Just In
- 8 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
- 10 hrs ago
ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಎಕ್ಸ್ಯುವಿ 300 ಮತ್ತು ಇಕೋಸ್ಪೋರ್ಟ್ ಹಿಂದಿಕ್ಕಿದ ರೆನಾಲ್ಟ್ ಕಿಗರ್
- 10 hrs ago
ಡೀಲರ್ ಬಳಿ ತಲುಪಿದ ಹೊಸ ಕವಾಸಕಿ ನಿಂಜಾ 300 ಬೈಕ್
- 11 hrs ago
ಫಸ್ಟ್ ಡ್ರೈವ್ ರಿವ್ಯೂ: ರಸ್ತೆಗಿಳಿದ ಐಷಾರಾಮಿ ಬಿಎಂಡಬ್ಲ್ಯು ಎಂ340ಐ ಎಕ್ಸ್ಡ್ರೈವ್ ಕಾರು
Don't Miss!
- News
3 ವರ್ಷಗಳಲ್ಲಿ ಶ್ರೀರಾಮ ಮಂದಿರ ನಿರ್ಮಾಣ, ದೇಣಿಗೆ ಸಂಗ್ರಹ ಕಾರ್ಯ ಸ್ಥಗಿತ
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಭಾನುವಾರದ ದಿನ ಹೇಗಿರಲಿದೆ ನೋಡಿ
- Movies
ಬಿಗ್ ಬಾಸ್: ಚಂದ್ರಕಲಾ ಮಾಡಿದ ತಪ್ಪಿಗೆ ಮನೆ ಮಂದಿಗೆಲ್ಲಾ ಶಿಕ್ಷೆ
- Sports
ಭಾರತ vs ಇಂಗ್ಲೆಂಡ್: ಪ್ರಶಸ್ತಿ ವಿಜೇತರ ಪಟ್ಟಿ, ಅಂಕಿ-ಅಂಶಗಳು!
- Finance
ಮೊಟೊರೊಲಾ ಹೊಸ ಸ್ಮಾರ್ಟ್ಫೋನ್: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲ್ಯಾಂಬೊರ್ಗಿನಿ ಕಾರಿನ ಬಣ್ಣದಲ್ಲಿ ಮಾಡಿಫೈಗೊಂಡ ಹ್ಯುಂಡೈ ಎಲಾಂಟ್ರಾ
ಹ್ಯುಂಡೈ ದೇಶಿಯ ಮಾರುಕಟ್ಟೆಯಲ್ಲಿರುವ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಕಂಪನಿಯು ಎರಡು ದಶಕಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕಾರುಗಳನ್ನು ಮಾರಾಟ ಮಾಡುತ್ತಿದೆ.

ಕಂಪನಿಯು ಹ್ಯಾಚ್‌ಬ್ಯಾಕ್, ಕಾಂಪ್ಯಾಕ್ಟ್ ಸೆಡಾನ್, ಪ್ರೀಮಿಯಂ ಸೆಡಾನ್ ಹಾಗೂ ಎಸ್‌ಯುವಿ ಸೇರಿದಂತೆ ಹಲವು ಕಾರುಗಳನ್ನು ಭಾರತೀಯ ಗ್ರಾಹಕರಿಗಾಗಿ ಬಿಡುಗಡೆಗೊಳಿಸಿದೆ. ಇವುಗಳಲ್ಲಿ ಎಲಾಂಟ್ರಾ ಪ್ರೀಮಿಯಂ ಸೆಡಾನ್ ಕಾರು ಸಹ ಸೇರಿದೆ. ಮಾಡಿಫೈಗೊಂಡ ಎಲಾಂಟ್ರಾ ಕಾರಿನ ವೀಡಿಯೊ ಇಂಟರ್ ನೆಟ್'ನಲ್ಲಿ ವೈರಲ್ ಆಗಿದೆ.

ಕಾರ್‌ಟಾಕ್‌ನ ವರದಿಗಳ ಪ್ರಕಾರ ವಿಶಾಲ್ ಜಾಂಡರ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ಮಾಡಿಫೈಗೊಂಡ ಹ್ಯುಂಡೈ ಎಲಾಂಟ್ರಾ ಕಾರು ಹಳದಿ ಬಣ್ಣದಲ್ಲಿದ್ದು, ಸಾಕಷ್ಟು ಆಕರ್ಷಕವಾಗಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಮಾದರಿಯಲ್ಲಿ ಆಫ್ಟರ್ ಮಾರ್ಕೆಟ್ ಸ್ಪೋರ್ಟಿ ಬಾಡಿ ಪ್ಯಾನಲ್, ಟಯರ್ ಹಾಗೂ ಅಲಾಯ್ ವ್ಹೀಲ್'ಗಳನ್ನು ಬಳಸಲಾಗಿದೆ. ಈ ಕಾರನ್ನು ಲ್ಯಾಂಬೊರ್ಗಿನಿ ಕಂಪನಿಯ ಹಳದಿ ಬಣ್ಣದಲ್ಲಿ ಮಾಡಿಫೈಗೊಳಿಸಲಾಗಿದೆ.

ಕಾರಿನ ಮೂಲ ಮುಂಭಾಗ ಹಾಗೂ ಹಿಂಭಾಗದ ಬಂಪರ್‌ಗಳನ್ನು ಸ್ಪೋರ್ಟಿ ಬಂಪರ್‌ಗಳೊಂದಿಗೆ ಬದಲಿಸಲಾಗಿದೆ. ಕಾರಿನಲ್ಲಿದ್ದ ಎಲ್ಲಾ ಕ್ರೋಮ್ ಅಸೆಂಟ್'ಗಳನ್ನು ಪಿಯಾನೋ ಬ್ಲಾಕ್ ಅಸೆಂಟ್'ಗಳಿಗೆ ಬದಲಿಸಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರಿನಲ್ಲಿರುವ ಸ್ಪೋರ್ಟಿ ಬಂಪರ್ ಆಕರ್ಷಕವಾಗಿ ಕಾಣುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಕಾರಿನಲ್ಲಿ ಅಳವಡಿಸಲಾಗಿರುವ ಅಲಾಯ್ ವ್ಹೀಲ್'ಗಳಲ್ಲಿರುವ ಎಲ್ಲೊ ಬ್ರೇಕ್ ಕ್ಯಾಲಿಪರ್‌ಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ.
ಕಾರಿನ ಸೈಡ್ ಪ್ಯಾನಲ್ ಡೋರಿನ ಕೆಳಗೆ ಸ್ಪೋರ್ಟಿ ಪ್ಯಾನೆಲ್‌ಗಳ ನೀಡಲಾಗಿದ್ದು, ಏರ್ ವೆಂಟ್ ಲುಕ್ ನೀಡುತ್ತವೆ. ಕಾರಿನ ಹೆಡ್‌ಲೈಟ್ ಅನ್ನು ಮಾಡಿಫೈಗೊಳಿಸಲಾಗಿದೆ. ಈಗ ಎಲ್ಇಡಿ ಡಿಆರ್'ಎಲ್, ಪ್ರೊಜೆಕ್ಟರ್ ಹೆಡ್'ಲ್ಯಾಂಪ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್'ಗಳನ್ನು ಹೆಡ್ ಲ್ಯಾಂಪ್'ನೊಳಗೆ ಅಳವಡಿಸಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇದರ ಮುಂಭಾಗದ ಬಂಪರ್ ಎಲ್ಇಡಿ ಡಿಆರ್ ಎಲ್ ಲೈಟ್ ಅನ್ನು ಸಹ ಹೊಂದಿದೆ. ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ ಇಡೀ ಕ್ಯಾಬಿನ್ ಅನ್ನು ಬದಲಿಸಲಾಗಿದೆ. ಎಲ್ಲೊ ಅಸೆಂಟ್'ಗಳನ್ನು ಹೊಂದಿರುವ ಬ್ಲಾಕ್ ಇಂಟಿರಿಯರ್ ಅನೇಕ ಸ್ಥಳಗಳಲ್ಲಿ ಕಂಡುಬರುತ್ತದೆ. ಸೀಟ್ ಹಾಗೂ ಡ್ಯಾಶ್‌ಬೋರ್ಡ್‌ನಲ್ಲಿಯೂ ಎಲ್ಲೊ ಅಸೆಂಟ್ ನೀಡಲಾಗಿದೆ.

ಈ ಕಾರು ಡ್ಯುಯಲ್ ಟೋನ್ ಅಲ್ಕಾಂಟರಾ ಸ್ಟೀಯರಿಂಗ್, ಕಸ್ಟಮ್ ವಿನ್ಯಾಸದ ಸಬ್‌ಹೋಲ್'ಸ್ಟರಿ, ಸ್ಟಾರ್ ಲೈಟ್ ಹೊಂದಿರುವ ಬ್ಲಾಕ್ ರೂಫ್‌ಲೈನರ್ ಅನ್ನುಹೊಂದಿದೆ. ಈ ಕಾರಿನ ನೋಟವನ್ನು ಸಂಪೂರ್ಣವಾಗಿ ಬದಲಿಸಲಾಗಿದ್ದರೂ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಈ ಚಿತ್ರಗಳನ್ನು ವಿಶಾಲ್ ಜಾಂಡರ್'ನಿಂದ ಪಡೆಯಲಾಗಿದೆ.