಗಿ ಕಂಪನಿಯು ಪ್ರತಿ ಕಾರು ಶೋರೂಂಗಳಲ್ಲೂ 50kW ಫಾಸ್ಟ್ ಚಾರ್ಜಿಂಗ್ ಸೆಂಟರ್‌ಗಳನ್ನು ತೆರೆಯುತ್ತಿದೆ.

Most Read Articles

Kannada
Read more on ಆಡಿ audi
English summary
Audi e-tron Service & Ownership Plans Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X