ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಅದೊಂದು ಕಾಲದಲ್ಲಿ ಕಾರು ಎಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಮೊದಲಿಗೆ ಬರುವುದು ಅಂಬಾಸಿಡರ್ ಕಾರು. ಸರಿಸುಮಾರು 50ಕ್ಕಿಂತ ಹೆಚ್ಚು ವರ್ಷಗಳ ಕಾಲ ಭಾರತದ ರಸ್ತೆಗಳಲ್ಲಿ ರಾಜನಾಗಿ ಮೆರೆದಿರುವ ಐತಿಹಾಸಿಕ ಕಾರು ಇದಾಗಿದೆ.

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಅಂಬಾಸಿಡರ್ ಕಾರು ಇಂದಿಗೂ ಭಾರತೀಯರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಅಂಬಾಸಿಡರ್ ಕಾರು ಕಾರಿನ ಜೊತೆ ಹಲವರು ಭಾವನಾತ್ಮಕ ನಂಟನ್ನು ಕೂಡ ಹೊಂದಿದ್ದಾರೆ. ಇನ್ನು ಹಿಂದಿನ ಕಾಲದ ಚಲನಚಿತ್ರಗಳಲ್ಲಿ ಹೀರೋನಿಂದ ಹಿಡಿದು ವಿಲನ್ ಎಲ್ಲರೂ ಅಂಬಾಸಿಡರ್ ಕಾರನ್ನು ಬಳಸುತ್ತಿದ್ದರು. ಅಲ್ಲದೇ ರಾಜಕೀಯ ಗಣ್ಯರಿಗೂ ಅಂಬಾಸಿಡರ್ ಕಾರು ಅಚ್ಚುಮೆಚ್ಚಾಗಿತ್ತು,

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಪ್ರಧಾನಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿ ಹಾಗೂ ಮಂತ್ರಿಗಳು, ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳನ್ನೆಲ್ಲಾ ಕರೆದೊಯ್ಯುತ್ತಿದ್ದುದು ಇದೇ ಅಂಬಾಸಿಡರ್ ಆಗಿತ್ತು. ಹಲವು ದಶಕಗಳ ಕಾಲ ಅಂಬಾಸಿಡರ್ ಭಾರತದ ಮೊದಲ ಪ್ರಜೆ ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ವರ್ಗದ ಜನರ ಮೆಚ್ಚಿನ ಕಾರು ಆಗಿತ್ತು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಅಂಬಾಸಿಡರ್ ಕಾರು 1958 ರಿಂದ 2014 ರವರೆಗೆ ಉತ್ಪಾದನೆಯಲ್ಲಿತ್ತು. ಭಾರತದಲ್ಲಿ ಅಂಬಾಸಿಡರ್ ಕಾರನ್ನು ಸ್ಥಗಿತಗೊಳಿಸಿದ್ದರು ಇನ್ನು ಕೂಡ ದೊಡ್ಡ ಅಬಿಮಾನಿ ವರ್ಗವನ್ನು ಹೊಂದಿದೆ. ಇಂದಿಗೂ ರಸ್ತೆಯಲ್ಲಿ ಅಪರೂಪಕ್ಕೆ ಕಾಣಲು ಸಿಗುತ್ತದೆ.

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಕೇರಳ ಮೂಲದ ಜಿನಿಲ್ ಜಾನ್ಸನ್ ಅವರು ಅದೇ ಹಿಂದಿನ ವೈಭವಕ್ಕೆ ಸುಂದರವಾಗಿ ಅಂಬಾಸಿಡರ್ ಕಾರು ಪುನರ್ಜೀವನ ಅಥವಾ ರಿ-ಸ್ಟೋರ್ ಮಾಡಿದ್ದಾರೆ. ಈ ವಾಹನವು ನೀಲಿ ಬಣ್ಣವನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಸಾಕಷ್ಟು ಕ್ರೋಮ್ ಅಂಶಗಳನ್ನು ನೀಡಿದ್ದಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಮುಂಭಾಗದ ಬಂಪತ್ ನಲ್ಲಿ ಲೈಟ್ ಅನ್ನು ಅಳವಡಿಸಲಾಗಿದ್ದು, ಮುಂಭಾಗದ ಗ್ರಿಲ್, ಹೆಡ್‌ಲ್ಯಾಂಪ್‌ಗಳು ಮತ್ತು ಟರ್ನ್ ಇಂಡಿಕೇಟರ್ ಅನ್ನು ನೀಡಿದೆ. ವಾಹನವು ನೀಲಿ ಬಣ್ಣದ ಸ್ಟೀಲ್ ವ್ಹೀಲ್ ಅನ್ನು ಪಡೆದುಕೊಂಡಿದೆ. ಇದರಲ್ಲಿ ಕ್ರೋಮ್ ವೀಲ್ ಕ್ಯಾಪ್ಸ್ ಮತ್ತು ವೈಟ್‌ವಾಲ್ ಟೈರ್‌ಗಳಿವೆ.

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಇನ್ನು ಈ ಅಂಬಾಸಿಡರ್ ಕಾರಿನ ಒಳಭಾಗದ ಡ್ಯಾಶ್‌ಬೋರ್ಡ್ ಅದರ ಮೂಲ ವಿನ್ಯಾಸವನ್ನು ಹೊಂದಿದೆ. ಎಲ್ಲಾ ಡಯಲ್‌ಗಳು ಮತ್ತು ಸ್ವಿಚ್‌ಗಳೊಂದಿಗೆ ಸೆಂಟರ್ ಕನ್ಸೋಲ್‌ನಲ್ಲಿರುತ್ತದೆ. ಸ್ಟೀಯರಿಂಗ್ ವ್ಹೀಲ್ ಮೂಲ ವಿನ್ಯಾಸವನ್ನು ಹೊಂದಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಸ್ಟೀಯರಿಂಗ್ ವ್ಹೀಲ್ ಕೆಳಭಾಗದಲ್ಲಿ ಗೇರ್ ಲೀವರ್ ಗಳಿವೆ. ಹೆಡ್‌ಲೈನರ್, ಡೋರ್ ಪ್ಯಾಡಿಂಗ್, ಇತ್ಯಾದಿಗಳೆಲ್ಲವೂ ಕಸ್ಟಮೈಸ್ ಮಾಡಲಾಗಿದೆ. ಇನ್ನು ಇದರಲ್ಲಿ ಬಿಎಂಸಿ ಮೂಲದ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಇದು ಇನ್ ಲೈನ್ -4, ಕಾರ್ಬ್ಯುರೇಟೆಡ್ ಪವರ್ ಪ್ಲಾಂಟ್ ಎಂಜಿನ್ 55 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಹಿಂದಿನ ಚಕ್ರಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಈ ಅಂಬಾಸಿಡರ್ ಕಾರು ಆಕರ್ಷಕವಾಗಿ ಕ್ಲಾಸಿಕ್ ಲುಕ್ ಅನ್ನು ಹೊಂದಿದೆ. ಇದರಲ್ಲಿ ಅಂಬಾಸಿಡರ್ ಮೂಲ ಮಾದರಿಯನ್ನು ಕಪಾಡಿಕೊಂಡಿದೆ. ಇನ್ನು ಅಂಬಾಸಿಡರ್ ಕಾರು ಎಲೆಕ್ಟ್ರಿಕ್ ಅವೃತ್ತಿಯಲ್ಲಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಸುದ್ದಿಯು ಹರಿದಾಟುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಗತ ವೈಭವದಲ್ಲಿ ಮಿಂಚುತ್ತಿದೆ 1965ರ ಮಾಡೆಲ್ ಅಂಬಾಸಿಡರ್ ಕಾರು

ಆದರೆ ಭಾರತೀಯರ ಮನದಲ್ಲಿ ಇವತ್ತಿಗೂ ಈ ಕಾರು ಅಚ್ಚಳಿಯದೇ ಉಳಿದಿರುವುದಂದು ಸತ್ಯ. ಇಂದಿಗೂ ಕೂಡ ಅಂಬಾಸಿಡರ್ ಕಾರುಗಳನ್ನು ಟ್ಯಾಕ್ಸಿಗಳ ರೂಪದಲ್ಲಿ ರೈಲ್ವೇ ನಿಲ್ದಾಣಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

Image Courtesy: JINIL JOHNSON

Most Read Articles

Kannada
English summary
Check Out This Beautiful Restomodded 1965 Hindustan Ambassador. Read In Kannada.
Story first published: Friday, February 12, 2021, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X