ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

ಅಮೆರಿಕಾ ಮೂಲದ Ford Motor ಕಂಪನಿಯು ಸುಮಾರು 2 ಶತಕೋಟಿ ಡಾಲರ್‌ಗಳಷ್ಟು ನಷ್ಟವಾದ ಕಾರಣ ಹಾಗೂ ಮಾರಾಟವು ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿನ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. Ford Motor ಕಂಪನಿಯ ಈ ನಿರ್ಧಾರವು 4000 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

ಭಾರತದಲ್ಲಿ ಮಾರಾಟವಾಗುವ ತನ್ನ ಜನಪ್ರಿಯ ಮಾದರಿಗಳಾದ Ford Figo, Ford Freestyle ಕಾರುಗಳ ಉತ್ಪಾದನೆಯನ್ನು ತ್ವರಿತವಾಗಿ ಕಡಿಮೆ ಮಾಡುವುದಾಗಿ ಕಂಪನಿಯ ಟಾಪ್ ಮ್ಯಾನೇಜ್ ಮೆಂಟ್ ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಭಾರತದಲ್ಲಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ Ford Motor ಕಂಪನಿಯ ಭಾರತೀಯ ಘಟಕವು ಈ ನಿರ್ಧಾರವನ್ನು ತೆಗೆದು ಕೊಂಡಿದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

Ford Motor ಕಂಪನಿಯು ಭಾರತದಲ್ಲಿ ಕಡಿಮೆ ಮಾರಾಟ ಪ್ರಮಾಣ, ರಫ್ತು ಹಾಗೂ ಹೊಸ ಉತ್ಪನ್ನಗಳ ಕೊರತೆಯಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. Ford Motor ಕಂಪನಿಯು 2017 ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ General Motors ಕಂಪನಿಯ ಹಾದಿಯನ್ನು ಹಿಡಿಯುತ್ತಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

Ford ಕಂಪನಿಯು ಭಾರತದಲ್ಲಿ ತನ್ನ ಉತ್ಪನ್ನಗಳ ಸೇವೆಯನ್ನು ಮುಂದುವರಿಸಲಿದೆ. Ford Motor ಕಂಪನಿಯು ಭಾರತದಲ್ಲಿ ತನ್ನ Ford Mustang ಹಾಗೂ Ford Endeavour ಕಾರುಗಳ ಮಾರಾಟವನ್ನು ಸ್ಟಾಕ್ ಇರುವವರೆಗೂ ಮುಂದುವರೆಸುವುದಾಗಿ ತಿಳಿಸಿದೆ. ಕಂಪನಿಯು ಕಳೆದ ಒಂದೆರಡು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ 1 ಬಿಲಿಯನ್ ಡಾಲರ್ ನಿಂದ 1.5 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

ಭವಿಷ್ಯದ ಕಾರ್ಯಾಚರಣೆಯನ್ನು ಸ್ವತಂತ್ರವಾಗಿ ಉಳಿಸಿಕೊಳ್ಳುವುದು ಅಸಾಧ್ಯವೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದು ಕೊಂಡಿದೆ. Ford ಕಂಪನಿಯ ಚೆನ್ನೈ ಉತ್ಪಾದನಾ ಘಟಕವು ಇನ್ನೂ ಕೆಲವು ತಿಂಗಳವರೆಗೆ ಮುಂದುವರೆಯಲಿದೆ. Ford Motor ಕಂಪನಿಯು ತನ್ನ ಎರಡೂ ಉತ್ಪಾದನಾ ಘಟಕಗಳನ್ನು ಖರೀದಿಸುವವರಿಗಾಗಿ ಶೋಧ ನಡೆಸುತ್ತಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

Ford ಕಂಪನಿಯು 10% ಗಿಂತ ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸನಂದ್ ಉತ್ಪಾದನಾ ಘಟಕವನ್ನು ಮೊದಲು ಮುಚ್ಚುವ ಸಾಧ್ಯತೆಗಳಿವೆ. 2022 ರ ಎರಡನೇ ತ್ರೈ ಮಾಸಿಕದ ನಂತರ ಚೆನ್ನೈ ಉತ್ಪಾದನಾ ಘಟಕವನ್ನು ಸಹ ಸ್ಥಗಿತಗೊಳಿಸಲಾಗುವುದು ಎಂದು ತಿಳಿದು ಬಂದಿದೆ. ಇದಾದ ನಂತರ Ford ಕಂಪನಿಯು ಭಾರತದಲ್ಲಿ ಯಾವುದೇ ಹೊಸ ಕಾರುಗಳನ್ನು ಉತ್ಪಾದಿಸುವುದಿಲ್ಲ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

ಕಂಪನಿಯು ಭಾರತದಲ್ಲಿ ಪ್ರಮುಖ ಮಾದರಿಗಳ ಕಂಪ್ಲೀಟ್ಲಿ ನಾಕ್ ಡೌನ್ ಅಥವಾ ಕಂಪ್ಲೀಟ್ಲಿ ಬಿಲ್ಟ್ ಕಾರುಗಳೊಂದಿಗೆ ಕಾರ್ಯಾಚರಣೆ ಮುಂದುವರೆಸಲಿದೆ. ಇದರ ಜೊತೆಗೆ ಕಂಪನಿಯು ಈಗ ಅಸ್ತಿತ್ವದಲ್ಲಿರುವ ತನ್ನ ಗ್ರಾಹಕರಿಗೆ ಸೇವೆ ನೀಡುವುದನ್ನು ಮುಂದುವರೆಸಲಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

Ford ಬಿಸಿನೆಸ್ ಸೆಂಟರ್ ಹಾಗೂ ಜಾಗತಿಕ ಕಾರ್ಯಾಚರಣೆಯನ್ನು ಪೂರೈಸುವ ಉತ್ಪನ್ನ ಅಭಿವೃದ್ಧಿ ಕೇಂದ್ರವು ತನ್ನ ಕಾರ್ಯಾಚರಣೆಯನ್ನು ಮುಂದುವರೆಸಲಿದೆ. ಜಾಗತಿಕ ಕಾರ್ಯಾಚರಣೆಗಾಗಿ ಮಧ್ಯಮ ಗಾತ್ರದ ಪ್ಯಾಂಥರ್ ಎಂಜಿನ್‌ಗಳನ್ನು ಉತ್ಪಾದಿಸುವ ಎಂಜಿನ್ ಘಟಕವು ಸಹ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಲಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

Mahindra and Mahindra ಕಂಪನಿಯ ಜೊತೆಗಿನ Ford ಕಂಪನಿಯ ಜಂಟಿ ಸಹಭಾಗಿತ್ವವು ಕೊನೆಯಾದಾಗಿನಿಂದಲೂ Ford ಕಂಪನಿಯು ಭಾರತದಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿತ್ತು. ಕಂಪನಿಯು ಭಾರತದಲ್ಲಿ ಹೊಸ ಪಾಲುದಾರರ ಜೊತೆಗೂಡಿ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಈ ವರ್ಷದ ಆರಂಭದಲ್ಲಿ ತಿಳಿಸಿತ್ತು.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

ಈ ನಡುವೆ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇಂದು Ford ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

Ford ಕಂಪನಿಯು ತನ್ನ Ecosport ಎಸ್‌ಯು‌ವಿಯ ಫೇಸ್‌ಲಿಫ್ಟ್‌ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಗಳಾಗಿದ್ದವು. Ford Figo ಆಟೋಮ್ಯಾಟಿಕ್ ಆವೃತ್ತಿಯ ಟಿವಿಸಿಯನ್ನು ಇತ್ತೀಚಿಗಷ್ಟೇ ಬಿಡುಗಡೆಗೊಳಿಸಲಾಗಿತ್ತು. ಆದರೆ ಹೂಡಿಕೆ ದೃಷ್ಟಿಯಲ್ಲಿ ಭಾರತವು Ford ಕಂಪನಿಗೆ ಲಾಭದಾಯಕವಲ್ಲ ಎಂದು ಸ್ಪಷ್ಟವಾದ ನಂತರ ಕಂಪನಿಯು ಈ ನಿರ್ಧಾರವನ್ನು ಕೈಗೊಂಡಿದೆ.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆ ಮಾತನಾಡಿದ Ford Motor ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಜಿಮ್ ಫರ್ಲೆ, ಭಾರತದಲ್ಲಿಗಮನಾರ್ಹ ಪ್ರಮಾಣದಲ್ಲಿ ಹೂಡಿಕೆ ಮಾಡಿದರೂ, Ford ಕಂಪನಿಯು ಕಳೆದ 10 ವರ್ಷಗಳಲ್ಲಿ 2 ಬಿಲಿಯನ್‌ ಡಾಲರ್ ಗಿಂತಲೂ ಹೆಚ್ಚು ನಷ್ಟವನ್ನು ಅನುಭವಿಸಿದೆ. ಹೊಸ ವಾಹನಗಳಿಗೂ ಬೇಡಿಕೆ ಕಡಿಮೆಯಾಗಿದೆ. Ford ಕಂಪನಿಯು ಭಾರತದಲ್ಲಿ ಈಗ ಇರುವ ಗ್ರಾಹಕರಿಗೆ ತನ್ನ ಸೇವೆ ನೀಡುವುದನ್ನು ಮುಂದುವರಿಸುತ್ತದೆ. ಜೊತೆಗೆ Ford ಬಿಸಿನೆಸ್ ಸೊಲ್ಯೂಷನ್ಸ್ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಎಂದು ಹೇಳಿದರು.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

Mahindra and Mahindra ಹಾಗೂ Ford ಕಂಪನಿಗಳು 2017 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಮೂಲಕ ಎರಡು ಕಂಪನಿಗಳು ವಿಲೀನಗೊಂಡವು. ತಂತ್ರಜ್ಞಾನ, ಎಂಜಿನ್, ಸಂಪರ್ಕ, ಎಲೆಕ್ಟ್ರಿಕ್ ವಾಹನ ಸೇರಿದಂತೆ ಹಲವು ವಿಭಾಗಗಳಲ್ಲಿ ಪರಸ್ಪರ ಹಂಚಿಕೊಳ್ಳಲು ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

ಈ ಒಪ್ಪಂದದ ಹಿನ್ನೆಲೆಯಲ್ಲಿ ಎರಡು ಕಂಪನಿಗಳ ನಡುವೆ 5 ವರ್ಷಗಳ ಕಾಲ ವಿವಿಧ ತಾಂತ್ರಿಕ ವಿನಿಮಯಗಳು ಸರಾಗವಾಗಿ ನಡೆದವು. ಈ ನಡುವೆ ಎರಡು ಕಂಪನಿಗಳು ಕೆಲವು ವಿತರಣೆಗಳನ್ನು ನಿಲ್ಲಿಸಿದ್ದವು. ಆದರೆ ಎಂಜಿನ್ ಹಾಗೂ ಸಂಪರ್ಕ ತಂತ್ರಜ್ಞಾನದಂತಹ ಇತರ ವಿನಿಮಯಗಳು ಮುಂದುವರೆದಿದ್ದವು.

ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor

ಕೆಲವು ದಿನಗಳ ಹಿಂದೆ ಎಂಜಿನ್ ವಿನಿಮಯವನ್ನು ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು Ford ಕಂಪನಿ ತಿಳಿಸಿತ್ತು. ತನ್ನ ಎರಡು ವಾಹನಗಳ ಬಿಡುಗಡೆಯನ್ನು ಸ್ಥಗಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ Ford ಕಂಪನಿಯು ಈ ನಿರ್ಧಾರವನ್ನು ಕೈಗೊಂಡಿತ್ತು ಎಂದು ಹೇಳಲಾಗಿತ್ತು.

Most Read Articles

Kannada
Read more on ಫೋರ್ಡ್ ford
English summary
Ford motor to shut down its operations in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X