ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಜರ್ಮನ್ ಮೂಲದ ವಾಹನ ತಯಾರಾಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಕ್ಸ್1 20ಐ ಟೆಕ್ ಎಡಿಷನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬೆಲೆಯು ರೂ.43 ಲಕ್ಷಗಳಾಗಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಖರೀದಿಗೆ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಇನ್ನು ಈ ಮಾದರಿಯು ಆಲ್ಪೈನ್ ವೈಟ್ ಮತ್ತು ಫೈಟೋನಿಕ್ ಬ್ಲೂ ಎಂಬ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಮಾದರಿಯಲ್ಲಿ 2.0-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 192 ಬಿಹೆಚ್‌ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಈ ಎಂಜಿನ್ ಅನ್ನು 7-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ನಲ್ಲಿ ಸ್ಟೀಯರಿಂಗ್ ವ್ಹೀಲ್ ಜೊತೆ ಪ್ಯಾಡಲ್ ಶಿಫ್ಟರ್ ಮತ್ತು ಕ್ರೂಸ್ ಕಂಟ್ರೋಲ್ ನೊಂದಿಗೆ ಬ್ರೇಕಿಂಗ್ ಕಾರ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಇನ್ನು ಈ ಎಸ್‍ಯುವಿಯಲ್ಲಿ ಡ್ರೈವಿಂಗ್ ಎಕ್ಸ್‌ಪೀರಿಯೆನ್ಸ್ ಕಂಟ್ರೋಲ್ ಸ್ವಿಚ್ ಬಳಸಿ ಚಾಲಕ ವಿಭಿನ್ನ ಡ್ರೈವಿಂಗ್ ಮೋಡ್ ಗಳನ್ನು ಆಯ್ಕೆ ಮಾಡಬಹುದು. ಈ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ನಲ್ಲಿ ಇಕೋ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್.ಮೋಡ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಅಗ್ರೇಸಿವ್ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿ ದೊಡ್ಡ ಬಿಎಂಡಬ್ಲ್ಯು ಗ್ರಿಲ್ ಮತ್ತು ಏರ್ ಇಂಟೆಕ್ಸ್ ಮತ್ತು ಎಲ್ಇಡಿ ಫಾಗ್-ಲ್ಯಾಂಪ್ ಗಳೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಇನ್ನು ಸೈಡ್ ಪ್ರೊಫೈಲ್ ರೂಫ್‌ಲೈನ್ ಮತ್ತು 18-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಇನ್ನು ಈ ಎಸ್‍ಯುವಿಯ ಹಿಂಭಾಗದಲ್ಲಿ ಎಲ್ಇಡಿ ಎಲ್ಇಡಿ ಲ್ಯಾಂಪ್ ಗಳು ಮತ್ತು ದೊಡ್ಡ ಟ್ವಿನ್ ಎಕ್ಸಾಸ್ಟ್ ಟೈಲ್‌ಪೈಪ್‌ಗಳನ್ನು ಹೊಂದಿವೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ನಲ್ಲಿ ದೊಡ್ಡ ಪನೋರಮಾ ಗ್ಲಾಕ್ ರೂಪ್, ಆರು ಬಣ್ಣಗಳನ್ನು ಹೊಂದಿರುವ ಅಂಬೈಟ್ ಲೈಟ್, ಮೆಮೊರಿ ಫಂಕ್ಷನ್ ನೊಂದಿಗೆ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡಬಹುದದಾದ ಮುಂಭಾಗದ ಸೀಟುಗಳು ಮತ್ತು ಸೆಂಟರ್ ಆರ್ಮ್‌ಸ್ಟ್ರೆಸ್ಟ್‌ನೊಂದಿಗಿನ ಹಿಂಭಾಗದ ಸೀಟುಗಳನ್ನು ಹೊಂದಿವೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಇನ್ನು ಈ ಟೆಕ್ ಎಡಿಷನ್ ನಲ್ಲಿ 500-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಹೆಚ್ಚಿನ ಸ್ಪೇಸ್ ಅಗತ್ಯವಿದ್ದಾಗ ಹಿಂಬಂದಿಯ ಸೀಟನ್ನು ಮಡಿಚಿದಾಗ 1,550-ಲೀಟರ್‌ ಅಷ್ಟು ಸ್ಪೇಸ್ ದೊರೆಯುತ್ತದೆ. ಈ ಹೊಸ ಎಸ್‍ಯುವಿಯು ಬಿಎಂಡಬ್ಲ್ಯು ಕನೆಕ್ಟೆಡ್ ಡ್ರೈವ್ ತಂತ್ರಜ್ಞಾನಗಳೊಂದಿಗೆ ಬರುತ್ತದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಇನ್ನು ಬಿಎಂಡಬ್ಲ್ಯು ಎಕ್ಸ್1 ಐಡ್ರೈವ್ ಕಂಟ್ರೋಲ್ ಮತ್ತು ನ್ಯಾವಿಗೇಷನ್‌ನೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಇದು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ.ಇನ್ನು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸಿಸ್ಟಂ, ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ರೇರ್ ವ್ಯೂ ಕ್ಯಾಮೆರಾ, ಬಿಎಂಡಬ್ಲ್ಯು ಹೆಡ್-ಅಪ್ ಡಿಸ್ ಪ್ಲೇ ಮತ್ತು ಹೊಸ 205ಡಬ್ಲ್ಯು ಹೈಫೈ ಲೌಡ್ ಸ್ಪೇಕರ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ ಬಿಎಂಡಬ್ಲ್ಯು ಎಕ್ಸ್1 20ಐ ಟೆಕ್ ಎಡಿಷನ್ ಬಿಡುಗಡೆ

ಇನ್ನು ಸುರಕ್ಷತೆಗಾಗಿ, ಬಿಎಂಡಬ್ಲ್ಯು ಎಕ್ಸ್ 1 ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಆಟೋ ಹೋಲ್ಡ್ ಹೊಂದಿರುವ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಸರ್ ಸೇರಿದಂತೆ ಅಟೆನ್ಟಿನೆಸ್ ಅಸಿಸ್ಟೆನ್ಸ್ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ) ಮತ್ತು ಕ್ರ್ಯಾಶ್ ಸೆನ್ಸರ್ ಅನ್ನು ಹೊಂದಿದೆ.

Most Read Articles

Kannada
English summary
BMW X1 20i Tech Edition Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X