ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರನ್ ಈ ತಿಂಗಳ ಆರಂಭದಲ್ಲಿ ತನ್ನ ಸಿ5 ಏರ್‌ಕ್ರಾಸ್ ಎಸ್‍ಯುವಿಯೊಂದಿಗೆ ದೇಶಿಯ ಮಾರುಕಟ್ಟೆಗೆ ಪ್ರವೇಶಿಸಿದರು. ಸಿಟ್ರನ್ ಕಂಪನಿಯು ಭಾರತದಲ್ಲಿ ತನ್ನ ಸರಣಿಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯನ್ನು ಮಾಡಿದೆ.

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಸಿಟ್ರನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸಲು ವಿಭಿನ್ನವಾದ ಕಾರ್ಯತಂತ್ರವನ್ನು ರೂಪಿಸುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇದೀಗ ಸಿಟ್ರನ್ ಕಂಪನಿಯು ಕೂಡ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ,

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಈ ಹೊಸ ಸಿಟ್ರನ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದು. ಗ್ರೂಪ್ ಪಿಎಸ್ಎ (ಸಿಟ್ರನ್ ಮೂಲ ಸಂಸ್ಥೆ) ಭಾರತಕ್ಕಾಗಿ ಇವಿಗಳು ಮಾತ್ರವಲ್ಲ, ಫ್ಲೆಕ್ಸ್-ಇಂಧನ (ಎಥೆನಾಲ್-ಸಂಯೋಜಿತ ಪೆಟ್ರೋಲ್ ಅಥವಾ ಜೈವಿಕ ಇಂಧನಗಳು) ವಾಹನಗಳನ್ನು ಬಿಡುಗಡೆಗೊಳಿಸಲು ಚಿಂತಿಸುತ್ತಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಹೊಸ ಸಿಟ್ರನ್ ಇವಿ ಸಿಸಿ21 ಮಿನಿ-ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯಾಗಲಿದೆ, ಸಿಟ್ರನ್ ಸಿಸಿ21 ಕಾರು ಬ್ರ್ಯಾಂಡ್‌ನ ಇ-ಸಿಎಂಪಿ ಪ್ಲಾಟ್‌ಫಾರ್ಮ್ ಆಧಾರವಾಗಿರಿಸಿಕೊಳ್ಳುತ್ತದೆ. ಇದನ್ನು ಅದರ ಚೀನೀ ಪಾಲುದಾರ ಡಾಂಗ್‌ಫೆಂಗ್ ಮೋಟಾರ್‌ನೊಂದಿಗೆ ಸಹ-ಅಭಿವೃದ್ಧಿಪಡಿಸಲಾಗಿದೆ.

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಇ-ಸಿಎಂಪಿ ಪ್ಲಾಟ್‌ಫಾರ್ಮ್ 50 ಕಿಲೋವ್ಯಾಟ್ ವರೆಗೆ ಬ್ಯಾಟರಿ ಸಾಮರ್ಥ್ಯವನ್ನು ಮತ್ತು 100 ಕಿಲೋವ್ಯಾಟ್ ವರೆಗೆ ಎಲೆಕ್ಟ್ರಿಕ್ ಮೋಟರ್ ಅನ್ನು ನಿಭಾಯಿಸಬಲ್ಲದು. ಇದು 310 ಕಿ.ಮೀ ನಿಂದ 40 ಕಿ.ಮೀ ಅಧಿಕ ಮೈಲೇಜ್ ಅನ್ನು ನೀಡುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಆದರೆ ಭಾರತೀಯ ಮಾದರಿಯು ಸಣ್ಣ ಬ್ಯಾಟರಿ-ಮೋಟಾರ್ ಕಾಂಬೊವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, 30 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿರುತ್ತದೆ. ಆದರೆ ಈ ಕಾರು ತುಸು ದುಬಾರಿಯಾಗಿರುತ್ತದೆ.

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಇನ್ನು ಹೋಲಿಕೆ ಮಾಡುವುದಾದರೆ, ಟಾಟಾ ನೆಕ್ಸಾನ್ ಇವಿಯ ಬ್ಯಾಟರಿ ಪ್ಯಾಕ್ 30.2 ಕಿಲೋವ್ಯಾಟ್ ಯುನಿಟ್ ಆಗಿದ್ದರೆ, ಮಹೀಂದ್ರಾ ಇಕುವಿ 100 15.9 ಕಿಲೋವ್ಯಾಟ್ ಬ್ಯಾಟರಿ ಹೊಂದಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಬಿಡುಗಡೆಯಾಗಲಿರುವ ಸಿಟ್ರನ್ ಸಿಸಿ21 ಎಲೆಕ್ಟ್ರಿಕ್ ಕಾರಿನ ಬೆಲೆಯ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಆದರೆ ಇದರ ಆರಂಭಿಕ ಬೆಲೆಯು ಸುಮಾರು ರೂ.8 ಲಕ್ಷವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಕಾರನ್ನು ಮುಂದಿನ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಇದರ ಬಿಡುಗಡೆ ಸಮಯದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಇನ್ನು ಹೆಚ್ಚು ಬೇಡಿಕೆಯನ್ನು ಹೊಂದಿರುತ್ತದೆ. ಹೆಚ್ಚಿನ ಚಾರ್ಜಿಂಗ್ ಸ್ಟೇಷನ್ ಪ್ರಾರಂಭವಾಗುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಇದು ಅತ್ಯಂತ ಒಳ್ಳೆ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಲಿದೆ.

ಭಾರತದಲ್ಲಿ ಹೊಸ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ಸಿಟ್ರನ್

ಸಿಟ್ರನ್ ಸಿಸಿ21 ಎಲೆಕ್ಟ್ರಿಕ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಹೆಚ್‌ಬಿಎಕ್ಸ್ ಇವಿ ಮತ್ತು ಮಹೀಂದ್ರಾ ಇಕೆಯುವಿ100 ಮಾದರಿಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ನಡುವಿನ ಪೈಪೋಟಿ ಹೆಚ್ಚಾಗುತ್ತದೆ.

Most Read Articles

Kannada
English summary
Citroen To Launch Entry-Level Electric Car In 2022. Read In Kannada.
Story first published: Monday, April 12, 2021, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X