ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಜರ್ಮನ್ ಮೂಲದ ಕಾರು ಉತ್ಪದನಾ ಕಂಪನಿಯಾದ BMW ತನ್ನ ಹೊಸ X5 xDrive SportX Plus ಎಸ್‍ಯುವಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ BMW X5 xDrive SportX Plus ಎಸ್‍ಯುವಿಯು X5 xDrive30d SportX Plus ಮತ್ತು X5 xDrive40i SportX Plus ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಈ ಹೊಸ BMW X5 xDrive30d SportX Plus ವೆರಿಯೆಂಟ್ ಬೆಲೆಯು ರೂ,79.50 ಲಕ್ಷಗಳಾದರೆ, xDrive40i SportX Plus ವೆರಿಯೆಂಟ್ ಬೆಲೆಯು ರೂ.77.90 ಲಕ್ಷಗಳಾಗಿದೆ. ಈ ಎಲ್ಲಾ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಐಷಾರಾಮಿ ಎಸ್‍ಯುವಿಯನ್ನು ಚೆನ್ನೈನ BMW ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ. ಈ ಹೊಸ BMW X5 xDrive SportX Plus ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಿದೆ, ಈ ಐಷಾರಾಮಿ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು shop.bmw.in ನಲ್ಲಿ ಬುಕ್ ಮಾಡಬಹುದು.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಈ BMW X5 ಎಸ್‍ಯುವಿಯು ದೊಡ್ಡ ಸಿಂಗಲ್ ಪೀಸ್ ಎಕ್ಸೊಜಿಕಲ್ ಕಿಡ್ನಿ ಗ್ರಿಲ್, ಕೆತ್ತಿದ ಬಾನೆಟ್ ಮತ್ತು ಶಾರ್ಟ್ ಓವರ್‌ಹ್ಯಾಂಗ್‌ಗಳನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಮತ್ತು 3ಡಿ ಸುತ್ತು ಎಲ್‌ಇಡಿ ಟೈಲ್-ಲೈಟ್‌ಗಳನ್ನು ಪಡೆಯುತ್ತದೆ. ಇನ್ನು ರೂಫ್ ರೈಲ್ ಗಳು ಸ್ಯಾಟಿನ್ ಅಲ್ಯೂಮಿನಿಯಂ ಫಿನಿಶ್ ಪಡೆಯುತ್ತದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

SportX Plus ವೆರಿಯೆಂಟ್ ಸ್ಪೋರ್ಟ್ಸ್ ಲೆದರ್ ಸ್ಟೀರಿಂಗ್ ವ್ಹೀಲ್, ಮೆಮೊರಿ ಫಂಕ್ಷನ್, ಎಲೆಕ್ಟ್ರಿಕಲ್ ಸೀಟ್ ಹೊಂದಾಣಿಕೆ, ಬಾಹ್ಯ ಮೀರರ್ ಪ್ಯಾಕೇಜ್, ಸ್ಪೋರ್ಟ್ಸ್ ಸೀಟುಗಳು, ಪನೋರಮಿಕ್ ಗ್ಲಾಸ್ ರೂಫ್ ಮತ್ತು ವೆಲ್ ಕಮ್ ಕಾರ್ಪೆಟ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಇನ್ನು ಈ ಎಸ್‍ಯುವಿಯು ಆಕರ್ಷಕ ವಿನ್ಯಾಸಗಳು, ನಾಲ್ಕು ಝೋನ್ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಎಲೆಕ್ಟ್ರೋಪ್ಲೇಟೆಡ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಹೊಂದಾಣಿಕೆ ರೋಲರ್ ಸನ್ ಬ್ಲಿಂಡ್‌ಗಳೊಂದಿಗೆ ಸುತ್ತುವರಿದ ಸನ್ ಬ್ಲೈಂಡ್ಸ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಈ ಎಸ್‍ಯುವಿಯಲ್ಲಿ 12.3 ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು 12.3 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕನೆಕ್ಟಿವಿಟಿಯನ್ನು ಹೊಂದಿದೆ. ಈ BMW X5 SportX Plus ವೆರಿಯೆಂಟ್ BMW ಗೆಸ್ಚರ್ ಕಂಟ್ರೋಲ್, ಬಿಎಂಡಬ್ಲ್ಯು ಡಿಸ್ಪ್ಲೇ ಕೀ, ಹೆಡ್-ಅಪ್ ಡಿಸ್ಪ್ಲೇ, ರಿಯರ್ ವ್ಯೂ ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಸಹಾಯಕ ಮತ್ತು ರಿವರ್ಸಿಂಗ್ ಅಸಿಸ್ಟೆಂಟ್ ಅನ್ನು ಸಹ ಪಡೆಯುತ್ತದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಇನ್ನು ಸೆಂಟರ್ ಕನ್ಸೋಲ್‌ನಲ್ಲಿ ಸ್ಮಾರ್ಟ್ಫೋನ್ ಹೋಲ್ಡರ್ ಅನ್ನು ಸಂಯೋಜಿಸಲಾಗಿದೆ, ಇದು ಮೊಬೈಲ್ ಫೋನ್‌ಗಳಿಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ. ಇದರೊಂದಿಗೆ ಹೊಸ 205W ಹೈಫೈ ಲೌಡ್ ಸ್ಪೀಕರ್ ಸಿಸ್ಟಂ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಈ ಹೊಸ BMW X5 xDrive30d SportX Plus ವೆರಿಯೆಂಟ್ ನಲ್ಲಿ 3.0-ಲೀಟರ್ ಆರು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 265 ಬಿಹೆಚ್‍ಪ್ ಪವರ್ ಮತ್ತು 620 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯು ಕೇವಲ 6.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಇನ್ನು xDrive40i SportX Plus ವೆರಿಯೆಂಟ್ ನಲ್ಲಿ 3.0ಎಲ್ 6-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಸ್‍ಯುವಿಯು ಕೇವಲ 5.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಎರಡೂ ಎಂಜಿನ್‌ಗಳನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ, ಇದು ಬಿಎಂಡಬ್ಲ್ಯು ಎಕ್ಸ್‌ಡ್ರೈವ್-ಆಲ್-ವೀಲ್-ಡ್ರೈವ್ ಸಿಸ್ಟಮ್ ಮೂಲಕ ಎಲ್ಲಾ -ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ. ಈ ಎಸ್‍ಯುವಿ ಆಟೋಮ್ಯಾಟಿಕ್ ಡಿಫರೆನ್ಷಿಯಲ್ ಬ್ರೇಕ್‌ಗಳು (ಎಡಿಬಿ-ಎಕ್ಸ್), ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ), ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ಜೊತೆಗೆ ಹೊಂದಾಣಿಕೆಯ ಸಸ್ಪೆಂಕ್ಷನ್ ಅನ್ನು ಪಡೆಯುತ್ತದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಇದು ಸ್ಟೀರಿಂಗ್ ವೀಲ್ ಪ್ಯಾಡಲ್ ಶಿಫ್ಟರ್‌ಗಳನ್ನು ಮತ್ತು ಬ್ರೇಕಿಂಗ್ ಕಾರ್ಯದೊಂದಿಗೆ ಕ್ರೂಸ್ ಕಂಟ್ರೋಲ್ ಸಹ ಪಡೆಯುತ್ತದೆ. ಇತರ ವೈಶಿಷ್ಟ್ಯಗಳಲ್ಲಿ ಆಟೋ ಸ್ಟಾರ್ಟ್-ಸ್ಟಾಪ್, ಇಕೋ ಪ್ರೊ ಮೋಡ್, ಬ್ರೇಕ್-ಎನರ್ಜಿ ಪುನರುತ್ಪಾದನೆ, ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, 50:50 ತೂಕ ವಿತರಣೆ ಮತ್ತು ಚಾಲನಾ ಅನುಭವ ಕಂಟ್ರೋಲ್ ಸ್ವಿಚ್ ಸೇರಿವೆ ಇನ್ನು ಈ ಐಷಾರಾಮಿ ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

BMW ಕಂಪನಿಯು ತನ್ನ 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಶನ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬಿಎಂಡಬ್ಲ್ಯು 740ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.42 ಕೋಟಿಯಾಗಿದೆ., ಈ ಎಡಿಷನ್ ಟಾಂಜಾನೈಟ್ ಬ್ಲೂ ಮತ್ತು ಡ್ರಾವಿಟ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಬಿಎಂಡಬ್ಲ್ಯು 40ಎಲ್ಐ ಎಂ ಸ್ಪೋರ್ಟ್ ಇಂಡಿವಿಜುವಲ್ ಎಡಿಶನ್ ಸ್ಪೋರ್ಟ್ಸ್ ಮಾದರಿಯಾಗಿದೆ.

ಭಾರತದಲ್ಲಿ ಹೊಸ BMW X5 xDrive SportX Plus ಎಸ್‍ಯುವಿ ಬಿಡುಗಡೆ

ಇದರಲ್ಲಿ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಅಂಟಿನಿಟಿವ್ ಅಸಿಸ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (DSC) ಸೇರಿದಂತೆ ಕಾರ್ನಿಂಗ್ ಬ್ರೇಕ್ ಕಂಟ್ರೋಲ್ (CBC), ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಆಟೋ ಹೋಲ್ಡ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವಾಹನ ಇಮೊಬಿಲೈಸರ್ ಮತ್ತು ಕ್ರ್ಯಾಶ್ ಸೆನ್ಸರ್ , ISOFIX ಚೈಲ್ಡ್ ಸೀಟ್ ಮೌಂಟಿಗ್ ಮತ್ತು ಲೋಡ್ ಫ್ಲೋರ್ ಅಡಿಯಲ್ಲಿ ಎಮರ್ಜನ್ಸಿ ಸ್ಪೇರ್ ವ್ಹೀಲ್ ಅನ್ನು ನೀಡಿದ್ದಾರೆ.

Most Read Articles

Kannada
English summary
Bmw launched x5 xdrive sportx plus in india price specs details
Story first published: Monday, September 13, 2021, 20:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X