ಬಿಎಂಡಬ್ಲ್ಯು ಎಕ್ಸ್1 ಎಸ್-ಡ್ರೈವ್ 20ಡಿ ಎಸ್‍ಯುವಿ ರಿವ್ಯೂ ವಿಡಿಯೋ

ಜರ್ಮನ್ ಐಷಾರಾಮಿ ಕಾರು ತಯಾರಕ ಕಂಪನಿಯಾಗಿರುವ ಬಿಎಂಡಬ್ಲ್ಯು ತನ್ನ ಜನಪ್ರಿಯ ಎಂಟ್ರಿ ಲೆವೆಲ್ ಎಸ್‌ಯುವಿ ಕಾರು ಮಾದರಿಯಾದ ಎಕ್ಸ್1 ಫೇಸ್‌ಲಿಫ್ಟ್ ಮಾದರಿಯಾದ ಎಕ್ಸ್1 ಎಸ್ ಡ್ರೈವ್ 20ಡಿ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.35.90 ಲಕ್ಷಗಳಾಗಿದೆ.

ಜನಪ್ರಿಯ ಎಂಟ್ರಿ ಲೆವೆಲ್ ಐಷಾರಾಮಿ ಎಸ್‍ಯುವಿಗಳಲ್ಲಿ ಒಂದಾಗಿರುವ ಎಕ್ಸ್1 ಎಸ್-ಡ್ರೈವ್ 20ಡಿ ಮಾದರಿಯ ಕಾರ್ಯಕ್ಷಮತೆ ಕುರಿತಂತೆ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಡ್ರೈವ್‌ಸ್ಪಾರ್ಕ್ ತಂಡವನ್ನು ಆಹ್ವಾನಿಸಿತ್ತು. ಹೊಸ ಕಾರಿನ ಕಾರ್ಯಕ್ಷಮತೆಯನ್ನು ಅರಿಯಲು ಡ್ರೈವ್‌ಸ್ಪಾರ್ಕ್ ತಂಡವು ಸಿಟಿ ಮತ್ತು ಹೆದ್ದಾರಿ ಎರಡು ಮಾದರಿಯಲ್ಲೂ ಚಾಲನೆ ಮಾಡಿದ್ದು, ಹೊಸ ಎಸ್‍ಯುವಿಯ ಡ್ರೈವಿಂಗ್ ಅನುಭವದ ಸಂಪೂರ್ಣ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.

ಹೊಸ ಕಾರಿನಲ್ಲಿ ಬಿಎಂಡಬ್ಲ್ಯು ಕಂಪನಿಯು ಹಲವಾರು ಹೊಸ ಮಾದರಿಯ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಿದ್ದು, 2.0-ಲೀಟರ್ ಟರ್ಬೊ ಚಾರ್ಜ್ಡ್ ಎಂಜಿನ್ ಹೊಂದಿರುವ ಹೊಸ ಕಾರು ಮಾದರಿಯು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 190-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಫ್ರಂಟ್-ವೀಲ್-ಡ್ರೈವ್ ಸಿಸ್ಟಂ ಹೊಂದಿರುವ ಹೊಸ ಕಾರಿನಲ್ಲಿ ಇಕೋ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್ ಗಳಿದ್ದು, ಮರ್ಸಿಡಿಸ್ ಬೆಂಝ್ ಹೊಸ ಜಿಎಲ್‌ಎ ಮತ್ತು ಆಡಿ ಕ್ಯೂ3 ಎಸ್‍ಯುವಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

Most Read Articles

Kannada
English summary
BMW X1 S-Drive 20d Review Video. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X