ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಅಮೆರಿಕಾ ಮೂಲದ ಕಾರು ತಯಾರಕ ಕಂಪನಿಯಾದ ಫೋರ್ಡ್ ತನ್ನ ಜನಪ್ರಿಯ ಮಧ್ಯಮ ಗಾತ್ರದ ಫೋರ್ಡ್ ಇಕೋಸ್ಪೋರ್ಟ್‌ ಎಸ್‌ಯುವಿಯ ಹೊಸ ಮಾದರಿಯನ್ನು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಈಗ ಫೋರ್ಡ್ ಇಂಡಿಯಾ ಕಂಪನಿಯು ತನ್ನ 2021ರ ಮಾರ್ಚ್ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿಅಂಶಗಳ ಪ್ರಕಾರ ಕಂಪನಿಯು ಮಾರಾಟದಲ್ಲಿ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ.

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಫೋರ್ಡ್ ಇಂಡಿಯಾ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 7,746 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು 2020ರ ಮಾರ್ಚ್ ತಿಂಗಳಿನಲ್ಲಿ 3,519 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು.

MOST READ: ನಿರ್ವಹಣಾ ವೆಚ್ಚ ತಗ್ಗಿಸಲು ವಾಣಿಜ್ಯ ವಾಹನಗಳಿಗಾಗಿ ಹೊಸ ಎಂಜಿನ್ ಪರಿಚಯಿಸಿದ ಟಾಟಾ ಮೋಟಾರ್ಸ್

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಕಂಪನಿಯ ಮಾರಾಟ ಪ್ರಮಾಣವು ಕಳೆದ ವರ್ಷದ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ 120%ನಷ್ಟು ಹೆಚ್ಚಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಫೋರ್ಡ್ ಇಂಡಿಯಾ ಕಂಪನಿಯು 5,775 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಕಂಪನಿಯ ಮಾರಾಟ ಪ್ರಮಾಣವು ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳಿನಲ್ಲಿ 34%ನಷ್ಟು ಏರಿಕೆಯಾಗಿದೆ. ಇದು ಕಂಪನಿಯ ಸಕಾರಾತ್ಮಕ ಬೆಳವಣಿಗೆಯ ಸಾಕ್ಷಿಯಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಫೋರ್ಡ್ ಕಂಪನಿಯ ಮಾರುಕಟ್ಟೆ ಪಾಲು ಕಳೆದ ತಿಂಗಳು 2.4%ನಷ್ಟಿದೆ. ಕಂಪನಿಯು ಮಾರ್ಚ್ ತಿಂಗಳಿನಲ್ಲಿ ದೇಶದ ಎಂಟನೇ ಅತಿ ಹೆಚ್ಚು ಮಾರಾಟವಾದ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಮಾರಾಟದಲ್ಲಿ ಕಂಪನಿಯು ಹೋಂಡಾ, ಎಂಜಿ ಮೋಟಾರ್, ನಿಸ್ಸಾನ್, ಫೋಕ್ಸ್‌ವ್ಯಾಗನ್, ಎಫ್‌ಸಿಎ ಹಾಗೂ ಸ್ಕೋಡಾ ಕಂಪನಿಗಳಿಗಿಂತ ಮುಂದಿದೆ.

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಫೋರ್ಡ್ ಇಕೋಸ್ಪೋರ್ಟ್ ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕಂಪನಿಯು ಟೇಲ್‌ಗೇಟ್ ಮೌಂಟೆಡ್ ವ್ಹೀಲ್ ಅನ್ನು ತೆಗೆದುಹಾಕಿ ಹೊಸ ಫೀಚರ್'ಗಳೊಂದಿಗೆ ಇಕೋಸ್ಪೋರ್ಟ್‌ನ ಹೊಸ ಎಸ್‌ಇ ಮಾದರಿಯನ್ನು ಬಿಡುಗಡೆಗೊಳಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಫೋರ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್‌ಗೆ ಪೈಪೋಟಿ ನೀಡಲು ಫೋರ್ಡ್ ಎಂಡೀವರ್ ಎಸ್‌ಯು‌ವಿಯನ್ನು ಹೊಂದಿದೆ. ಇದರ ಜೊತೆಗೆ ಫಿಗೊ ಹ್ಯಾಚ್‌ಬ್ಯಾಕ್ ಹಾಗೂ ಆಸ್ಪೈರ್ ಸಬ್ ಫೋರ್ ಮೀಟರ್ ಸೆಡಾನ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ.

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಹೊಸ ಫೋರ್ಡ್ ಇಕೋಸ್ಪೋರ್ಟ್ ಎಸ್ಇ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ಎಂಜಿನ್ ಆವೃತ್ತಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.10.49 ಲಕ್ಷಗಳಾದರೆ, ಡೀಸೆಲ್ ಎಂಜಿನ್ ಆವೃತ್ತಿಯ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.10.99 ಲಕ್ಷಗಳಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಾರ್ಚ್ ತಿಂಗಳಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಯುನಿಟ್ ವಾಹನಗಳನ್ನು ಮಾರಾಟ ಮಾಡಿದ ಫೋರ್ಡ್ ಇಂಡಿಯಾ

ಕಂಪನಿಯು ಇತ್ತೀಚೆಗೆ ಏಪ್ರಿಲ್ ತಿಂಗಳಿನಿಂದ ತನ್ನ ವಾಹನಗಳ ಬೆಲೆಯನ್ನು 3%ನಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು. ಆದರೆ ಸದ್ಯಕ್ಕೆ ಕಂಪನಿಯು ಯಾವುದೇ ವಾಹನಗಳ ಬೆಲೆಯನ್ನು ಬಹಿರಂಗಪಡಿಸಿಲ್ಲ.

Most Read Articles

Kannada
English summary
Ford India sold more than 7000 unit vehicles in March 2021. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X