ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಇಂಡಿಯಾ ಕಂಪನಿಯು ಹೊಸ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತು. ಈ ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನಲ್ಲಿ ಸ್ಟೈಲಿಂಗ್ ನಲ್ಲಿ ಕೆಲವು ನವೀಕರಣಗಳನ್ನು ನಡೆಸಿದ್ದರು.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಇದೀಗ ಹೋಂಡಾ ಕಂಪನಿಯು ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿಗಾಗಿ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಒಟ್ಟು ರೂ.32,527 ವರೆಗೆ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ರೂ.15,000 ವರೆಗೆ ನಗದು ರಿಯಾಯಿತಿ ಮತ್ತು ಹೆಚ್ಚುವರಿಯಾಗಿ, ಗ್ರಾಹಕರು ತಮ್ಮ ಹಳೆಯ ಕಾರನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು ರೂ,15,000 ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಇದರೊಂದಿಗೆ ರೂ.17,527 ಗಳ ಮೌಲ್ಯದ ಉಚಿತ ಅಕೆಸರಿಸ್ ಅನ್ನು ಕೂಡ ನೀಡುತ್ತಿದೆ. ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

2020ರ ಹೋಂಡಾ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್‌ ವಿನ್ಯಾಸದ ಬಗ್ಗೆ ಹೇಳುವುದಾದರೆ, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪೊಸಿಷನ್ ಲ್ಯಾಂಪ್‌ಗಳಿವೆ. ಹಿಂಭಾಗದಲ್ಲಿ, ಡಬ್ಲ್ಯುಆರ್-ವಿ ಫೇಸ್ ಲಿಫ್ಟ್ ಸುಧಾರಿತ ಸಿ-ಆಕಾರದ ಎಲ್ಇಡಿ ರೇರ್ ಫಾಗ್‍ ಲ್ಯಾಂಪ್‍‍ಗಳನ್ನು ಒಳಗೊಂಡಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಫೇಸ್‍‍ಲಿಫ್ಟ್ ಆವೃತ್ತಿಯಲ್ಲಿ ಬಿ‍ಎಸ್-6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. 2020ರ ಹೋಂಡಾ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್‌ ಹೊಸ ವಿನ್ಯಾಸ ಹಾಗೂ ಫೀಚರ್‍‍ಗಳನ್ನು ಸಹ ನವೀಕರಿಸಲಾಗಿದೆ.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಆವೃತ್ತಿಯನ್ನು 1.2 ಲೀಟರಿನ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಬಿ‍ಎಸ್ 6 ಎಂಜಿನ್‍‍ ಆಯ್ಕೆಗಳನ್ನು ಹೊಂದಿದೆ. ಹಳೆಯ ತಲೆಮಾರಿನ ಕಾರಿನಂತೆ ಫೇಸ್‍‍ಲಿಫ್ಟ್ ಕಾರಿನಲ್ಲಿಯೂ ಸಹ 5-ಸ್ಪೀಡ್ ಹಾಗೂ 6-ಸ್ಪೀಡಿನ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಹೊಂದಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಇದರಲ್ಲಿ 1.2 ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 16.5 ಕಿ.ಮೀ ಮೈಲೇಜ್ ಅನ್ನು ನೀಡಲಾಗುತ್ತದೆ. ಇನ್ನು 1.5 ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 23.7 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಈ ಕಾರಿನ ಇಂಟಿರಿಯರ್ ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್‍‍‍ಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಹೋಂಡಾ ಡಬ್ಲ್ಯು‍ಆರ್-ವಿಯಲ್ಲಿರುವ ಎಲೆಕ್ಟ್ರಾನಿಕ್ ಸನ್‍‍ರೂಫ್ ಹಾಗೂ ಕ್ರೂಸ್ ಕಂಟ್ರೋಲ್‍‍ಗಳನ್ನು ಫೇಸ್‍‍ಲಿಫ್ಟ್ ಆವೃತ್ತಿಯಲ್ಲಿಯೂ ಸಹ ಇದನ್ನು ನೀಡಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಈ ಕಾರಿನಲ್ಲಿ ಒನ್-ಟಚ್ ಎಲೆಕ್ಟ್ರಿಕ್ ಸನ್‌ರೂಫ್ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, ಇಕೋ ಅಸಿಸ್ಟ್ ಆಂಬಿಡೆಂಟ್ ರಿಂಗ್ಸ್‌ನೊಂದಿಗೆ ಮಲ್ಟಿ ಇನ್ಫಾರ್ಮೇಶನ್ ಕಾಂಬೀಮೀಟರ್, ಹ್ಯಾಂಡ್‌ಫ್ರೀ ಮತ್ತು ಕ್ರೂಸ್ ಕಂಟ್ರೋಲ್ ಸ್ವಿಚ್‌ಗಳೊಂದಿಗೆ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀಯರಿಂಗ್ ವ್ಹೀಲ್ ಹೊಂದಿದೆ.

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಮಾದರಿಯು ಭಾರತದಲ್ಲಿ ಹೊಸ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್ ಮತ್ತು ಹ್ಯುಂಡೈ ವೆನ್ಯೂ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Enjoy Benefits On The Honda WR-V For March 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X